
ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ಹಾಗೂ APMC ತಿದ್ದುಪಡಿ ಕಾಯ್ದೆಗಳನ್ನ ವಿರೋಧಿಸಿ ರಾಜ್ಯದ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಗಿರೀಶ್ ಗೌಡ, ಕುರಬೂರು ಶಾಂತಕುಮಾರ್ ಹಾಗೂ ನಟ ಚೇತನರ ಜೊತೆ ಱಲಿಯಲ್ಲಿ ಹಲವು ಸಂಘಟನೆಗಳ ನೂರಾರು ಮಂದಿ ಪ್ರತಿಭಟನಾಕಾರರು ಸಹ ಭಾಗಿಯಾಗಿದ್ದಾರೆ. ಸುಮ್ಮನಹಳ್ಳಿ ಜಂಕ್ಷನ್ನಿಂದ ಶುರುವಾಗಿರುವ ಬಹೃತ ಪ್ರತಿಭಟನಾ ಜಾಥಾ ನಾಯಂಡಹಳ್ಳಿ, ಮೈಸೂರು ರಸ್ತೆ ಮುಖಾಂತರವಾಗಿ ಟೌನ್ ಹಾಲ್ಗೆ ತಲುಪಲಿದೆ. ಇಲ್ಲಿಯವರೆಗೆ ಪ್ರತಿಭಟನಾಕಾರರು ಬೈಕ್ ಱಲಿ ಮುಖಾಂತರ ತೆರಳಲಿದ್ದು ಬಳಿಕ ಅಲ್ಲಿಂದ ಕಾಲ್ನಡಿಗೆ ಮೂಲಕ ಮೈಸೂರು ಬ್ಯಾಂಕ್ ಸರ್ಕಲ್ ತಲುಪಿ ಅಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
ಈ ನಡುವೆ, ಪ್ರತಿಭಟನೆಯಲ್ಲಿ ಇನ್ನು ಕೆಲವರು ಭಾಗಿಯಾಗುವವರು ಬರಬೇಕಾಗಿದೆ. ಹಾಗಾಗಿ, 11.30ಕ್ಕೆ ಟೌನ್ ಹಾಲ್ನಿಂದ ಮೈಸೂರು ಬ್ಯಾಂಕ್ ಸರ್ಕಲ್ಗೆ ಱಲಿ ಹೊರಡಲಿದೆ. ಸದ್ಯ, KR ಮಾರುಕಟ್ಟೆ ಮೇಲಿನ ಬಾಲಗಂಗಾಧರನಾಥ ಸ್ವಾಮೀಜಿ ಫ್ಲೈಓವರ್ಗೆ ರೈತರ ಱಲಿ ತಲುಪಿದೆ ಎಂದು ತಿಳಿದುಬಂದಿದೆ.
Published On - 10:57 am, Mon, 28 September 20