ಕೆಲ್ಸ ಕೊಡಿ ಇಲ್ಲಾ ಜಮೀನು ವಾಪಸ್​ ಕೊಡಿ -ಏಷ್ಯನ್ ಪೈಂಟ್ ವಿರುದ್ಧ ಸಿಡಿದೆದ್ದ ರೈತರು

ಮೈಸೂರು: ಕೆಲಸ ನೀಡುವಂತೆ ಒತ್ತಾಯಿಸಿ ರೈತರು ಏಷ್ಯನ್ ಪೈಂಟ್ ಕಾರ್ಖಾನೆ ಬಳಿ ಪ್ರತಿಭಟನೆ ನಡೆಸಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಇಮ್ಮಾವು ಗ್ರಾಮದಲ್ಲಿ ನಡೆದಿದೆ. ನಿಮ್ಮ ಕಂಪನಿಯಲ್ಲಿ ಕೆಲಸ ಕೊಡಿ.. ಇಲ್ಲ ನಮ್ಮ ಭೂಮಿ‌ ವಾಪಸ್​ ಕೊಡಿ ಎಂದು ಪ್ರತಿಭಟನಾನಿರತ ರೈತರು ಒತ್ತಾಯಿಸಿದ್ದಾರೆ. ರೈತರು ಪ್ರತಿಭಟನೆಗೆ ಮುಂದಾಗಿದ್ದು ಯಾಕೆ? ಅಂದ ಹಾಗೆ, ಏಷ್ಯನ್ ಪೈಂಟ್ ಸಂಸ್ಥೆ ತನ್ನ ಕಾರ್ಖಾನೆಗಾಗಿ ರೈತರ ಭೂಮಿಯನ್ನು ಪಡೆದಿತ್ತು ಎಂದು ತಿಳಿದುಬಂದಿದೆ. ಕಂಪನಿ 94 ಕುಟುಂಬಗಳ ಒಟ್ಟು 127 ಎಕರೆ ಕೃಷಿ ಭೂಮಿಯನ್ನು […]

ಕೆಲ್ಸ ಕೊಡಿ ಇಲ್ಲಾ ಜಮೀನು ವಾಪಸ್​ ಕೊಡಿ -ಏಷ್ಯನ್ ಪೈಂಟ್ ವಿರುದ್ಧ ಸಿಡಿದೆದ್ದ ರೈತರು

Updated on: Nov 23, 2020 | 1:55 PM

ಮೈಸೂರು: ಕೆಲಸ ನೀಡುವಂತೆ ಒತ್ತಾಯಿಸಿ ರೈತರು ಏಷ್ಯನ್ ಪೈಂಟ್ ಕಾರ್ಖಾನೆ ಬಳಿ ಪ್ರತಿಭಟನೆ ನಡೆಸಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಇಮ್ಮಾವು ಗ್ರಾಮದಲ್ಲಿ ನಡೆದಿದೆ. ನಿಮ್ಮ ಕಂಪನಿಯಲ್ಲಿ ಕೆಲಸ ಕೊಡಿ.. ಇಲ್ಲ ನಮ್ಮ ಭೂಮಿ‌ ವಾಪಸ್​ ಕೊಡಿ ಎಂದು ಪ್ರತಿಭಟನಾನಿರತ ರೈತರು ಒತ್ತಾಯಿಸಿದ್ದಾರೆ.

ರೈತರು ಪ್ರತಿಭಟನೆಗೆ ಮುಂದಾಗಿದ್ದು ಯಾಕೆ?
ಅಂದ ಹಾಗೆ, ಏಷ್ಯನ್ ಪೈಂಟ್ ಸಂಸ್ಥೆ ತನ್ನ ಕಾರ್ಖಾನೆಗಾಗಿ ರೈತರ ಭೂಮಿಯನ್ನು ಪಡೆದಿತ್ತು ಎಂದು ತಿಳಿದುಬಂದಿದೆ. ಕಂಪನಿ 94 ಕುಟುಂಬಗಳ ಒಟ್ಟು 127 ಎಕರೆ ಕೃಷಿ ಭೂಮಿಯನ್ನು ಪಡೆದಿತ್ತು. ಜೊತೆಗೆ, 2300 ಕೋಟಿ ರೂಪಾಯಿ ವೆಚ್ಚದಲ್ಲಿ ಕಾರ್ಖಾನೆ ಸಹ ನಿರ್ಮಾಣ ಮಾಡಿತ್ತು. ಈ ವೇಳೆ ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋಗದ ಭರವಸೆ ಸಹ ನೀಡಿತ್ತು ಎಂದು ಹೇಳಲಾಗಿದೆ. ಆದರೆ, ಏಷ್ಯನ್ ಪೈಂಟ್ ಭರವಸೆ ಈಡೇರಿಸದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ರೈತರು ಕೂಡಲೇ ಭೂಮಿ ಕಳೆದುಕೊಂಡವರಿಗೆ ಕೆಲಸ ನೀಡುವಂತೆ ಪ್ರತಿಭಟನೆ ನಡೆಸಿದರು.

Published On - 1:13 pm, Mon, 23 November 20