ಸರ್ಕಾರದ್ದೇ ಕುಮ್ಮಕ್ಕು! ಲಸಿಕೆಯ ರಹಸ್ಯ ಕದಿಯಲು ಚೀನಾ, ರಷ್ಯಾ ಹ್ಯಾಕರ್​ಗಳ ಯತ್ನ

ಇಂಗ್ಲೆಂಡ್: ಚೀನಾ, ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾದ ಹ್ಯಾಕರ್​ಗಳು, ಕೊವಿಡ್ 19 ಲಸಿಕೆಯ ರಹಸ್ಯ ಮಾಹಿತಿಗಳನ್ನು ಕದಿಯಲು ಪ್ರಯತ್ನ ಪಡುತ್ತಿದ್ದಾರೆ. ವಿವಿಧ ಹಂತಗಳಲ್ಲಿರುವ ಕೊರೊನಾ ಲಸಿಕೆಯ ಪ್ರಯೋಗಗಳ ಫಲಿತಾಂಶ, ಲಸಿಕೆಗಳ ಬೃಹತ್​ ಪ್ರಮಾಣದ ಉತ್ಪಾದನೆಯ ಮಾಹಿತಿ ತಿಳಿಯುವ ಹುನ್ನಾರವನ್ನು ಕೆಲ ಹ್ಯಾಕರ್​ಗಳು ನಡೆಸುತ್ತಿದ್ದಾರೆ ಎಂದು ಇಂಗ್ಲೆಂಡ್​ನ ಸೈಬರ್​ ಸುರಕ್ಷಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ‘ಬೌದ್ಧಿಕ ಆಸ್ತಿ ಯುದ್ಧ’ ಎಂದು ಕರೆದಿರುವ ಅವರು, ಲಸಿಕೆಯು ಸರ್ಕಾರಗಳ ವಿವಿಧ ಪ್ರಾಧಿಕಾರಗಳಿಂದ ಅನುಮೋದನೆ ಪಡೆದು, ಸಾರ್ವಜನಿಕ ಬಳಕೆಗೆ ಲಭ್ಯವಾಗುವ ಸಂದರ್ಭದಲ್ಲಿ […]

ಸರ್ಕಾರದ್ದೇ ಕುಮ್ಮಕ್ಕು! ಲಸಿಕೆಯ ರಹಸ್ಯ ಕದಿಯಲು ಚೀನಾ, ರಷ್ಯಾ ಹ್ಯಾಕರ್​ಗಳ ಯತ್ನ
Follow us
ಸಾಧು ಶ್ರೀನಾಥ್​
|

Updated on: Nov 23, 2020 | 12:37 PM

ಇಂಗ್ಲೆಂಡ್: ಚೀನಾ, ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾದ ಹ್ಯಾಕರ್​ಗಳು, ಕೊವಿಡ್ 19 ಲಸಿಕೆಯ ರಹಸ್ಯ ಮಾಹಿತಿಗಳನ್ನು ಕದಿಯಲು ಪ್ರಯತ್ನ ಪಡುತ್ತಿದ್ದಾರೆ.

ವಿವಿಧ ಹಂತಗಳಲ್ಲಿರುವ ಕೊರೊನಾ ಲಸಿಕೆಯ ಪ್ರಯೋಗಗಳ ಫಲಿತಾಂಶ, ಲಸಿಕೆಗಳ ಬೃಹತ್​ ಪ್ರಮಾಣದ ಉತ್ಪಾದನೆಯ ಮಾಹಿತಿ ತಿಳಿಯುವ ಹುನ್ನಾರವನ್ನು ಕೆಲ ಹ್ಯಾಕರ್​ಗಳು ನಡೆಸುತ್ತಿದ್ದಾರೆ ಎಂದು ಇಂಗ್ಲೆಂಡ್​ನ ಸೈಬರ್​ ಸುರಕ್ಷಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ‘ಬೌದ್ಧಿಕ ಆಸ್ತಿ ಯುದ್ಧ’ ಎಂದು ಕರೆದಿರುವ ಅವರು, ಲಸಿಕೆಯು ಸರ್ಕಾರಗಳ ವಿವಿಧ ಪ್ರಾಧಿಕಾರಗಳಿಂದ ಅನುಮೋದನೆ ಪಡೆದು, ಸಾರ್ವಜನಿಕ ಬಳಕೆಗೆ ಲಭ್ಯವಾಗುವ ಸಂದರ್ಭದಲ್ಲಿ ಹ್ಯಾಕಿಂಗ್​ ಮೂಲಕ ಮಾಹಿತಿ ಕದಿಯುವ ಕೃತ್ಯಕ್ಕೆ ಹೊಸ ವೇಗ ದೊರೆತಿದೆ ಎಂದು ಹೇಳಿದ್ದಾರೆ.

ಲಸಿಕೆ ರೂಪುಗೊಳ್ಳಲು ಬಳಕೆಯಾಗುತ್ತಿರುವ ರಹಸ್ಯ ತಂತ್ರಗಳನ್ನು ಅರಿಯುವುದು ಈ ಹಿಂದೆ ಹ್ಯಾಕರ್​ಗಳ ಮುಖ್ಯ ಉದ್ದೇಶವಾಗಿತ್ತು. ಲಸಿಕೆಗಾಗಿ ಹಲವು ಔಷಧ ಕಂಪೆನಿಗಳು, ಸಂಶೋಧನಾ ಪ್ರಯೋಗಾಲಯಗಳು ಮತ್ತು ಆರೋಗ್ಯ ಕೇಂದ್ರಗಳು ಒಗ್ಗೂಡಿ ಕೆಲಸ ಮಾಡುತ್ತಿವೆ. ಹ್ಯಾಕರ್​ಗಳು ಇಂಥ ಸಂಸ್ಥೆಗಳನ್ನೂ ಒಂದೇ ಏಟಿಗೆ ಗುರಿ ಮಾಡಿಕೊಂಡಿದ್ದರು.

ಈ ಬಗ್ಗೆ ಮಾತನಾಡಿರುವ ಕ್ರೌಡ್​ಸ್ಟ್ರೈಕ್, IT ಭದ್ರತಾ ತಜ್ಞರ ತಂಡದ ಹಿರಿಯ ಉಪಾಧ್ಯಕ್ಷ ಆಡಮ್ ಮೇಯುರ್ಸ್, ಪಾಶ್ಚಾತ್ಯ ರಾಷ್ಟ್ರಗಳಿಂದ ಮಾಹಿತಿ ಕದಿಯುವ ಕೆಲಸದಲ್ಲಿ ರಷ್ಯಾ ಮತ್ತು ಚೀನಾದಂಥ ದೇಶಗಳು ಕಳೆದ 20 ವರ್ಷಗಳಿಂದಲೂ ತೊಡಗಿಸಿಕೊಂಡಿವೆ. ಆದರೆ ಕಳೆದ ಮಾರ್ಚ್​ನಿಂದ ಕೊವಿಡ್-19ರ ಬಗ್ಗೆ ಅವುಗಳು ಗಮನ ಕೇಂದ್ರೀಕರಿಸಿವೆ ಎಂದು ಹೇಳಿದ್ದಾರೆ.

ಬಹುಕಾಲದಿಂದ ನಡೆಯುತ್ತಿರುವ ಬೌದ್ಧಿಕ ಹಕ್ಕು ಸ್ವಾಮ್ಯ ಯುದ್ಧದ ಹೊಸ ಅಧ್ಯಾಯವೊಂದನ್ನು ಈಗ ನಾವು ಗಮನಿಸುತ್ತಿದ್ದೇವೆ. ಕೊವಿಡ್-19 ಲಸಿಕೆಯ ಯಶಸ್ವಿ ತಯಾರಿಯನ್ನು ಯಾವ ದೇಶ ಮೊದಲು ನಡೆಸುತ್ತದೆ ಎಂಬುದು ರಾಷ್ಟ್ರೀಯ ಘನತೆಯ ವಿಚಾರವಾಗಿ ಮಾರ್ಪಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ರಷ್ಯಾ, ಲಸಿಕೆ ರಹಸ್ಯಗಳನ್ನು ಹ್ಯಾಕಿಂಗ್ ನಡೆಸುತ್ತಿರುವ ಬಗ್ಗೆ ತನಗೆ ಮಾಹಿತಿಯೇ ಇಲ್ಲ ಎಂದು ಹೇಳಿದೆ. ಕೊವಿಡ್ ಲಸಿಕೆ ಸಂಶೋಧನೆಯಲ್ಲಿ ನಾವು ಮುಂದಿದ್ದೇವೆ. ಬೇರೆಯವರಿಂದ ಮಾಹಿತಿ ಕದಿಯುವ ಅಗತ್ಯವೇ ಇಲ್ಲ ಎಂದು ಚೀನಾ ಹೇಳಿಕೆ ಕೊಟ್ಟಿದೆ. ಸೈಬರ್ ಯುದ್ಧದಲ್ಲಿ ನಾವಿಲ್ಲ ಎಂದು ಇರಾನ್ ಹೇಳಿಕೊಂಡಿದೆ.

ಖೋ- ಖೋ ವಿಶ್ವಕಪ್: ಭಾರತ ಮಹಿಳಾ- ಪುರುಷ ತಂಡಗಳೇ ಚಾಂಪಿಯನ್ಸ್
ಖೋ- ಖೋ ವಿಶ್ವಕಪ್: ಭಾರತ ಮಹಿಳಾ- ಪುರುಷ ತಂಡಗಳೇ ಚಾಂಪಿಯನ್ಸ್
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ