ಅಪಾಯದ ಹೊಸ್ತಿಲಲ್ಲಿ.. ಅಮೆರಿಕನ್ನರು!

ಅಮೆರಿಕಾದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ನವೆಂಬರ್ ತಿಂಗಳು ಮುಗಿಯಲು ಇನ್ನೂ ಹತ್ತು ದಿನ ಇರುವಾಗಲೇ ವಿಜ್ಞಾನಿಗಳ ತಂಡ ಸ್ಫೋಟಕ ಮಾಹಿತಿಯೊಂದನ್ನು ಹೊರಹಾಕುವ ಮೂಲಕ ಅಪಾಯದ ಮುನ್ಸೂಚನೆ ನೀಡಿದೆ. ಅಮೆರಿಕಾದಲ್ಲಿ ಮಾರ್ಚ್ನಿಂದ ಅಕ್ಟೋಬರ್ ತನಕ ಪ್ರತಿ ತಿಂಗಳು ದಾಖಲಾದ ಸೋಂಕಿತರಿಗಿಂತ ಹೆಚ್ಚು ಸಂಖ್ಯೆಯ ಸೋಂಕಿತರು ನವೆಂಬರ್ನಲ್ಲಿ ಈಗಾಗಲೇ ಕಂಡುಬಂದಿದ್ದಾರೆ. ನವೆಂಬರ್ 1ರಿಂದ 22ರ ನಡುವೆ 3 ಮಿಲಿಯನ್ಗೂ ಅಧಿಕ ಮಂದಿ ಸೋಂಕಿಗೆ ತುತ್ತಾಗಿದ್ದಾರೆ ಎಂದು ಅಮೆರಿಕಾದ ಜಾನ್ಸ್ ಹಾಪ್ಕಿನ್ಸ್ ಯುನಿವರ್ಸಿಟಿ ಮಾಹಿತಿ […]

ಅಪಾಯದ ಹೊಸ್ತಿಲಲ್ಲಿ.. ಅಮೆರಿಕನ್ನರು!
ಪ್ರಾತಿನಿಧಿಕ ಚಿತ್ರ
Follow us
ಸಾಧು ಶ್ರೀನಾಥ್​
|

Updated on:Nov 23, 2020 | 1:23 PM

ಅಮೆರಿಕಾದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ನವೆಂಬರ್ ತಿಂಗಳು ಮುಗಿಯಲು ಇನ್ನೂ ಹತ್ತು ದಿನ ಇರುವಾಗಲೇ ವಿಜ್ಞಾನಿಗಳ ತಂಡ ಸ್ಫೋಟಕ ಮಾಹಿತಿಯೊಂದನ್ನು ಹೊರಹಾಕುವ ಮೂಲಕ ಅಪಾಯದ ಮುನ್ಸೂಚನೆ ನೀಡಿದೆ. ಅಮೆರಿಕಾದಲ್ಲಿ ಮಾರ್ಚ್ನಿಂದ ಅಕ್ಟೋಬರ್ ತನಕ ಪ್ರತಿ ತಿಂಗಳು ದಾಖಲಾದ ಸೋಂಕಿತರಿಗಿಂತ ಹೆಚ್ಚು ಸಂಖ್ಯೆಯ ಸೋಂಕಿತರು ನವೆಂಬರ್ನಲ್ಲಿ ಈಗಾಗಲೇ ಕಂಡುಬಂದಿದ್ದಾರೆ.

ನವೆಂಬರ್ 1ರಿಂದ 22ರ ನಡುವೆ 3 ಮಿಲಿಯನ್ಗೂ ಅಧಿಕ ಮಂದಿ ಸೋಂಕಿಗೆ ತುತ್ತಾಗಿದ್ದಾರೆ ಎಂದು ಅಮೆರಿಕಾದ ಜಾನ್ಸ್ ಹಾಪ್ಕಿನ್ಸ್ ಯುನಿವರ್ಸಿಟಿ ಮಾಹಿತಿ ನೀಡಿದೆ. ಪರೀಕ್ಷಾ ಪ್ರಮಾಣ ಹೆಚ್ಚಾಗಿರುವುದು ಇದಕ್ಕೆ ಕಾರಣ ಎಂಬ ಅಭಿಪ್ರಾಯ ಕೇಳಿಬರುತ್ತಿದೆಯಾದರೂ ಒಂದೇ ವಾರದಲ್ಲಿ ಸೋಂಕಿತರ ಸಂಖ್ಯೆ ಶೇಕಡಾ 25ರಷ್ಟು ಹೆಚ್ಚಾಗಿರುವುದು ಮತ್ತು 44 ರಾಜ್ಯಗಳಲ್ಲಿ ಲೆಕ್ಕಾಚಾರಕ್ಕಿಂತ ಶೇಕಡಾ 5ರಷ್ಟು ಅಧಿಕ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುತ್ತಿರುವುದು ಅಪಾಯಕಾರಿ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಕಂಡುಬರುತ್ತಿದೆ. ಇದು ವ್ಯವಸ್ಥೆಯ ಮೇಲೆ ಅಧಿಕ ಒತ್ತಡವನ್ನು ಉಂಟುಮಾಡುತ್ತಿದ್ದು ಆರೋಗ್ಯದ ವಿಚಾರದಲ್ಲಿ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ಕೆಲವು ಆಸ್ಪತ್ರೆಯ ಮುಖ್ಯಸ್ಥರು ಸಿಬ್ಬಂದಿಗಳ ಕೊರತೆ ಕುರಿತು ಈಗಾಗಲೇ ಅಮೆರಿಕಾದ ವೈದ್ಯಕೀಯ ಸಂಘಗಳನ್ನು ಎಚ್ಚರಿಸಿದ್ದು ಪರಿಸ್ಥಿತಿ ಹೀಗೇ ಮುಂದುವರೆದಲ್ಲಿ ಅತ್ಯಂತ ಕಟ್ಟ ದಿನಗಳನ್ನು ನೋಡಬೇಕಾಗಬಹುದು ಎಂದಿದ್ದಾರೆ.

ಇದು ಮನೆಯಲ್ಲೇ ಕುಳಿತು ಎಚ್ಚರಿಕೆ ತೆಗೆದುಕೊಳ್ಳಬೇಕಾದ ವರ್ಷವಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ನಿಮಗೆ ಸೋಂಕು ತಗುಲಬಹುದು ಅಥವಾ ನೀವು ಇನ್ನೊಬ್ಬರಿಗೆ ಸೋಂಕು ಹರಡಿಸಲು ಕಾರಣವಾಗಬಹುದು ಆದ್ದರಿಂದ ಮೈಮರೆಯುವುದು ಜೀವಕ್ಕೆ ಅಪಾಯ ಎಂದು ತಜ್ಞರು ಪದೇಪದೇ ಜನರನ್ನು ಎಚ್ಚರಿಸುತ್ತಿದ್ದಾರೆ. ಅಮೆರಿಕಾದಲ್ಲಿ ಇದುವರೆಗೂ 12.2 ಮಿಲಿಯನ್ಗೂ ಅಧಿಕ ಮಂದಿ ಸೋಂಕಿಗೆ ತುತ್ತಾಗಿದ್ದು 2,56,000ಕ್ಕೂ ಹೆಚ್ಚು ಜನರನ್ನು ಕೊರೊನಾ ಬಲಿಪಡೆದಿದೆ. ಅಮೆರಿಕನ್ನರಿಗೆ ಲಸಿಕೆ ಲಭ್ಯವಾಗುವ ನಿರೀಕ್ಷೆ ಇದೆಯಾದರೂ ಅದು ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರ ಉತ್ಪಾದನೆ ಆಗುವುದರಿಂದ ಅಪಾಯವನ್ನು ನಿರ್ಲಕ್ಷಿಸುವಂತಿಲ್ಲ ಎಂಬುದು ತಜ್ಞರ ಅಂಬೋಣ.

Published On - 1:20 pm, Mon, 23 November 20

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ