ರಾಮುಲು ಕಚೇರಿಯಲ್ಲಿ ಕೆಲ್ಸ ಮಾಡ್ತಿದ್ದ ಯುವತಿ ನೀರುಪಾಲು: ಮಗಳನ್ನೇ ಕೊಂದ ಪಾಪಿ ತಂದೆ?
ಬಳ್ಳಾರಿ: ಆರೋಗ್ಯ ಸಚಿವ ಶ್ರೀರಾಮುಲು ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ಬಂಡಿಹಟ್ಟಿ ಗ್ರಾಮದ ಬಳಿ ನೀರುಪಾಲಾಗಿದ್ದಾರೆ. 22 ವರ್ಷದ ಪಲ್ಲವಿಯನ್ನು ತಂದೆ ಸೂರಿ ಅಲಿಯಾಸ್ ಆಟೋ ಸೂರಿಯೇ ಕಾಲುವೆಗೆ ನೂಕಿ ಹತ್ಯೆಗೈದಿರುವ ಗಂಭೀರ ಆರೋಪ ಕೇಳಿಬಂದಿದೆ. ಅಲ್ಲದೆ, ಕಳೆದ ಮೂರು ವರ್ಷಗಳ ಹಿಂದೆ ಪತಿಯ ಕಿರುಕುಳಕ್ಕೆ ಬೇಸತ್ತು ಪತ್ನಿ ಶಾರದಾ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೆತ್ತಮಗಳನ್ನೇ ಕಾಲುವೆಗೆ ಹಾಕಿ ಕೊಂದ ಪಾಪಿ ತಂದೆ? ಮಗಳು ಪಲ್ಲವಿಯನ್ನು ಪುಸಲಾಯಿಸಿ ಕಾಲುವೆ ಬಳಿ ತಂದೆ ಸೂರಿ […]
ಬಳ್ಳಾರಿ: ಆರೋಗ್ಯ ಸಚಿವ ಶ್ರೀರಾಮುಲು ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ಬಂಡಿಹಟ್ಟಿ ಗ್ರಾಮದ ಬಳಿ ನೀರುಪಾಲಾಗಿದ್ದಾರೆ. 22 ವರ್ಷದ ಪಲ್ಲವಿಯನ್ನು ತಂದೆ ಸೂರಿ ಅಲಿಯಾಸ್ ಆಟೋ ಸೂರಿಯೇ ಕಾಲುವೆಗೆ ನೂಕಿ ಹತ್ಯೆಗೈದಿರುವ ಗಂಭೀರ ಆರೋಪ ಕೇಳಿಬಂದಿದೆ. ಅಲ್ಲದೆ, ಕಳೆದ ಮೂರು ವರ್ಷಗಳ ಹಿಂದೆ ಪತಿಯ ಕಿರುಕುಳಕ್ಕೆ ಬೇಸತ್ತು ಪತ್ನಿ ಶಾರದಾ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು.
ಹೆತ್ತಮಗಳನ್ನೇ ಕಾಲುವೆಗೆ ಹಾಕಿ ಕೊಂದ ಪಾಪಿ ತಂದೆ? ಮಗಳು ಪಲ್ಲವಿಯನ್ನು ಪುಸಲಾಯಿಸಿ ಕಾಲುವೆ ಬಳಿ ತಂದೆ ಸೂರಿ ಕರೆತಂದಿದ್ದರು. ಕಾಲುಗಳನ್ನು ಕಟ್ಟಿಹಾಕಿ ಹಾಡಹಗಲೇ ಮಗಳನ್ನು ಕಾಲುವೆಗೆ ನೂಕಿದ್ದಾನೆ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಕೌಲ್ ಬಜಾರ್ ಪೊಲೀಸರ ದೌಡಾಯಿಸಿದ್ದಾರೆ. ಸ್ಥಳೀಯ ಈಜುಗಾರರ ಜೊತೆ ಅಗ್ನಿಶಾಮಕ ಸಿಬ್ಬಂದಿ ಯುವತಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಆದ್ರೆ ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
Published On - 1:46 pm, Mon, 17 February 20