ಗೊರವನಹಳ್ಳಿ ಮಹಾಲಕ್ಷ್ಮಿ ಸನ್ನಿಧಿಗೆ ಹರಿದು ಬಂತು ಜಣ ಜಣ ಕಾಂಚಾಣ..

ಕೊರೊನಾ ಭೀತಿ ನಡುವೆಯೂ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಮಹಾಲಕ್ಷ್ಮಿಗೆ ಕಾಣಿಕೆ ಹಣ ಭರ್ಜರಿಯಾಗಿ ಹರಿದು ಬಂದಿದೆ. ದೇಗುಲದ 8 ಹುಂಡಿಗಳಲ್ಲಿ 49,89,780 ರೂ. ಕಾಣಿಕೆ ಸಂಗ್ರಹವಾಗಿದೆ.

ಗೊರವನಹಳ್ಳಿ ಮಹಾಲಕ್ಷ್ಮಿ ಸನ್ನಿಧಿಗೆ ಹರಿದು ಬಂತು ಜಣ ಜಣ ಕಾಂಚಾಣ..
ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ

Updated on: Dec 04, 2020 | 1:23 PM

ತುಮಕೂರು: ಕೊರೊನಾದಿಂದ ಹಳ್ಳ ಹಿಡಿದಿದ್ದ ಜನ ಜೀವನ ಈಗ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದೆ. ಲಸಿಕೆ ಸಿಗದಿದ್ದರೂ ಕೊರೊನಾ ವಿರುದ್ಧ ಹೋರಾಡುವ ಛಲವನ್ನು ಜನ ಕಲಿತಿದ್ದಾರೆ. ಇದಕ್ಕೆ ಪೂರಕವಾಗಿ ದೇವರ ಕೃಪ ಕಟಾಕ್ಷ ಬಯಸಿ ಜನ ಮತ್ತೆ ದೇವರುದಿಂಡಿರು ಅಂತಾ ದೇವರಿಗೆ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಜನ ದೇವರ ಸನ್ನಿಧಿಗೆ ಬರೋದು, ದೇವರಿಗೆ ಕಾಣಿಕೆ ಹಾಕುವುದು ಸಾಮಾನ್ಯವಾಗಿ ಕಂಡುಬರುತ್ತಿದೆ.

ಸುಮಾರು ಅರ್ಧ ಕೋಟಿ ರೂ ಕಾಣಿಕೆ 
ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಮಹಾಲಕ್ಷ್ಮಿಗೆ ಕಾಣಿಕೆ ಹಣ ಭರ್ಜರಿಯಾಗಿ ಹರಿದು ಬಂದಿದೆ. ದೇಗುಲದ 8 ಹುಂಡಿಗಳಲ್ಲಿ 49,89,780 ರೂ. ಕಾಣಿಕೆ ಸಂಗ್ರಹವಾಗಿದೆ.

ಜುಲೈ 8 ರಿಂದ ನವೆಂಬರ್ ಅಂತ್ಯದವರೆಗೆ ಬರೊಬ್ಬರಿ 50 ಲಕ್ಷ ರೂ ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾಗಿದೆ. ದೇವಸ್ಥಾನದ ಸಿಬ್ಬಂದಿ, ಅಧಿಕಾರಿಗಳು ಸೇರಿ ಒಟ್ಟು 70 ಜನರಿಂದ ಕಾಣಿಕ ಹಣ ಎಣಿಕೆ ಮಾಡಲಾಗಿದ್ದು ಈ ಕಾರ್ಯ ನಿನ್ನೆ ಪೂರ್ಣಗೊಂಡಿದೆ. ಕೊರೊನಾ ಹಿನ್ನೆಲೆಯಲ್ಲಿ ಮಾರ್ಚ್​ನಿಂದ ಜುಲೈ 8 ರವರೆಗೆ ದೇವಸ್ಥಾನದಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ಇರಲಿಲ್ಲ.