ಆಂಧ್ರ ಪೊಲೀಸರ ಕಾರ್ಯಾಚರಣೆ; ಸಿನಿಮೀಯ ರೀತಿ ಚೇಸ್ ಮಾಡಿ 6 ಆರೋಪಿಗಳ ಬಂಧನ

ಕೋಲಾರ: ಅಕ್ರಮವಾಗಿ ರಕ್ತಚಂದನ ಮರದ ತುಂಡು ಸಾಗಿಸ್ತಿದ್ದ ಕಾರಿನ ಮೇಲೆ ಆಂಧ್ರ ಪೊಲೀಸರು ಫೈರಿಂಗ್ ಮಾಡಿ ಆರೋಪಿಗಳನ್ನು ಬಂಧಿಸಿರುವ ಘಟನೆ ಕೋಲಾರ ಜಿಲ್ಲೆಯ ಬೆಳಗಾನಹಳ್ಳಿ ಗೇಟ್ ಬಳಿ ನಡೆದಿದೆ. ಆಂಧ್ರ ಪ್ರದೇಶದಿಂದ ಬೆಂಗಳೂರು ಕಡೆ ಹೊರಟಿದ್ದ ಇನ್ನೋವಾ ಹಾಗೂ ಮಾರುತಿ ಕಾರುಗಳನ್ನು ಆಂಧ್ರ ಪೊಲೀಸರು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿಕೊಂಡು ಬಂದು ಬೆಳಗಾನಹಳ್ಳಿ ಗೇಟ್ ಬಳಿ ಕಾರಿನ ಚಕ್ರಕ್ಕೆ ಗುಂಡು ಹೊಡೆಯುವ ಮೂಲಕ ಅಕ್ರಮವನ್ನು ತಡೆದಿದ್ದಾರೆ. ಈ ಸಂಬಂಧ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಹಾಗೂ ಬಂಧಿತರಿಂದ ಲಕ್ಷಾಂತರ […]

ಆಂಧ್ರ ಪೊಲೀಸರ ಕಾರ್ಯಾಚರಣೆ; ಸಿನಿಮೀಯ ರೀತಿ ಚೇಸ್ ಮಾಡಿ 6 ಆರೋಪಿಗಳ ಬಂಧನ
ರಕ್ತಚಂದನ ಸಾಗಿಸುತ್ತಿದ್ದ ಕಾರಿನ ಮೇಲೆ ಫೈರಿಂಗ್
Updated By: ಸಾಧು ಶ್ರೀನಾಥ್​

Updated on: Feb 01, 2021 | 11:50 AM

ಕೋಲಾರ: ಅಕ್ರಮವಾಗಿ ರಕ್ತಚಂದನ ಮರದ ತುಂಡು ಸಾಗಿಸ್ತಿದ್ದ ಕಾರಿನ ಮೇಲೆ ಆಂಧ್ರ ಪೊಲೀಸರು ಫೈರಿಂಗ್ ಮಾಡಿ ಆರೋಪಿಗಳನ್ನು ಬಂಧಿಸಿರುವ ಘಟನೆ ಕೋಲಾರ ಜಿಲ್ಲೆಯ ಬೆಳಗಾನಹಳ್ಳಿ ಗೇಟ್ ಬಳಿ ನಡೆದಿದೆ.

ಆಂಧ್ರ ಪ್ರದೇಶದಿಂದ ಬೆಂಗಳೂರು ಕಡೆ ಹೊರಟಿದ್ದ ಇನ್ನೋವಾ ಹಾಗೂ ಮಾರುತಿ ಕಾರುಗಳನ್ನು ಆಂಧ್ರ ಪೊಲೀಸರು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿಕೊಂಡು ಬಂದು ಬೆಳಗಾನಹಳ್ಳಿ ಗೇಟ್ ಬಳಿ ಕಾರಿನ ಚಕ್ರಕ್ಕೆ ಗುಂಡು ಹೊಡೆಯುವ ಮೂಲಕ ಅಕ್ರಮವನ್ನು ತಡೆದಿದ್ದಾರೆ.

ಈ ಸಂಬಂಧ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಹಾಗೂ ಬಂಧಿತರಿಂದ ಲಕ್ಷಾಂತರ ಮೌಲ್ಯದ ರಕ್ತಚಂದನ ವಶಕ್ಕೆ ಪಡೆಯಲಾಗಿದೆ. ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸಿನಿಮೀಯ ರೀತಿಯಲ್ಲಿ ಪೊಲೀಸ್ ಜೀಪ್ ಗುದ್ದಿ, ರಕ್ತಚಂದನ ಮರಗಳ್ಳರನ್ನ ಸೆರೆ ಹಿಡಿದ ಖಾಕಿ ಪಡೆ