ಸಿನಿಮೀಯ ರೀತಿಯಲ್ಲಿ ಪೊಲೀಸ್ ಜೀಪ್ ಗುದ್ದಿ, ರಕ್ತಚಂದನ ಮರಗಳ್ಳರನ್ನ ಸೆರೆ ಹಿಡಿದ ಖಾಕಿ ಪಡೆ

ಚಿಕ್ಕಬಳ್ಳಾಪುರ: ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರು ರಕ್ತಚಂದನ ಮರಗಳ್ಳರನ್ನ ಬಂಧಿಸಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ಯಶಸ್ವಿಯಾಗಿದೆ. ಕಾರಿನಲ್ಲಿ ರಕ್ತಚಂದನ ಮರದ ತುಂಡು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಚೇಸ್ ಮಾಡಿ ಕಾರಿಗೆ ಅಧಿಕಾರಿಗಳ ಜೀಪಿಂದ ಡಿಕ್ಕಿ ಹೊಡೆಸಿ ಸೆರೆಹಿಡಿಯಲಾಗಿದೆ. ಆರೋಪಿಗಳು ಕಾರಿನಲ್ಲಿ ಅಕ್ರಮವಾಗಿ ರಕ್ತಚಂದನವನ್ನು ಆಂಧ್ರದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದರು. ಈ ವೇಳೆ ದೊಡ್ಡಪೈಯಲಗುರ್ಕಿಯಿಂದ ಆರೋಪಿಗಳ ಕಾರನ್ನು ಪೊಲೀಸ್ ಜೀಪ್ ಚೇಸ್ ಮಾಡಿದೆ. ಚಿಕ್ಕಬಳ್ಳಾಪುರವರೆಗೂ ಕಾರು ಚೇಸ್ ಮಾಡಿದ್ದ ಅಧಿಕಾರಿಗಳು ಕಾರು ನಿಲ್ಲಿಸುವಂತೆ […]

ಸಿನಿಮೀಯ ರೀತಿಯಲ್ಲಿ ಪೊಲೀಸ್ ಜೀಪ್ ಗುದ್ದಿ, ರಕ್ತಚಂದನ ಮರಗಳ್ಳರನ್ನ ಸೆರೆ ಹಿಡಿದ ಖಾಕಿ ಪಡೆ
Edited By:

Updated on: Oct 22, 2020 | 3:23 PM

ಚಿಕ್ಕಬಳ್ಳಾಪುರ: ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರು ರಕ್ತಚಂದನ ಮರಗಳ್ಳರನ್ನ ಬಂಧಿಸಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ಯಶಸ್ವಿಯಾಗಿದೆ. ಕಾರಿನಲ್ಲಿ ರಕ್ತಚಂದನ ಮರದ ತುಂಡು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಚೇಸ್ ಮಾಡಿ ಕಾರಿಗೆ ಅಧಿಕಾರಿಗಳ ಜೀಪಿಂದ ಡಿಕ್ಕಿ ಹೊಡೆಸಿ ಸೆರೆಹಿಡಿಯಲಾಗಿದೆ.

ಆರೋಪಿಗಳು ಕಾರಿನಲ್ಲಿ ಅಕ್ರಮವಾಗಿ ರಕ್ತಚಂದನವನ್ನು ಆಂಧ್ರದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದರು. ಈ ವೇಳೆ ದೊಡ್ಡಪೈಯಲಗುರ್ಕಿಯಿಂದ ಆರೋಪಿಗಳ ಕಾರನ್ನು ಪೊಲೀಸ್ ಜೀಪ್ ಚೇಸ್ ಮಾಡಿದೆ. ಚಿಕ್ಕಬಳ್ಳಾಪುರವರೆಗೂ ಕಾರು ಚೇಸ್ ಮಾಡಿದ್ದ ಅಧಿಕಾರಿಗಳು ಕಾರು ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಆರೋಪಿಗಳು ಕಾರು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾರೆ.

ಈ ವೇಳೆ ಆರೋಪಿಗಳ ಕಾರಿಗೆ ಪೊಲೀಸ್ ಜೀಪ್ ಗುದ್ದಿಸಿ ಇಬ್ಬರನ್ನು ಬಂಧಿಸಿಲಾಗಿದೆ. ಪೊಲೀಸರು 20 ಲಕ್ಷ ರೂ. ಮೌಲ್ಯದ ರಕ್ತಚಂದನ ಮರದ ತುಂಡುಗಳನ್ನು ಜಪ್ತಿ ಮಾಡಿದ್ದಾರೆ. ಇನ್ನು ಅಪಘಾತದಲ್ಲಿ ಒಬ್ಬ ಆರೋಪಿಗೆ ಗಾಯಗಳಾಗಿದ್ದು ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಬಚಾವ್ ಆಗಿದ್ದಾರೆ.

Published On - 2:05 pm, Thu, 22 October 20