ನೆಚ್ಚಿನ ವಾನರನ ಸಾವಿನಿಂದ ಪರಿತಪಿಸುತ್ತಿದ್ದ ಸಾರಾ, ಚಿಂಟು ಮಂದಿರ ನಿರ್ಮಿಸಿಯೇ ಬಿಟ್ಟರು!

  • TV9 Web Team
  • Published On - 12:41 PM, 7 Feb 2020
ನೆಚ್ಚಿನ ವಾನರನ ಸಾವಿನಿಂದ ಪರಿತಪಿಸುತ್ತಿದ್ದ ಸಾರಾ, ಚಿಂಟು ಮಂದಿರ ನಿರ್ಮಿಸಿಯೇ ಬಿಟ್ಟರು!

ಮೈಸೂರು: ಮಾಜಿ ಸಚಿವ ಸಾರಾ ಮಹೇಶ್ ಫಾರಿನ್ ಟ್ರಿಪ್​ನಲ್ಲಿದ್ದಾಗ ಅವರ ಅಚ್ಚು ಮೆಚ್ಚಿನ ಕೋತಿ ಸಾವಿಗೀಡಾಗಿತ್ತು. ಕೋತಿಯ ನೆನಪಿಗಾಗಿ ಸಾರಾ ಮಹೇಶ್ ದೇಗುಲ ಕಟ್ಟಲು ನಿರ್ಧರಿಸಿದ್ದರು. ಈಗ ಆ ದೇವಾಲಯ ಶೇಕಡ 80ರಷ್ಟು ಪೂರ್ಣಗೊಂಡಿದ್ದು, ನೆಚ್ಚಿನ ಕೋತಿಯ ವಿಗ್ರಹ ಸಿದ್ಧವಾಗಿದೆ.

ಮೈಸೂರಿನ ದಟ್ಟಗಳ್ಳಿಯ ಸಾ.ರಾ ಫಾರಂನಲ್ಲಿ ನಿರ್ಮಾಣವಾಗುತ್ತಿರುವ ದೇವಾಲಯಕ್ಕೆ ಸಾರಾ ಮಹೇಶ್ ಭಾರಿ ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಕುರಿಯ ಮೇಲೆ ಕುಳಿತ ಕೋತಿ ಚಿಂಟುವಿನ ವಿಗ್ರಹ ತಯಾರಾಗಿದೆ. 20 ಲಕ್ಷ ವೆಚ್ಚದಲ್ಲಿ ಈ ದೇವಾಲಯ ನಿರ್ಮಾಣವಾಗುತ್ತಿದ್ದು, ಖ್ಯಾತ ಶಿಲ್ಪ ಕಲಾವಿದ ಅರುಣ್ ವಿಗ್ರಹ ಕೆತ್ತನೆ ಕಾರ್ಯ ನಿರ್ವಹಿಸಿಕೊಂಡಿದ್ದಾರೆ. ಕೃಷ್ಣಶಿಲೆಯಲ್ಲಿ ವಿಗ್ರಹ ನಿರ್ಮಾಣವಾಗಿದೆ. ಶೇಕಡ 80ರಷ್ಟು ಕೆಲಸ ಮುಕ್ತಾಯಗೊಂಡಿದ್ದು, ಅಂತಿಮ ಹಂತದ ರೂಪ ಕೊಡುವ ಕೆಲಸ ಮಾತ್ರ ಬಾಕಿ ಇದೆ.