Budget 2021 | ಶಿಕ್ಷಣ ವಲಯದ ನಿರೀಕ್ಷೆಗಳೇನು? ಡಿಜಿಟಲ್ ಶಿಕ್ಷಣಕ್ಕೆ ಸಿಗಬಹುದೇ ಒತ್ತು?

ಭಾರತದಲ್ಲಿ ಶಾಲಾ ಶಿಕ್ಷಣಕ್ಕೆ ಸರ್ಕಾರ ಖರ್ಚು ಮಾಡುವುದಲ್ಲಿ ಹೆಚ್ಚಿನ ಪಾಲು (10 ಲಕ್ಷಕ್ಕೂ ಹೆಚ್ಚು) ಸರ್ಕಾರಿ ಶಾಲೆಗಳಿಗಾಗಿರುತ್ತದೆ. ಸಣ್ಣದೊಂದು ಪಾಲು ಸರ್ಕಾರಿ ಅನುದಾನಿತ ಶಾಲೆಗಳಿಗೆ ಹೋಗುತ್ತದೆ.

Budget 2021 | ಶಿಕ್ಷಣ ವಲಯದ ನಿರೀಕ್ಷೆಗಳೇನು? ಡಿಜಿಟಲ್ ಶಿಕ್ಷಣಕ್ಕೆ ಸಿಗಬಹುದೇ ಒತ್ತು?
ವಿದ್ಯಾರ್ಥಿಗಳು (ಪಿಟಿಐ ಚಿತ್ರ)
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 31, 2021 | 9:27 PM

ಕೋವಿಡ್-19 ಹೊತ್ತಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಮಾಡಿದ್ದು ಆನ್​ಲೈನ್ ತರಗತಿಗಳು. ಆನ್​ಲೈನ್ ತರಗತಿಯಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿನ ತಾರತಮ್ಯವನ್ನು ಹೋಗಲಾಡಿಸಲು ಸಾಧ್ಯವಾಗಿದೆ ಎಂದು ಶುಕ್ರವಾರ ಮಂಡನೆಯಾದ ಆರ್ಥಿಕ ಸಮೀಕ್ಷೆಯಲ್ಲಿ ಹೇಳಲಾಗಿತ್ತು.

ವಾರ್ಷಿಕ ಶೈಕ್ಷಣಿಕ ವರದಿಯಲ್ಲಿನ (ಎಎಸ್ಇಆರ್ ) 2020 ವೇವ್-1 (ಗ್ರಾಮೀಣ ಪ್ರದೇಶ) ಅಂಶಗಳನ್ನು ಸಮೀಕ್ಷೆಯಲ್ಲಿ ಉಲ್ಲೇಖಿಸಿದ್ದು, ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಸ್ಮಾರ್ಟ್ ಫೋನ್ ಹೊಂದಿರುವವರ ಸಂಖ್ಯೆ 2020ರಲ್ಲಿ ಶೇ 62.8ಕ್ಕೇರಿದೆ, 2018ರಲ್ಲಿ ಇದು ಶೇ 36.5 ಆಗಿತ್ತು.

ಇವುಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿರುವ ವಿದ್ಯಾರ್ಥಿಗಳ ತಾರತಮ್ಯವನ್ನು ಕಡಿಮೆ ಮಾಡಬಹುದು ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಕೋವಿಡ್ ಕಾಲದಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಸಹಾಯವಾಗಲು ಸರ್ಕಾರ ಪ್ರಧಾನಮಂತ್ರಿ ಇ-ವಿದ್ಯಾ ಯೋಜನೆ ಆರಂಭಿಸಿತ್ತು. ಇದರಡಿಯಲ್ಲಿ 92 ಕೋರ್ಸ್ ಗಳನ್ನು ಆರಂಭಿಸಿದ್ದು ₹ 1.5 ಕೋಟಿ ವಿದ್ಯಾರ್ಥಿಗಳು ಸ್ವಯಂ MOOC (Massive open online course)ನಲ್ಲಿ ದಾಖಲಾಗಿದ್ದಾರೆ.

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಡಿಜಿಟಲ್ ಶಿಕ್ಷಣ ಪ್ರೋತ್ಸಾಹಿಸುವುದಕ್ಕಾಗಿ ₹ 818.17 ಕೋಟಿ ಮತ್ತು
ಸಮಗ್ರ ಶಿಕ್ಷಣ ಯೋಜನೆಯಡಿಯಲ್ಲಿ ಆನ್ ಲೈನ್ ಶಿಕ್ಷಕರಿಗೆ ₹ 267.86 ಕೋಟಿ ಅನುದಾನ ನೀಡಲಾಗಿದೆ. ಕೋವಿಡ್-19 ಸಾಂಕ್ರಾಮಿಕದಿಂದಾಗಿ ಶಾಲೆಗಳು ಮುಚ್ಚಿರುವ ಕಾರಣ ಮಕ್ಕಳಿಗೆ ಮನೆಯಲ್ಲಿಯೇ ಆನ್​ಲೈನ್ ಶಿಕ್ಷಣ ಒದಗಿಸಲು ಬೇಕಾಗಿರುವ ಪ್ರಗ್ಯತ (PRAGYATA) ಮಾರ್ಗಸೂಚಿಗಳನ್ನು ಸಿದ್ದಪಡಿಸಲಾಗದೆ. ಅದೇ ಹೊತ್ತಲ್ಲಿ ಮಾನಸಿಕ ಬೆಂಬಲ ನೀಡುವುದಕ್ಕಾಗಿ ಮನೋದರ್ಪಣ್ ಎಂಬ ಯೋಜನೆಯನ್ನೂ ಆರಂಭಿಸಲಾಗಿದೆ.

ಇದನ್ನೂ ಓದಿ:  ದುಡಿಯುವ ಭರವಸೆ ಬಿತ್ತುವುದೇ ನಿರ್ಮಲಾ ಸೀತಾರಾಮನ್ ಎದುರಿಗಿರುವ ಅತಿದೊಡ್ಡ ಸವಾಲು

ಜಗತ್ತಿನ ಇತರ ರಾಷ್ಟ್ರಗಳ ಪೈಕಿ ಭಾರತದಲ್ಲಿ ಅತೀ ಹೆಚ್ಚು ಯುವಜನರಿದ್ದು, ಮುಂದಿನ ದಶಕದಲ್ಲಿ ಇವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ಅಗತ್ಯವಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಪ್ರಾಥಮಿಕ ಶಿಕ್ಷಣ ಪಡೆದಿರುವವರ ಸಂಖ್ಯೆ ಸರಿಸುಮಾರ್ ಶೇ 96ರಷ್ಟಿದೆ ಎಂದು ಸಮೀಕ್ಷೆ ಉಲ್ಲೇಖಿಸಿದ್ದು, ರಾಷ್ಟ್ರೀಯ ಮಾದರಿ ಸಮೀಕ್ಷೆ (ಎನ್ಎಸ್ಎಸ್) ಪ್ರಕಾರ 7 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಪಡೆದಿರುವ ಶಿಕ್ಷಣದ ಪ್ರಮಾಣ ಶೇ 7.7ರಷ್ಟಿದೆ ಎಂದಿದೆ.

ಇವಿಷ್ಟು ಈ ವರ್ಷದ ಆರ್ಥಿಕ ಸಮೀಕ್ಷೆಯಲ್ಲಿ ಹೇಳಿದ ಅಂಶಗಳು. ಈ ಬಾರಿಯ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಎಷ್ಟು ಅನುದಾನ ಸಿಗಬಹುದು? ಹೊಸ ಯೋಜನೆೆಗಳನ್ನು ನಿರ್ಮಲಾ ಸೀತಾರಾಮನ್ ಘೋಷಿಸುತ್ತಾರೆಯೇ ಎಂಬ ಕುತೂಹಲ ಜನರಲ್ಲಿ ಮನೆ ಮಾಡಿದೆ. ಹೀಗಿರುವಾಗ ದೇಶದ ಶಿಕ್ಷಣ ಕ್ಷೇತ್ರ ಹೇಗಿದೆ? ಸರ್ಕಾರಿ ಶಾಲೆಗಳ ಪರಿಸ್ಥಿತಿ ಹೇಗಿದೆ? ಆಗಬೇಕಾದ ಸುಧಾರಣೆಗಳು ಏನು ಎಂಬುದರ ಬಗ್ಗೆ ಇಂಡಿಯಾ ಸ್ಪೆಂಡ್ ಪ್ರಕಟಿಸಿದ ಲೇಖನದ ಮುಖ್ಯ ಅಂಶಗಳು ಇಲ್ಲಿದೆ.

ದೇಶದ ಜಿಡಿಪಿಯ ಶೇ 6ರಷ್ಟು ಮೊತ್ತವನ್ನು ಶಿಕ್ಷಣಕ್ಕೆ ಮೀಸಲಿಡಬೇಕು ಎಂದು 1968ರಿಂದ ಇಲ್ಲಿವರೆಗಿನ ರಾಷ್ಟ್ರೀಯ ಶಿಕ್ಷಣ ನೀತಿಗಳು ಪ್ರತಿಪಾದಿಸಿವೆ. 2019- 20ರಲ್ಲಿ ಭಾರತದ ಜಿಡಿಪಿಯ ಶೇ. 3.1ರಷ್ಟನ್ನು ಸರ್ಕಾರ ಶಿಕ್ಷಣವಲಯಕ್ಕೆ ಖರ್ಚು ಮಾಡಿತ್ತು. ಸರ್ಕಾರಿ ಶಾಲೆಗಳಿಗೆ ಕಡಿಮೆ ಹಣ ವ್ಯಯಿಸುವುದರಿಂದಲೇ ಭಾರತದ ಶೇ 52ರಷ್ಟು ಮಕ್ಕಳಿಗೆ (ಸರಿಸುಮಾರು 24.8 ಕೋಟಿ ಮಕ್ಕಳು) ಶಿಕ್ಷಣ ವೆಚ್ಚ ಹೊರೆಯಾಗುತ್ತದೆ. ಈ ಕಾರಣದಿಂದಲೇ ಭಾರತದಲ್ಲಿ ಕಲಿಕಾ ಕ್ಷೇತ್ರ ಹಿಂದುಳಿಯುತ್ತದೆ ಅಂತಾರೆ ತಜ್ಞರು.

ಈ ಲೇಖನದಲ್ಲಿ ಪ್ರಸ್ತಾಪವಾಗಿರುವ ಕೇಂದ್ರ ಸರ್ಕಾರ ಸರ್ಕಾರಿ ಶಾಲೆಗಳಿಗೆ ಎಷ್ಟು ಅನುದಾನ ನೀಡುತ್ತದೆ, ಎಷ್ಟು ಅನುದಾನ ನೀಡಿದರೆ ಒಳ್ಳೆಯದು ಎಂಬ ವಿಷಯವನ್ನು ಗಮನಿಸೋಣ.

ಸರ್ಕಾರ ಯಾವುದಕ್ಕೆ ಖರ್ಚು ಮಾಡುತ್ತದೆ?
ಭಾರತದಲ್ಲಿ ಶಾಲಾ ಶಿಕ್ಷಣಕ್ಕೆ ಸರ್ಕಾರ ಖರ್ಚು ಮಾಡುವುದಲ್ಲಿ ಹೆಚ್ಚಿನ ಪಾಲು (10 ಲಕ್ಷಕ್ಕೂ ಹೆಚ್ಚು) ಸರ್ಕಾರಿ ಶಾಲೆಗಳಿಗಾಗಿರುತ್ತದೆ. ಸಣ್ಣದೊಂದು ಪಾಲು ಸರ್ಕಾರಿ ಅನುದಾನಿತ ಶಾಲೆಗಳಿಗೆ ಹೋಗುತ್ತದೆ. ಶಾಸಗಿ ಶಾಲೆಗಳಿಗೆ ಸರ್ಕಾರದಿಂದ ಯಾವುದೇ ಅನುದಾನ ಸಿಗದೇ ಇದ್ದರೂ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳು ಖಾಸಗಿ ಶಾಲೆಯಲ್ಲಿ (1ರಿಂದ 8ನೇ ತರಗತಿ) ಕಲಿಯುತ್ತಿದ್ದರೆ ಶಿಕ್ಷಣ ಕಾಯ್ದೆ ಹಕ್ಕುಗಳಡಿಯಲ್ಲಿ ಅವರಿಗೆ ಪ್ರವೇಶಾವಕಾಶ ಸಿಗುತ್ತದೆ. ಈ ಮಕ್ಕಳ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಖಾಸಗಿ ಶಾಲೆಗಳಲ್ಲಿ ಆರ್​ಟಿಇ ಅಡಿಯಲ್ಲಿ ಶೇ 25ರಷ್ಟು ಸೀಟುಗಳನ್ನು ಇಂಥ ವಿದ್ಯಾರ್ಥಿಗಳಿಗೆ ಮೀಸಲಿರಿಸಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣಕ್ಕಾಗಿ ಹಣವನ್ನು ವಿನಿಯೋಗಿಸುತ್ತವೆ

ಕೇಂದ್ರ ಸರ್ಕಾರ ಹೇಗೆ ಖರ್ಚು ಮಾಡುತ್ತದೆ?
ಕೇಂದ್ರ ಸರ್ಕಾರವು ಶಿಕ್ಷಣ ಕ್ಷೇತ್ರಕ್ಕಾಗಿ ಎರಡು ವಿಭಾಗದಲ್ಲಿ ಖರ್ಚು ಮಾಡುತ್ತದೆ.
1. ಕೇಂದ್ರ ಪ್ರಾಯೋಜಿತ ಯೋಜನೆ
2. ಕೇಂದ್ರ ವಲಯ ಯೋಜನೆ

ಮೊದಲ ವಿಭಾಗದಲ್ಲಿ ಸಮಗ್ರ ಶಿಕ್ಷಾ ಅಭಿಯಾನ್ ( ಶಾಲಾ ಶಿಕ್ಷಣ ಮತ್ತು ಶಿಕ್ಷಕರಿಗೆ ತರಬೇತಿ) – ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40 ಅನುಪಾತದಲ್ಲಿ ಅನುದಾನ ನೀಡುತ್ತವೆ. ಈಶಾನ್ಯ ರಾಜ್ಯಗಳಲ್ಲಿ ಶಿಕ್ಷಣಕ್ಕಾಗಿ ಶೇ 90ರಷ್ಟು ಅನುದಾನ ಕೇಂದ್ರ ಸರ್ಕಾರವೇ ನೀಡುತ್ತದೆ .

ಕೇಂದ್ರ ವಲಯ ಯೋಜನೆ (Central sector schemes) ಅಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್, ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನವೋದಯ ಶಾಲೆ, ಸರ್ಕಾರಿ ನೌಕರರ ಮಕ್ಕಳಿಗಾಗಿ ಕೇಂದ್ರೀಯ ವಿದ್ಯಾಲಯ – ಇವುಗಳಿಗೆ ಕೇಂದ್ರ ಸರ್ಕಾರವೇ ಅನುದಾನ ನೀಡುತ್ತದೆ. ಈ ಶಾಲೆಗಳಿಗೆ ಸಿಗುವ ಅನುದಾನ ಶೇ 1-2ರಷ್ಟು ಅಂತಾರೆ ದೆಹಲಿ ಮೂಲದ ಸಂಶೋಧನಾ ಸಮೂಹ ಅಕೌಂಟಬಿಲಿಟಿ ಇನಿಶಿಯೇಟಿವ್ ನ ಹಿರಿಯ ಸಂಶೋಧಕಿ ಮೃದುಸ್ಮಿತಾ ಬರ್ದೊಲೊಯಿ.

ಕೇಂದ್ರ ಸರ್ಕಾರವು ಎನ್​ಸಿಇಆರ್​ಟಿ (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಸಮಿತಿ), ಪಠ್ಯ ಪುಸ್ತಕಗಳ ವಿನ್ಯಾಸ ಮತ್ತು ಮುದ್ರಣ, ಶಿಕ್ಷಕರ ತರಬೇತಿಗೂ ಹಣ ವ್ಯಯಿಸುತ್ತದೆ .

ಇದನ್ನೂ ಓದಿ: ಅತ್ತ ಪಾಕಿಸ್ತಾನ, ಇತ್ತ ಚೀನಾ; ಈ ಬಾರಿಯಾದರೂ ರಕ್ಷಣೆಗೆ ಸಿಗುತ್ತಾ ಬೇಕಿರುವಷ್ಟು ಅನುದಾನ

ರಾಜ್ಯದ ಅನುದಾನ
ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಹಣವನ್ನು ರಾಜ್ಯ ಸರ್ಕಾರಗಳೇ ಬಿಡುಗಡೆ ಮಾಡುತ್ತವೆ. ಉದಾಹರಣೆಗೆ ಮಹಾರಾಷ್ಟ್ರದಂಥ ರಾಜ್ಯದಲ್ಲಿ ಕೇಂದ್ರ ಸರ್ಕಾರ ಶೇ 7-10 ರಷ್ಟು ಹಣವನ್ನು ಶಾಲಾ ಶಿಕ್ಷಣಕ್ಕೆ ವ್ಯಯಿಸುತ್ತದೆ. ಆದರೆ ಬಿಹಾರದಲ್ಲಿ ಕೇಂದ್ರ ಸರ್ಕಾರ ಶೇ 40ರಿಂದ ಶೇ 50 ರಷ್ಟು ಅನುದಾನ ನೀಡುತ್ತದೆ ಅಂತಾರೆ ಬರ್ದೊಲೊಯಿ. ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳಲ್ಲದೆ ರಾಜ್ಯ ಸರ್ಕಾರಗಳದ್ದೇ ಯೋಜನಗಳು ಇರುತ್ತವೆ. ಉದಾಹರಣೆಗೆ ಬಿಹಾರದಲ್ಲಿ ಸೆಂಕಂಡರಿ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗಾಗಿರುವ ಯೋಜನೆಗಳು. ರಾಜ್ಯದ ಇತರ ಇಲಾಖೆಗಳಾದ ಬುಡಕಟ್ಟು ಸಚಿವಾಲಯ ಮೊದಲಾದವುಗಳು ಕೂಡಾ ಶಿಕ್ಷಣಕ್ಕೆ ತಮ್ಮ ನೆರವು ನೀಡಲಿವೆ.

ರಾಜ್ಯ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ನೀಡುವ ಹಣದ ಹಂಚಿಕೆಯು ಪ್ರತಿಯೊಂದು ರಾಜ್ಯಗಳಲ್ಲಿಯೂ ಭಿನ್ನವಾಗಿರುತ್ತದೆ. ಉದಾಹರಣೆಗೆ ಬಿಹಾರದಲ್ಲಿ 2017-2018ರಲ್ಲಿ ರಾಜ್ಯದ ಜಿಡಿಪಿಯ ಶೇ 4.3 ಮತ್ತು ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಶೇ 1.8 ಆಗಿದೆ ಎಂದು ಅಕೌಂಟಬಿಲಿಟಿ ಇನಿಶಿಯೇಟಿವ್ ನಡೆಸಿದ ಜೂನ್ 2020ರ ವಿಶ್ಲೇಷಣೆಯಲ್ಲಿ ಹೇಳಿದೆ.

ಒಬ್ಬ ವಿದ್ಯಾರ್ಥಿಗೆ ಯಾವ ರಾಜ್ಯ ಸರ್ಕಾರ ಎಷ್ಟು ಹಣ ಖರ್ಚು ಮಾಡುತ್ತದೆ ಎಂಬುದು ಕೆಳಗಿನ ಚಿತ್ರದಲ್ಲಿದೆ.

ವಿದ್ಯಾರ್ಥಿಗಳಿಗೆ ಖರ್ಚುಮಾಡಿರುವ ಹಣ

2014-15ರಲ್ಲಿ ಶಿಕ್ಷಣಕ್ಕೆ ನೀಡುವ ಅನುದಾನ ಏರಿಕೆಯಾಗಿದೆ. 2014-15ರಲ್ಲಿ ಜಿಡಿಪಿಯ ಶೇ 2.8 ಮತ್ತು 2019-20ರಲ್ಲಿ 3.1ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ನೀಡಿದೆ ಎಂದು 2019 -20ರ ಆರ್ಥಿಕ ಸಮೀಕ್ಷೆ ಹೇಳಿತ್ತು
2019-20ರಲ್ಲಿ ಕೇಂದ್ರ ಸರ್ಕಾರ ಶಿಕ್ಷಣಕ್ಕಾಗಿ ₹ 6.43 ಲಕ್ಷ ಕೋಟಿ ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಿತ್ತು. ಇದರಲ್ಲಿ ಕೇಂದ್ರ ಸರ್ಕಾರವು ₹ 56,537 ಕೋಟಿಯನ್ನು ಶಾಲಾ ಶಿಕ್ಷಣಕ್ಕೆ ₹ 38,317 ಕೋಟಿ ಮೊತ್ತವನ್ನು ಉನ್ನತ ಶಿಕ್ಷಣಕ್ಕಾಗಿ ನೀಡಿತ್ತು. ಇವುಗಳನ್ನು ಒಟ್ಟುಗೂಡಿಸಿದರೆ ಕೇಂದ್ರ ಸರ್ಕಾರ ಶೇ 15ರಷ್ಟು ಹಣವನ್ನು ಶಿಕ್ಷಣಕ್ಕೆ ವ್ಯಯಿಸಿದೆ. ಇನ್ನುಳಿದದ್ದು ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೊಡುಗೆಯಾಗಿದೆ.

ಈ ಬಜೆಟ್ ನಿರ್ಣಾಯಕ ಯಾಕೆ?
2020ರ ಮಾರ್ಚ್ 24ರಿಂದ ದೇಶದಾದ್ಯಂತ ಶಾಲೆಗಳಲ್ಲಿ ಪಾಠ ನಡೆಯಲಿಲ್ಲ. ಆನ್​ಲೈನ್ ಶಿಕ್ಷಣವು ಕೆಲವೇ ವಿದ್ಯಾರ್ಥಿಗಳಿಗೆ ತಲುಪಿದೆ. ಅಕ್ಚೋಬರ್ 15ರಿಂದ ಬಹುತೇಕ ಶಾಲೆಗಳು ತೆರೆದಿದ್ದರೂ ಹೆಚ್ಚಿನ ರಾಜ್ಯಗಳಲ್ಲಿ 9 ಮತ್ತು ಅದಕ್ಕಿಂತ ಮೇಲಿನ ತರಗತಿಗಳಿಗೆ ಮಾತ್ರ ಪಾಠ ನಡೆಯುತ್ತಿದೆ. ಇದೀಗ ಶಾಲೆಗಳು ಪುನಾರಂಭವಾಗಿದ್ದು ಸರ್ಕಾರ 2020 ಹೊಸ ಶಿಕ್ಷಣ ನೀತಿಯನ್ನು ತರುವುದಾದರೆ ಭಾರತ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಿದೆ.

ಉದಾಹರಣೆಗೆ, ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ, ಸರ್ಕಾರಿ ಶಾಲೆಗಳು ಡಿಜಿಟಲ್ ಕಲಿಕೆಗಳಿಗೆ ತೆರೆದುಕೊಳ್ಳಬೇಕಾದ ತುರ್ತು ಎದುರಾಯಿತು. 2018 -19ರಲ್ಲಿ ಸರ್ಕಾರಿ ಶಾಲೆಗಳಲ್ಲಿ ಕೇವಲ ಶೇ 28ರಷ್ಟು ಮಾತ್ರ ಕಂಪ್ಯೂಟರ್​ಗಳಿದ್ದು, ಕೇವಲ ಶೇ 12 ರಷ್ಟು ಮಂದಿಗೆ ಮಾತ್ರ ಇಂಟರ್ನೆಟ್ ಸಂಪರ್ಕವಿರುವುದು ದೊಡ್ಡ ಸವಾಲಾಗಿದೆ.

ಇದಲ್ಲದೆ, ಕೋವಿಡ್ -19 ಕುಟುಂಬ ಆದಾಯವನ್ನು ಕಡಿಮೆಗೊಳಿಸಿರುವುದರಿಂದ ಭಾರತದಲ್ಲಿ ಸರ್ಕಾರಿ ಶಾಲೆಗಳಿಗೆ ಹಾಜರಾಗುವ ಮಕ್ಕಳ ಸಂಖ್ಯೆ ಹೆಚ್ಚಾಗಬಹುದು ಎಂದು ಇಂಡಿಯಾ ಸ್ಪೆಂಡ್ ಡಿಸೆಂಬರ್‌ನಲ್ಲಿ ವರದಿ ಮಾಡಿದೆ. ಇದು ಹೆಚ್ಚಿನ ಖರ್ಚ ಬೇಡುತ್ತದೆ ಆದರೆ ಅನುದಾನ ಪಡೆದ ಹಣವನ್ನು ಪರಿಣಾಮಕಾರಿಯಾಗಿ ಬಳಸಬೇಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಶಿಕ್ಷಣದ ಖರ್ಚಿನ ಇತರ ಪ್ರಮುಖ ಅಂಶಗಳು ಅಂದರೆ ಶಿಕ್ಷಣ ಹಕ್ಕು ಕಾಯ್ದೆಯಡಿ ಅರ್ಹತೆಗಳು. ಉದಾಹರಣೆಗೆ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳು, ಮಧ್ಯಾಹ್ನದ ಊಟ , ನಿರ್ಮಾಣ ಮತ್ತು ನಿರ್ವಹಣೆ ಮತ್ತು ಪ್ರೋತ್ಸಾಹಗಳು. ಕೆಳಗಿನ ಅಂಕಿಅಂಶಗಳು ಬೇರೆ ಬೇರೆ ರಾಜ್ಯಗಳಲ್ಲಿ ಭಿನ್ನವಾಗಿವೆ.

ಶಿಕ್ಷಕರ ತರಬೇತಿಯ ಜೊತೆಗೆ ನಿಗಾವಹಿಸುವುದು, ಮೇಲ್ವಿಚಾರಣೆ ಮತ್ತು ಡಿಜಿಟಲ್ ಮೂಲಸೌಕರ್ಯಗಳಿಗಾಗಿ ಬಜೆಟ್​ನಲ್ಲಿ ಹಣ ವ್ಯಯಿಸಲಾಗುತ್ತಿಲ್ಲ ಅಂತಾರೆ ತಜ್ಞರು , ಕೋವಿಡ್ -19 ಆನ್‌ಲೈನ್ ಶಿಕ್ಷಣ ಹೆಚ್ಚು ಮಹತ್ವ ಪಡೆದುಕೊಂಡಿದ್ದು, ಪ್ರತಿಯೊಬ್ಬ ಶಿಕ್ಷಕರು ಉತ್ತಮ ಲ್ಯಾಪ್‌ಟಾಪ್ ಮತ್ತು ಇಂಟರ್ನೆಟ್ ಸಂಪರ್ಕವನ್ನು ಹೊಂದಿದ್ದಾರೆಂದು ನೀವು ನಿರೀಕ್ಷಿಸಲಾಗುವುದಿಲ್ಲ ಎಂದು ಸೆಂಟರ್ ಫಾರ್ ಬಜೆಟ್ ಆ್ಯಂಡ್ ಗವರ್ನೆನ್ಸ್ ಅಕೌಂಟಬಿಲಿಟಿ ಸಂಶೋಧಕಿ ಪ್ರೊ.ಕವಿತಾ ಕುಂದು ಅಭಿಪ್ರಾಯಪಟ್ಟಿದ್ದಾರೆ.

ಶಿಕ್ಷಣ ವಲಯಕ್ಕೆ ಸಿಗುವ ಅನುದಾನ ಕಡಿಮೆ ಆಗಿದ್ದರೂ ರಾಜ್ಯ ಸರ್ಕಾರಗಳು ಈ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳುವುದಿಲ್ಲ. ಕೇಂದ್ರ ಸರ್ಕಾರವು ರಾಜ್ಯಗಳಿಗೆ ವಿಳಂಬವಾಗಿ ಅನುದಾನವನ್ನು ನೀಡುವುದು ಮತ್ತು ರಾಜ್ಯಗಳಿಗೆ ಅಗತ್ಯವಿಲ್ಲದ ವಿಷಯಗಳಿಗೆ ಅನುದಾನವನ್ನು ಹಂಚಿಕೆ ಮಾಡುವುದು ಸೇರಿದಂತೆ ಹಲವಾರು ಕಾರಣಗಳಿಂದಾಗಿ ಅನುದಾನಗಳು ಸರಿಯಾಗಿ ಬಳಕೆಯಾಗುವುದಿಲ್ಲ.

ಉದಾಹರಣೆಗೆ, ಪ್ರತಿ ವರ್ಷ ಶಾಲೆಗೆ ಬಣ್ಣ ಹಚ್ಚುವ ಅಗತ್ಯವಿದೆಯೇ ಎಂದು ಕುಂದು ಕೇಳುತ್ತಾರೆ. ಅಲ್ಲದೆ, ಹೊಸ ಮೂಲಸೌಕರ್ಯಗಳನ್ನು ನಿರ್ಮಿಸುವುದು ಅಥವಾ ನಿರ್ವಹಣೆಯಂತಹ ನಿರ್ದಿಷ್ಟ ಚಟುವಟಿಕೆಗಳಿಗೆ ಹಣವನ್ನು ಹಂಚಿಕೆ ಮಾಡಲಾಗುತ್ತದೆ. ಆದರೆ ಹೀಗೆ ಹಂಚಿಕೆಯಾದ ಹಣದಿಂದ ಕೆಲಸವನ್ನು ಸಂಪೂರ್ಣವಾಗಿ ನಿರ್ವಹಿಸಲು ಸಾಧ್ಯವಾಗದಿದ್ದರೆ ಶಾಲೆಗಳು ಅಂಥ ಕೆಲಸಗಳನ್ನು ಕೈಗೆತ್ತಿಕೊಳ್ಳುವುದಿಲ್ಲ ಎನ್ನುತ್ತಾರೆ ಕುಂದು.

Budget 2021 Explainer | ಕ್ರೆಡಿಟ್ ರೇಟಿಂಗ್ ಎಂದರೇನು? ಆರ್ಥಿಕ ಸಮೀಕ್ಷೆಯಲ್ಲಿ ಭಾರತ ಅಷ್ಟೇಕೆ ತಕರಾರು ಮಾಡಿತು?

Published On - 9:08 pm, Sun, 31 January 21