Covid 19 ಸಾಂಕ್ರಾಮಿಕ ರೋಗದ ಭೀತಿ ದೇಶವನ್ನು ಆವರಿಸಿದ್ದಾಗ ಕೇಂದ್ರ ಸರ್ಕಾರ ಹಲವು ಕ್ರಮಗಳ ಮೂಲಕ ಜನರ ನೆರವಿಗೆ ಧಾವಿಸಿತ್ತು. ಕೊರೊನಾ ಪ್ಯಾಕೇಜ್ ರೂಪದಲ್ಲಿ ಜನರಿಗೆ ತುರ್ತು ನೆರವು ಲಭಿಸಿ. ಸರ್ಕಾರ ಘೋಷಿಸಿದ ಕೊರೊನಾ ಪ್ಯಾಕೇಜ್ಗಳನ್ನು ನೆನಪಿಸುವ ಪ್ರಯತ್ನ ಇಲ್ಲಿದೆ.
ಸರ್ಕಾರ ಕೊಟ್ಟ ಕೊರೊನಾ ಪ್ಯಾಕೇಜ್ ಮಾಹಿತಿ
– ಬಡವರ ಸಹಾಯಕ್ಕಾಗಿ ಕೇಂದ್ರ ಸರ್ಕಾರ ₹ 1.7 ಲಕ್ಷ ಕೋಟಿ ಮೊತ್ತದ ಪ್ಯಾಕೆಜ್ ಘೋಷಿಸಿತ್ತು. ನೇರ ನಗದು ವರ್ಗಾವಣೆ ಮತ್ತು ಆಹಾರ ಪೂರೈಕೆಗೆ ಈ ಮೊತ್ತ ಬಳಸುವ ಉದ್ದೇಶ ಹೊಂದಿತ್ತು.
– ನರ್ಸ್ಗಳು, ಸಫಾಯಿ ಕರ್ಮಚಾರಿಗಳು ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ₹ 50 ಲಕ್ಷ ಆರೊಗ್ಯವಿಮೆ ಘೋಷಿಸಲಾಯಿತು.
– ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ 80 ಕೋಟಿ ಪಡಿತರ ಚೀಟಿದಾರರಿಗೆ 5 ಕೆ.ಜಿ ಗೋಧಿ ಹಾಗೂ ಅಕ್ಕಿ 3 ತಿಂಗಳವರೆಗೆ ನೀಡಲಾಗಿದೆ.
– ಜನಧನ ಖಾತೆಯನ್ನು ಹೊಂದಿರುವ 20 ಕೋಟಿ ಮಹಿಳೆಯರಿಗೆ ತಿಂಗಳಿಗೆ ₹ 500 ನೀಡಲಾಯಿತು.
– ಉಜ್ವಲಾ ಯೋಜನೆಯಡಿಯಲ್ಲಿ 3 ತಿಂಗಳು ಉಚಿತ ಅಡುಗೆ ಅನಿಲ ಪೂರೈಕೆಯನ್ನು 8.3 ಕೋಟಿ ಜನರಿಗೆ ತಲುಪಿಸಲಾಯಿತು.
– ನಗರಗಳಿಂದ ವಲಸೆ ಕಾರ್ಮಿಕರು ಹಳ್ಳಿಗಳಿಗೆ ಹಿಂದಿರುಗಿದ ಹಿನ್ನೆಲೆಯಲ್ಲಿ ನರೇಗಾ ಯೋಜನೆಗೆ ಹೆಚ್ಚು ಒತ್ತು ನೀಡುವ ಮೂಲಕ ಅವರಿಗೆ ಕೆಲಸ ಕೊಡಿಸಲು ₹ 202 ಕೋಟಿ ಮಂಜೂರು ಮಾಡಲಾಯಿತು.
– ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ₹ 6000 ಮೊತ್ತವನ್ನು ಅವರ ಖಾತೆಗಳಿಗೆ ವರ್ಗಾವಣೆ ಮಾಡಲಾಯಿತು.
– ವಿಧವೆಯರು, ಅಂಗವಿಕಲರು ಮತ್ತು ವೃದ್ಧರಿಗೆ ತಿಂಗಳಿಗೆ ₹ 1000ದಂತೆ 3 ತಿಂಗಳು ಹೆಚ್ಚುವರಿ ಪಿಂಚಣಿ ನೀಡಲಾಯಿತು.
– 100 ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಲ್ಲಿನ ಉದ್ಯೋಗಿಗಳು ತಮ್ಮ ಇಪಿಎಫ್ನಲ್ಲಿ ಶೇ 75 ರಷ್ಟು ಅಥವಾ ₹ 1 ಲಕ್ಷದವರೆಗಿನ ಮೊತ್ತ ಹಿಂಪಡೆಯಲು ಅವಕಾಶ ಕಲ್ಪಿಸಲಾಯಿತು.
– ಕಾರ್ಮಿಕ ಕಲ್ಯಾಣ ನಿಧಿಯ ಮೂಲಕ ₹ 31,000 ಕೋಟಿಯಷ್ಟು ಮೊತ್ತವನ್ನು 3.5 ಕೋಟಿ ಕಟ್ಟಡ ಕಾರ್ಮಿಕರಿಗೆ ಮತ್ತು ಗಣಿ ಕಾರ್ಮಿಕರ ಅನುಕೂಲಕ್ಕೆ ಬಳಸಲಾಯಿತು.
Budget 2021 ನಿರೀಕ್ಷೆ | ಈ ವರ್ಷದ ಬಜೆಟ್ನಿಂದ ಮಹಿಳೆಯರು ಬಯಸುತ್ತಿರುವುದೇನು?