ಜಪ್ತಿಯಾದ ಚಿನ್ನ ನಾಪತ್ತೆ: KIAL ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ FIR

|

Updated on: Oct 18, 2020 | 7:28 AM

ಬೆಂಗಳೂರು: ಕೆ.ಐ.ಎ.ಎಲ್. ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಸಿಬಿಐ ಎಸಿಬಿಯಲ್ಲಿ ಎಫ್​ಐಆರ್ ದಾಖಲಾಗಿದೆ. ಅಕ್ರಮ ಚಿನ್ನ ಸಾಗಾಟ ಯತ್ನ ಸೇರಿ ಹಲವು ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ ಬರೋಬ್ಬರಿ 2.5 ಕೆಜಿ ಚಿನ್ನವನ್ನ ಗೋಡೌನ್​ನಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಜಪ್ತಿಯಾದ ಚಿನ್ನವನ್ನು ಕೆ.ಐ.ಎ.ಎಲ್​ನ ಕಾರ್ಗೋ ಗೋಡೌನ್​ನಲ್ಲಿ ಇರಿಸಿದ್ದರು. ಆದರೆ ಅಲ್ಲಿದ್ದ ಚಿನ್ನ ನಾಪತ್ತೆಯಾಗಿದೆ. ಹೀಗಾಗಿ ಜಪ್ತಿ ಮಾಡಿದ್ದ ಕಸ್ಟಮ್ಸ್ ಅಧಿಕಾರಿಗಳೆ ಚಿನ್ನ ಕದ್ದಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಕಸ್ಟಮ್ಸ್ ಜೆಸಿ ಎಂ.ಜೆ.ಚೇತನ್ ಸಿಬಿಐ ಎಸಿಬಿಯಲ್ಲಿ ದೂರು ದಾಖಲಿಸಿದ್ದು, ದೂರಿನ […]

ಜಪ್ತಿಯಾದ ಚಿನ್ನ ನಾಪತ್ತೆ: KIAL ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ FIR
ಕೆಂಪೇಗೌಡ ವಿಮಾನ ನಿಲ್ದಾಣ
Follow us on

ಬೆಂಗಳೂರು: ಕೆ.ಐ.ಎ.ಎಲ್. ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಸಿಬಿಐ ಎಸಿಬಿಯಲ್ಲಿ ಎಫ್​ಐಆರ್ ದಾಖಲಾಗಿದೆ. ಅಕ್ರಮ ಚಿನ್ನ ಸಾಗಾಟ ಯತ್ನ ಸೇರಿ ಹಲವು ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ ಬರೋಬ್ಬರಿ 2.5 ಕೆಜಿ ಚಿನ್ನವನ್ನ ಗೋಡೌನ್​ನಲ್ಲಿ ಸಂಗ್ರಹಿಸಿ ಇಡಲಾಗಿತ್ತು.

ಜಪ್ತಿಯಾದ ಚಿನ್ನವನ್ನು ಕೆ.ಐ.ಎ.ಎಲ್​ನ ಕಾರ್ಗೋ ಗೋಡೌನ್​ನಲ್ಲಿ ಇರಿಸಿದ್ದರು. ಆದರೆ ಅಲ್ಲಿದ್ದ ಚಿನ್ನ ನಾಪತ್ತೆಯಾಗಿದೆ. ಹೀಗಾಗಿ ಜಪ್ತಿ ಮಾಡಿದ್ದ ಕಸ್ಟಮ್ಸ್ ಅಧಿಕಾರಿಗಳೆ ಚಿನ್ನ ಕದ್ದಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಕಸ್ಟಮ್ಸ್ ಜೆಸಿ ಎಂ.ಜೆ.ಚೇತನ್ ಸಿಬಿಐ ಎಸಿಬಿಯಲ್ಲಿ ದೂರು ದಾಖಲಿಸಿದ್ದು, ದೂರಿನ ಮೇರೆಗೆ ಕಸ್ಟಮ್ಸ್ ಅಸಿಸ್ಟೆಂಟ್ ಕಮಿಷನರ್​ಗಳಾದ ವಿನೋದ್ ಚಿನ್ನಪ್ಪ, ಕೇಶವ್, ಸೂಪರಿಂಟೆಂಡೆಂಟ್ ಎನ್.ಜೆ.ರವಿಶಂಕರ್, ಡೀನ್ ರೆಕ್ಸ್ಕೆ.ಬಿ.ಲಿಂಗರಾಜು, ಎಸ್.ಟಿ.ಹಿರೇಮಠ್ ವಿರುದ್ಧ FIR ದಾಖಲಾಗಿದೆ.