ಲಸಿಕೆ ಅಭಿವೃದ್ಧಿಯಾಗ್ತಿದ್ದಂತೆ ಹಂಚಿಕೆ ಬಗ್ಗೆ ಕೇಂದ್ರದ ಪ್ಲ್ಯಾನ್, ಈ ಬಗ್ಗೆ ಅಧಿಕಾರಿಗಳ ಜೊತೆ ಸಭೆ

ದೆಹಲಿ: ಕೊರೊನಾ ನಿರೋಧಕ ಲಸಿಕೆ ಸಂಶೋಧನೆ ವೇಗ ಪಡೆದಿರುವಾಗಲೇ ದೇಶಾದ್ಯಂತ ಲಸಿಕೆ ವಿತರಣೆ ಮಾಡಲು ಕೇಂದ್ರ ಸರಕಾರ ಸಿದ್ಧತೆ ನಡೆಸುತ್ತಿದೆ. ಆದ್ರೆ ಎಷ್ಟೇ ಬೇಗ ಕೊರೊನಾ ಲಸಿಕೆ ಅಭಿವೃದ್ಧಿ ಪಡಿಸಿದ್ರು. ಭಾರತದಂತಹ ದೇಶದಲ್ಲಿ ಕೊರೊನಾ ಲಸಿಕೆ ಹಂಚಿಕೆ ಮಹಾ ಸಾಹಸವೇ ಸರಿ. ಅದಕ್ಕಾಗಿ ಕೇಂದ್ರ ಸರ್ಕಾರ ಮಾಸ್ಟರ್ ಪ್ಲ್ಯಾನ್ ರೆಡಿ ಮಾಡಿಕೊಂಡಿದೆ. ಕೊರೊನಾ ಲಸಿಕೆ ಹಂಚಿಕೆಯೇ ದೇಶಕ್ಕೆ ಮಹಾ ಸವಾಲ್ ಇಡೀ ವಿಶ್ವ ಡೆಡ್ಲಿ ವೈರಸ್ ಕೊರೊನಾದಿಂದ ನರಳುತ್ತಿದೆ. ಕೊರೊನಾ ಲಸಿಕೆಗಾಗಿ ಪ್ರಮುಖ ದೇಶಗಳು ರಾಕೆಟ್ ವೇಗದಲ್ಲಿ […]

ಲಸಿಕೆ ಅಭಿವೃದ್ಧಿಯಾಗ್ತಿದ್ದಂತೆ ಹಂಚಿಕೆ ಬಗ್ಗೆ ಕೇಂದ್ರದ ಪ್ಲ್ಯಾನ್, ಈ ಬಗ್ಗೆ ಅಧಿಕಾರಿಗಳ ಜೊತೆ ಸಭೆ
Follow us
ಆಯೇಷಾ ಬಾನು
|

Updated on: Oct 18, 2020 | 6:43 AM

ದೆಹಲಿ: ಕೊರೊನಾ ನಿರೋಧಕ ಲಸಿಕೆ ಸಂಶೋಧನೆ ವೇಗ ಪಡೆದಿರುವಾಗಲೇ ದೇಶಾದ್ಯಂತ ಲಸಿಕೆ ವಿತರಣೆ ಮಾಡಲು ಕೇಂದ್ರ ಸರಕಾರ ಸಿದ್ಧತೆ ನಡೆಸುತ್ತಿದೆ. ಆದ್ರೆ ಎಷ್ಟೇ ಬೇಗ ಕೊರೊನಾ ಲಸಿಕೆ ಅಭಿವೃದ್ಧಿ ಪಡಿಸಿದ್ರು. ಭಾರತದಂತಹ ದೇಶದಲ್ಲಿ ಕೊರೊನಾ ಲಸಿಕೆ ಹಂಚಿಕೆ ಮಹಾ ಸಾಹಸವೇ ಸರಿ. ಅದಕ್ಕಾಗಿ ಕೇಂದ್ರ ಸರ್ಕಾರ ಮಾಸ್ಟರ್ ಪ್ಲ್ಯಾನ್ ರೆಡಿ ಮಾಡಿಕೊಂಡಿದೆ.

ಕೊರೊನಾ ಲಸಿಕೆ ಹಂಚಿಕೆಯೇ ದೇಶಕ್ಕೆ ಮಹಾ ಸವಾಲ್ ಇಡೀ ವಿಶ್ವ ಡೆಡ್ಲಿ ವೈರಸ್ ಕೊರೊನಾದಿಂದ ನರಳುತ್ತಿದೆ. ಕೊರೊನಾ ಲಸಿಕೆಗಾಗಿ ಪ್ರಮುಖ ದೇಶಗಳು ರಾಕೆಟ್ ವೇಗದಲ್ಲಿ ಕಾರ್ಯಪ್ರವೃತ್ತವಾಗಿವೆ. ಆದ್ರೆ ಭಾರತದಂತಹ ದೇಶಗಳಿಗೆ ಕೊರೊನಾ ಲಸಿಕೆ ಅಭಿವೃದ್ಧಿ ಎಷ್ಟು ಮುಖ್ಯವೋ, ಹಂಚಿಕೆಯೂ ಕೂಡ ಅಷ್ಟೇ ದೊಡ್ಡ ಸವಾಲು. ಯಾಕಂದ್ರೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕೊರೊನಾ ಲಸಿಕೆ ಹಂಚಿಕೆ ಮಾಡೋದು ಅಂದ್ರೆ ಸುಲಭದ ಮಾತಲ್ಲ. ಹಾಗಾಗಿ ಕೇಂದ್ರ ಸರ್ಕಾರ ಪ್ಲಾನ್ ರೂಪಿಸುತ್ತಿದೆ. ಕೊರೊನಾ ಲಸಿಕೆ ಅಭಿವೃದ್ಧಿ ಆಗ್ತಿದ್ದಂತೆ ಅದನ್ನ ಯಾವ ರೀತಿ ಹಂಚಬೇಕು ಅನ್ನೋದರ ಬಗ್ಗೆ ಈಗಿನಿಂದಲೇ ಪ್ಲ್ಯಾನ್ ಮಾಡಲಾಗ್ತಿದೆ. ಈ ಸಂಬಂಧ ಚರ್ಚಿಸಲು ಪ್ರಧಾನಿ‌ ಮೋದಿ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಕೊರೊನಾ ಸೋಂಕಿನ ಪ್ರಸ್ತುತ ಪರಿಸ್ಥಿತಿ, ಲಸಿಕೆ ವಿತರಣೆ ಮತ್ತು ನಿರ್ವಹಣೆ ಕುರಿತ ಪರಿಶೀಲನಾ ಸಭೆಯಲ್ಲಿ ಮಾತನಾಡಿದ್ದಾರೆ.

ಕೊರೊನಾ ನಿರೋಧಕ ಲಸಿಕೆ ಹಂಚಲು ಪ್ಲ್ಯಾನ್: ದೇಶದಲ್ಲಿ ನಡೆಸುವ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಕೊರೊನಾ ಹಂಚಿಕೆಗೆ ಸಿದ್ಧತೆ ನಡೆಸಬೇಕು. ವಿಪತ್ತು ನಿರ್ವಹಣಾ ಸಮಯದಲ್ಲಿ ತಯಾರಿ ನಡೆಸುವ ಮಾದರಿಯಲ್ಲಿಯೇ ಕೊರೊನಾ ಲಸಿಕೆ ಹಂಚಿಕೆಗೂ ಸಿದ್ಧತೆ ನಡೆಸಬೇಕು. ಭಾರತದಲ್ಲಿ ಈಗಾಗಲೇ ಮೂರು ಲಸಿಕೆಗಳು ಅಭಿವೃದ್ಧಿ ಹಂತದಲ್ಲಿವೆ. ಅವುಗಳಲ್ಲಿ ಎರಡು ಲಸಿಕೆಗಳು 2ನೇ ಹಂತದ ಪರೀಕ್ಷೆಯಲ್ಲಿದ್ದರೆ, ಮತ್ತೊಂದು 3ನೇ ಹಂತದ ಪರೀಕ್ಷೆಯಲ್ಲಿದೆ ಎಂದು ಮೋದಿ ಮಾಹಿತಿ ನೀಡಿದ್ದಾರೆ. ಮುಂದಿನ ವರ್ಷ ಜುಲೈ ವೇಳೆಗೆ 40 ರಿಂದ 50 ಕೋಟಿ ಡೋಸ್‌ಗಳಷ್ಟು ಕೊರೊನಾ ನಿರೋಧಕ ಲಸಿಕೆ ಉತ್ಪಾದಿಸಿ 25 ಕೋಟಿ ಜನರಿಗೆ ನೀಡುವ ಗುರಿ ಹೊಂದಲಾಗಿದೆ.

ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಆರೋಗ್ಯ ಸೇವೆ ಕಾರ್ಯಕರ್ತರಿಗೆ ಮೊದಲು ಲಸಿಕೆ ನೀಡಲಾಗುವುದು. ಆದ್ಯತೆ ಮೇರೆಗೆ ರಾಜ್ಯಗಳಿಗೆ ಕೊರೊನಾ ನಿರೋಧಕ ಲಸಿಕೆ ಪೂರೈಸಲಾಗುವುದು. ಲಸಿಕೆ ವಿತರಿಸುವ ಜವಾಬ್ದಾರಿಯನ್ನು ನೀತಿ ಆಯೋಗದ ಆರೋಗ್ಯವಿಭಾಗಕ್ಕೆ ವಹಿಸುವುದು. ಲಸಿಕೆ ವಿತರಣೆ ಪ್ರಕ್ರಿಯೆಯಲ್ಲಿ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶ, ಜಿಲ್ಲಾ ಮಟ್ಟದ ಪದಾಧಿಕಾರಿಗಳು, ಸಂಘಟನೆಗಳು, ಸ್ವಯಂಸೇವಕರು, ನಾಗರಿಕರು, ಮತ್ತು ಎಲ್ಲ ಅಗತ್ಯ ಕ್ಷೇತ್ರಗಳ ತಜ್ಞರು ಭಾಗವಹಿಸುವುದು.

ಹೀಗೆ ಕೊರೊನಾ ಲಸಿಕೆ‌ ಹಂಚಿಕೆಗೆ ಪ್ಲಾನ್ ಮಾಡಿಕೊಳ್ಳಲಾಗಿದ್ದು, ಎಲ್ಲವೂ ಅಂದುಕೊಂಡಂತೆ ಆದ್ರೆ ಮುಂದಿನ ವರ್ಷ ಜುಲೈನಿಂದ ಲಸಿಕೆ ಪೂರೈಕೆ ಪ್ರಕ್ರಿಯೆ ಆರಂಭವಾಗಲಿದೆ.

ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ