ಏನ್ ‘ಐಟಂ’ ಇವಳು -ಬಿಜೆಪಿ ಅಭ್ಯರ್ಥಿ ಬಗ್ಗೆ ಮಾಜಿ ಸಿಎಂ ಕಮಲ್ ನಾಥ್ ಹೀಗೇಕೆ ಹೇಳಿದರು?
ಭೋಪಾಲ್: ಮಧ್ಯಪ್ರದೇಶದ ಡಾಬ್ರಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಅಂಗವಾಗಿ ಇಂದು ಪ್ರಚಾರ ನಡೆಸಿದ ರಾಜ್ಯದ ಮಾಜಿ ಸಿಎಂ ಕಮಲ್ ನಾಥ್ ಬಿಜೆಪಿ ಅಭ್ಯರ್ಥಿ ಇಮರ್ತಿ ದೇವಿಯವರನ್ನು ಲೇವಡಿ ಮಾಡಿ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಉಪಚುನಾವಣಾ ಪ್ರಚಾರದಲ್ಲಿ ತಮ್ಮ ಅಭ್ಯರ್ಥಿಯ ಪರ ಮತಯಾಚಿಸುತ್ತಿದ್ದ ಕಮಲ್ ನಾಥ್ ಸುರೇಶ್ ನಮ್ಮ ಅಭ್ಯರ್ಥಿ. ಅತ್ಯಂತ ಸರಳ ವ್ಯಕ್ತಿತ್ವ ಹೊಂದಿರುವವರು. ಆಕೆಯ ಹಾಗೆ ಅಲ್ಲ. ಏನು ಆಕೆಯ(ಇಮರ್ತಿ ದೇವಿ) ಹೆಸರು? ಎಂದು ಪ್ರಶ್ನಿಸಿದರು. ಅಲ್ಲಿ ನೆರೆದಿದ್ದ ಜನರು ಇಮರ್ತಿಯ ಹೆಸರು ಹೇಳುತ್ತಿದ್ದಂತೆ ಕಮಲ್ […]
ಭೋಪಾಲ್: ಮಧ್ಯಪ್ರದೇಶದ ಡಾಬ್ರಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಅಂಗವಾಗಿ ಇಂದು ಪ್ರಚಾರ ನಡೆಸಿದ ರಾಜ್ಯದ ಮಾಜಿ ಸಿಎಂ ಕಮಲ್ ನಾಥ್ ಬಿಜೆಪಿ ಅಭ್ಯರ್ಥಿ ಇಮರ್ತಿ ದೇವಿಯವರನ್ನು ಲೇವಡಿ ಮಾಡಿ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಉಪಚುನಾವಣಾ ಪ್ರಚಾರದಲ್ಲಿ ತಮ್ಮ ಅಭ್ಯರ್ಥಿಯ ಪರ ಮತಯಾಚಿಸುತ್ತಿದ್ದ ಕಮಲ್ ನಾಥ್ ಸುರೇಶ್ ನಮ್ಮ ಅಭ್ಯರ್ಥಿ. ಅತ್ಯಂತ ಸರಳ ವ್ಯಕ್ತಿತ್ವ ಹೊಂದಿರುವವರು. ಆಕೆಯ ಹಾಗೆ ಅಲ್ಲ. ಏನು ಆಕೆಯ(ಇಮರ್ತಿ ದೇವಿ) ಹೆಸರು? ಎಂದು ಪ್ರಶ್ನಿಸಿದರು. ಅಲ್ಲಿ ನೆರೆದಿದ್ದ ಜನರು ಇಮರ್ತಿಯ ಹೆಸರು ಹೇಳುತ್ತಿದ್ದಂತೆ ಕಮಲ್ ನಾಥ್ ನಾನೇಕೆ ಆಕೆಯ ಹೆಸರು ಹೇಳಲಿ. ನನಗಿಂತ ನಿಮಗೇ ಆಕೆಯ ಹೆಸರು ಚಿರಪರಿಚಿತ. ನೀವು ನನಗೆ ಮೊದಲೇ ಎಚ್ಚರಿಸಬೇಕಿತ್ತು. ಏನ್ ಐಟಂ ಇವಳು ಎಂದು ಡೈಲಾಗ್ ಹೊಡೆದುಬಿಟ್ಟರು. ಇದೀಗ, ಮಾಜಿ ಸಿಎಂರ ಹೇಳಿಕೆ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದೆ.
ಅಂದ ಹಾಗೆ, ಇಮರ್ತಿ ದೇವಿ ಹಾಗೂ ಕಮಲ್ ನಾಥ್ ನಡುವೆ ಹಳೇ ರಾಜಕೀಯ ದ್ವೇಷವಿದೆಯಂತೆ. ಇಮರ್ತಿ ದೇವಿ ಈ ಹಿಂದೆ ಕಾಂಗ್ರೆಸ್ನಲ್ಲಿದ್ದಾಗ ಕಮಲ್ ನಾಥ್ ವಿರುದ್ಧ ಲಂಚದ ಆರೋಪ ಮಾಡಿದ್ದರು. ಕಮಲ್ ನಾಥ್ ಸಿಎಂ ಆಗಿದ್ದಾಗ ಅವರ ಮಂತ್ರಿಮಂಡಲದಲ್ಲಿ ಸೇರ್ಪಡೆಯಾಗದ MLAಗಳಿಗೆ ಪ್ರತಿ ತಿಂಗಳು ಐದು ಲಕ್ಷ ರೂಪಾಯಿ ಹಣ ಕೊಡುತ್ತಾರೆ ಎಂದು ಆರೋಪಿಸಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಕಮಲ್ ನಾಥ್ ಆಕೆ ತನ್ನ ತಪ್ಪುಗಳನ್ನು ಮುಚ್ಚಿಡಲು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಇಮರ್ತಿ ದೇವಿಯೇ ಈ ಹಿಂದೆ ಕೋಟ್ಯಂತರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಇದೀಗ, ನನ್ನ ಮೇಲೆ ಆರೋಪ ಮಾಡಲು ಮುಂದಾಗಿದ್ದಾರೆ ಎಂದು ಹೇಳಿದ್ದರು.
#WATCH: Our candidate is not like her… what's her name? (people shout Imarti Devi, who is former State Minister) You know her better and should have warned me earlier… ye kya item hai: Former Madhya Pradesh CM & Congress leader Kamal Nath pic.twitter.com/eW76f2z8gU
— ANI (@ANI) October 18, 2020