ಮಾಜಿ ಕಾರ್ಪೋರೇಟರ್ ಗಾಯತ್ರಿ ವಿರುದ್ಧ FIR

|

Updated on: Dec 16, 2020 | 7:19 PM

2015ರ ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷೇತರವಾಗಿ ಗಾಯತ್ರಿ ಗೆಲುವು ಸಾಧಿಸಿದ್ದರು. ಇವರು ಸ್ಪರ್ಧಿಸಿದ್ದ ಕ್ಷೇತ್ರ ಕೆಂಪಾಪುರ ಆಗ್ರಹಾರ, ಎಸ್​ಟಿ (ST) ಮಹಿಳೆಗೆ ಮೀಸಲಾಗಿತ್ತು.

ಮಾಜಿ ಕಾರ್ಪೋರೇಟರ್ ಗಾಯತ್ರಿ ವಿರುದ್ಧ FIR
ಮಾಜಿ ಕಾರ್ಪೋರೇಟರ್ ಗಾಯತ್ರಿ
Follow us on

ಬೆಂಗಳೂರು: ನಕಲಿ ಜಾತಿ ಪ್ರಮಾಣ ಪತ್ರ ಹೊಂದಿದ್ದ ಆರೋಪದಡಿಯಲ್ಲಿ ಮಾಜಿ ಕಾರ್ಪೋರೇಟರ್ ಗಾಯತ್ರಿ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

2015ರ ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷೇತರವಾಗಿ ಗಾಯತ್ರಿ ಗೆಲುವು ಸಾಧಿಸಿದ್ದರು. ಇವರು ಸ್ಪರ್ಧಿಸಿದ್ದ ಕ್ಷೇತ್ರ ಕೆಂಪಾಪುರ ಆಗ್ರಹಾರ, ಎಸ್​ಟಿ (ST) ಮಹಿಳೆಗೆ ಮೀಸಲಾಗಿತ್ತು.

ಚುನಾವಣೆ ಸಂದರ್ಭ ನಾಮಪತ್ರ ಸಲ್ಲಿಸುವಾಗ ನೀಡಿದ್ದ ಜಾತಿ ಪ್ರಮಾಣ ಪತ್ರ ಸುಳ್ಳು ಎಂದು ಬೆಂಗಳೂರು ನಗರ ಜಾತಿ ಪರಿಶೀಲನಾ ಸಮಿತಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಇನ್​ಸ್ಪೆಕ್ಟರ್ ಗಾಯತ್ರಿ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆಯಾಗಿದೆ.

 

ಎಫ್ಐಆರ್

 

BBMP ಚುನಾವಣೆ ಮುಂದೂಡಲು ‘ಸುಪ್ರೀಂ’ ಮೊರೆಹೋದ ರಾಜ್ಯ ಸರ್ಕಾರ

 

Published On - 6:53 pm, Wed, 16 December 20