ಕಾಫಿನಾಡಿನಲ್ಲಿ ಕೇಕ್ ಕತ್ತರಿಸಿ 61ನೇ ಹುಟ್ಟುಹಬ್ಬ ಆಚರಿಸಿಕೊಂಡ ಹೆಚ್. ಡಿ. ಕುಮಾರಸ್ವಾಮಿ
ಜೆಡಿಎಸ್ ಮುಖಂಡ ಸಿರಾಜ್ ಹಾಗೂ ಸ್ನೇಹಿತರೊಂದಿಗೆ ಕೇಕ್ ಕಟ್ ಮಾಡಿರುವ ಕುಮಾರಸ್ವಾಮಿ ತಮ್ಮ 61ನೇ ಹುಟ್ಟುಹಬ್ಬಕ್ಕೆ ಕಾಫಿನಾಡಿಗೆ ಆಗಮಿಸಿರುವ ಕುರಿತು ತಾವಾಗಿಯೇ ಯಾರಿಗೂ ತಿಳಿಸಿಲ್ಲ
ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಾಫಿನಾಡಿನಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿಯ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದ ಹೆಚ್ಡಿಕೆ ತಮ್ಮ ಸ್ನೇಹಿತರೊಂದಿಗೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿದ್ದಾರೆ.
ಮುಳ್ಳಯ್ಯನಗಿರಿ ಸಮೀಪದಲ್ಲಿರುವ ಜಾವರಿನ್ ರೆಸಾರ್ಟ್ನಲ್ಲಿ ತಂಗಿದ್ದ ಹೆಚ್ಡಿಕೆ ಯಾರಿಗೂ ಗೊತ್ತಾಗದಂತೆ ಗುಟ್ಟಾಗಿ ನಿನ್ನೆಯೇ ಆಗಮಿಸಿದ್ದರು. ಜೆಡಿಎಸ್ ಕಾರ್ಯಕರ್ತರಿಗೂ ಸಹ ತಮ್ಮ ನಾಯಕ ಆಗಮಿಸಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಜೆಡಿಎಸ್ ಮುಖಂಡ ಸಿರಾಜ್ ಹಾಗೂ ಸ್ನೇಹಿತರೊಂದಿಗೆ ಕೇಕ್ ಕಟ್ ಮಾಡಿರುವ ಕುಮಾರಸ್ವಾಮಿ ಸಾ.ರಾ. ಮಹೇಶ್ ಹಾಗೂ ಭೋಜೇಗೌಡರೊಂದಿಗೆ ರೆಸಾರ್ಟ್ನಲ್ಲಿ ಉಳಿದುಕೊಂಡಿದ್ದರು ಎಂದು ತಿಳಿದುಬಂದಿದೆ.
ದೇವರು ಆಯುರಾರೋಗ್ಯ ಕರುಣಿಸಿ ಕಾಪಾಡಲಿ: HDKಗೆ ಪ್ರಧಾನಿ ಮೋದಿಯಿಂದ ಟ್ವಿಟರ್ ಶುಭಾಶಯ
Published On - 6:09 pm, Wed, 16 December 20