ವಾಸುದೇವ ಮಯ್ಯ ಆತ್ಮಹತ್ಯೆ ಪ್ರಕರಣ: 11 ಜನರ ವಿರುದ್ಧ FIR

ವಾಸುದೇವ ಮಯ್ಯ ಆತ್ಮಹತ್ಯೆ ಪ್ರಕರಣ: 11 ಜನರ ವಿರುದ್ಧ FIR

ಬೆಂಗಳೂರು: ಗುರುರಾಘವೇಂದ್ರ ಕೋ-ಆಪರೇಟಿವ್ ಸೊಸೈಟಿ ಮಾಜಿ ಸಿಇಒ ಎಂ.ವಾಸುದೇವ ಮಯ್ಯ ಆತ್ಮಹತ್ಯೆ ಪ್ರಕರಣ ಸಂಬಂಧ 11 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಾಸುದೇವ ಮಯ್ಯ ಪುತ್ರಿ ರಶ್ಮಿ ದೂರು ಮೇರೆಗೆ ಕೇಸ್ ದಾಖಲಾಗಿದೆ.

ತಮ್ಮ ತಂದೆಗೆ ಮಾನಸಿಕ ಕಿರುಕುಳ ನೀಡಿದ್ದಾರೆಂದು ದೂರಿನಲ್ಲಿ ರಶ್ಮಿ ಆರೋಪಿಸಿದ್ದಾರೆ. ಪ್ರಸ್ತುತ ಸಿಇಒ ಸಂತೋಷ್ ಕುಮಾರ್, ರವಿ ಐತ್ಯಾಳ, ರಾಕೇಶ್, ಶ್ರೀಪಾದ ಹೆಗಡೆ, ಪ್ರಶಾಂತ್ ಎಂಬುವರ ವಿರುದ್ಧ ದೂರು ದಾಖಲಾಗಿದೆ. ರಶ್ಮಿ ನೀಡಿದ ದೂರು ಆಧರಿಸಿ 11 ಜನರ ವಿರುದ್ಧ ಎಫ್‌ಐಆರ್ ಬಿದ್ದಿದೆ.

ಬ್ಯಾಂಕ್ ಬೋರ್ಡ್ ಸದಸ್ಯರ ಅನುಮತಿಯಂತೆ ಸಾಲ ನೀಡಲಾಗಿತ್ತು. ಅದ್ರೆ 2019ರಲ್ಲಿ RBI ಆಡಿಟ್ ವೇಳೆ ಸರಿಯಾಗಿ ದತ್ತಾಂಶ ನೀಡಲಿಲ್ಲ. RBI ಪರಿವೀಕ್ಷಣೆ ವೇಳೆ ತಮ್ಮ ತಂದೆ ಕಡೆಯಿಂದ ಬಲವಂತವಾಗಿ ದಾಖಲೆಗಳ ಮೇಲೆ ಸಹಿ ಪಡೆಯಲಾಗಿತ್ತು. ಬ್ಯಾಂಕಿನ ಮುಖ್ಯ ಕಚೇರಿ ನೆಟ್ಟಕಲ್ಲಪ್ಪ ಸರ್ಕಲ್ ಬಳಿಯಿದೆ. ಅದ್ರೆ ಅವ್ಯವಹಾರ ಬಗ್ಗೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದು ಸಂಶಯ ಮೂಡಿಸಿದೆ. ನಮ್ಮ ತಂದೆಯವರಿಗೆ ಬ್ಯಾಂಕ್ ವಹಿವಾಟಿನ ಬಗ್ಗೆ ತಿಳುವಳಿಕೆ ಇಲ್ಲದೆ ಇದ್ದರಿಂದ ಕಂಪ್ಯೂಟರ್ ಪಾಸ್ ವರ್ಡ್ ಸಹೋದ್ಯೋಗಿಗಳಿಗೆ ನೀಡಿದ್ದರು. ತಮ್ಮ ತಂದೆ ಮಾಡದ ತಪ್ಪಿಗೆ ಅವರನ್ನ ಹೊಣೆಗಾರಿಕೆ ಮಾಡಿದ್ದಾರೆ. ಆದ್ರಿಂದ ನಮ್ಮ ತಂದೆ ಆತ್ಮಹತ್ಯೆ ಮಾಡಿಕೊಳ್ಳುವಾಗ ಬರೆದಿರುವ ಡೆತ್‌ನೋಟ್ ಪರಿಗಣಿಸಿ ಕ್ರಮ ಕೈಗೊಳ್ಳುವಂತೆಯೂ ರಶ್ಮಿ ಮನವಿ ಮಾಡಿದ್ದಾರೆ.

ರಘುನಾಥ್, ರೆಡ್ಡಿ ಬ್ರದರ್ಸ್, ಕುಮಾರೇಶ್, ರಜತ್, ತಲ್ಲಂ ಸೇರಿದಂತೆ ಹಲವರ ವಿರುದ್ಧ ಸುಬ್ರಹ್ಮಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಲ್ಲದೆ ಈ ಪ್ರಕರಣ ಸಿಐಡಿಗೆ ಹಸ್ತಾಂತರಿಸುವಂತೆ ದಕ್ಷಿಣ ವಿಭಾಗದ ಪೊಲೀಸರು ಡಿಜಿಐಜಿಪಿಗೆ ಮನವಿ ಮಾಡಿಕೊಂಡಿದ್ದಾರೆ. ವಾಸುದೇವ ಮತ್ತು ಮೈಯ್ಯಾ ವಿರುದ್ಧ ಒಂದು ವಂಚನೆ ಪ್ರಕರಣ ಸಿಐಡಿ ತನಿಖೆಯಲ್ಲಿದೆ. ಇನ್ನೊಂದು ಪ್ರಕರಣ ಎಸಿಬಿ ತನಿಖೆಯಲ್ಲಿದೆ. ತನಿಖೆಗೆ ಹಿನ್ನಡೆಯಾಗಬಹುದಾದ ಹಿನ್ನೆಲೆಯಲ್ಲಿ ಸಿಐಡಿಗೆ ಹಸ್ತಾಂತರಿಸಲು ದ.ವಿಭಾಗದ ಪೊಲೀಸರು ಮನವಿ ಮಾಡಿದ್ದಾರೆ.

Published On - 7:51 am, Thu, 9 July 20

Click on your DTH Provider to Add TV9 Kannada