ಅಂಡರ್‌ ಪಾಸ್ ಜಲಾವೃತ: ಗೂಡ್ಸ್ ವಾಹನ ಹೊರತೆಗೆಯಲು ಸಿಬ್ಬಂದಿ ಹರಸಾಹಸ

ಬಾಗಲಕೋಟೆ: ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಸುರಿದ ಭಾರಿ ಮಳೆಯು ಅವಾಂತರ ತಂದೊಡ್ಡಿದೆ. ಹುನಗುಂದ-ಅಮರಾವತಿ ರಸ್ತೆ ಅಂಡರ್‌ ಪಾಸ್ ಜಲಾವೃತಗೊಂಡಿದೆ. ಈ ಪರಿಣಾಮ ಗೂಡ್ಸ್ ವಾಹನ ಮುಳುಗಿದ್ದು, ನೀರಿನಲ್ಲಿ ಸಿಲುಕಿದ್ದ ವಾಹನವನ್ನು ಹರಸಾಹಸದ ನಂತರ ಹೊರತೆಗೆಯಲಾಗಿದೆ. ಧಾರಾಕಾರ ಮಳೆಯಿಂದ ಅಂಡರ್ ಪಾಸ್​ನಲ್ಲಿ ಗೂಡ್ಸ್ ವಾಹನ ಮುಳುಗಿತ್ತು. ಅದೃಷ್ಟವಶಾತ್ ಚಾಲಕ ಬಸವರಾಜ ವಾಲಿಕಾರ ಪಾರಾಗಿದ್ದಾನೆ. ಬಳಿಕ ಈಜುತ್ತಾ ವಾಹನದ ಬಳಿ ತೆರಳಿದ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ವಾಹನ ಹೊರತೆಗೆಯುವ ಕಾರ್ಯಾಚರಣೆ ನಡೆದಿದ್ದು ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಬಹಳ ಸಾಹಸದ ನಂತರ […]

ಅಂಡರ್‌ ಪಾಸ್ ಜಲಾವೃತ: ಗೂಡ್ಸ್ ವಾಹನ ಹೊರತೆಗೆಯಲು ಸಿಬ್ಬಂದಿ ಹರಸಾಹಸ
Edited By:

Updated on: Sep 26, 2020 | 12:21 PM

ಬಾಗಲಕೋಟೆ: ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಸುರಿದ ಭಾರಿ ಮಳೆಯು ಅವಾಂತರ ತಂದೊಡ್ಡಿದೆ. ಹುನಗುಂದ-ಅಮರಾವತಿ ರಸ್ತೆ ಅಂಡರ್‌ ಪಾಸ್ ಜಲಾವೃತಗೊಂಡಿದೆ. ಈ ಪರಿಣಾಮ ಗೂಡ್ಸ್ ವಾಹನ ಮುಳುಗಿದ್ದು, ನೀರಿನಲ್ಲಿ ಸಿಲುಕಿದ್ದ ವಾಹನವನ್ನು ಹರಸಾಹಸದ ನಂತರ ಹೊರತೆಗೆಯಲಾಗಿದೆ.

ಧಾರಾಕಾರ ಮಳೆಯಿಂದ ಅಂಡರ್ ಪಾಸ್​ನಲ್ಲಿ ಗೂಡ್ಸ್ ವಾಹನ ಮುಳುಗಿತ್ತು. ಅದೃಷ್ಟವಶಾತ್ ಚಾಲಕ ಬಸವರಾಜ ವಾಲಿಕಾರ ಪಾರಾಗಿದ್ದಾನೆ. ಬಳಿಕ ಈಜುತ್ತಾ ವಾಹನದ ಬಳಿ ತೆರಳಿದ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ವಾಹನ ಹೊರತೆಗೆಯುವ ಕಾರ್ಯಾಚರಣೆ ನಡೆದಿದ್ದು ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಬಹಳ ಸಾಹಸದ ನಂತರ ಯಶಸ್ವಿಯಾಗಿ ಗೂಡ್ಸ್ ವಾಹನವನ್ನು ಹೊರತೆಗೆಯಲಾಗಿದೆ.