ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕರ ರಕ್ಷಣೆ
ಯಾದಗಿರಿ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವರ್ಷಧಾರೆಯ ಆರ್ಭಟ ಜೋರಾಗಿದೆ. ಯಾದಗಿರಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಈ ವೇಳೆ ದುರ್ಘಟನೆಯೊಂದು ಸಂಭವಿಸಿದೆ. ಯುವಕರಿಬ್ಬರು ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಘಟನೆ ಗುರುಮಠಕಲ್ ತಾಲೂಕಿನ ಎಲ್ಹೇರಿ ಗ್ರಾಮದಲ್ಲಿ ನಡೆದಿದ್ದು, ಕೊಚ್ಚಿ ಹೋಗುತ್ತಿದ್ದ ನಿಂಗಪ್ಪ, ಮತ್ತು ಇನ್ನೊಬ್ಬನನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಸೇತುವೆ ಮೂಲಕ ಬೈಕ್ ಮೇಲೆ ಹಳ್ಳ ದಾಟಲು ಹೋದಾಗ ನೀರಿನ ರಭಸಕ್ಕೆ ನಿಂಗಪ್ಪ ಮತ್ತು ಬೈಕ್ ಹಿಂದೆ ಕೂತಿದ್ದ ಮತ್ತೋರ್ವ ಕೊಚ್ಚಿ ಹೋಗಿದ್ದಾರೆ. ಈ ವೇಳೆ […]

ಯಾದಗಿರಿ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವರ್ಷಧಾರೆಯ ಆರ್ಭಟ ಜೋರಾಗಿದೆ. ಯಾದಗಿರಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಈ ವೇಳೆ ದುರ್ಘಟನೆಯೊಂದು ಸಂಭವಿಸಿದೆ.
ಯುವಕರಿಬ್ಬರು ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಘಟನೆ ಗುರುಮಠಕಲ್ ತಾಲೂಕಿನ ಎಲ್ಹೇರಿ ಗ್ರಾಮದಲ್ಲಿ ನಡೆದಿದ್ದು, ಕೊಚ್ಚಿ ಹೋಗುತ್ತಿದ್ದ ನಿಂಗಪ್ಪ, ಮತ್ತು ಇನ್ನೊಬ್ಬನನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.
ಸೇತುವೆ ಮೂಲಕ ಬೈಕ್ ಮೇಲೆ ಹಳ್ಳ ದಾಟಲು ಹೋದಾಗ ನೀರಿನ ರಭಸಕ್ಕೆ ನಿಂಗಪ್ಪ ಮತ್ತು ಬೈಕ್ ಹಿಂದೆ ಕೂತಿದ್ದ ಮತ್ತೋರ್ವ ಕೊಚ್ಚಿ ಹೋಗಿದ್ದಾರೆ.
ಈ ವೇಳೆ ಸ್ಥಳದಲ್ಲಿದ್ದ ಗ್ರಾಮಸ್ಥರು ಸ್ವಲ್ವವೂ ಕಾಲಹರಣ ಮಾಡದೆ, ಹಗ್ಗದ ಮೂಲಕ ನಿಂಗಪ್ಪ ಮತ್ತು ಮತ್ತೋರ್ವನನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗಿದೆ. ಆದ್ರೆ ನಿನ್ನೆ ರಾತ್ರಿ ಭಾರೀ ಮಳೆಯಾದ ಕಾರಣ ಸೇತುವೆ ಮುಳುಗಡೆಯಾಗಿದೆ.




