AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂತಾರಾಷ್ಟ್ರೀಯ ಕೋರ್ಟ್​ನಲ್ಲಿ Vodafoneಗೆ ಕೋಟಿ ಕೋಟಿ ರಿಲೀಫ್​; ಭಾರತಕ್ಕೆ ಹಿನ್ನಡೆ

ಭಾರತ ಸರ್ಕಾರ ವಿಧಿಸಿದ್ದ 20,000 ಕೋಟಿ ಪೂರ್ವಾನ್ವಯ ತೆರಿಗೆ ವಿಚಾರವಾಗಿ ವ್ಯಾಜ್ಯಗಳ ಕಾಯಂ ನ್ಯಾಯಾಲಯದಲ್ಲಿ (ಪರ್ಮನೆಂಟ್​ ಕೋರ್ಟ್ ಆಫ್​ ಆರ್ಬಿಟ್ರೇಷನ್) ನಡೆಯುತ್ತಿದ್ದ ಕೇಸ್​ನಲ್ಲಿ ಪ್ರತಿಷ್ಠಿತ ಟೆಲಿಕಾಂ ಕಂಪನಿ ವೊಡಾಫೋನ್​ಗೆ ದೊಡ್ಡ ರಿಲೀಫ್​ ಸಿಕ್ಕದೆ. ಕಳೆದ ಶುಕ್ರವಾರ ನೆದರ್​ಲ್ಯಾಂಡ್​ನ ಹೇಗ್​ ನಗರದಲ್ಲಿರುವ ವ್ಯಾಜ್ಯಗಳ ಕಾಯಂ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಕೇಸ್​ಗೆ ಸಂಬಂಧಿಸಿದಂತೆ ನ್ಯಾಯಾಲಯವು ವೊಡಾಫೋನ್​ ಪರವಾಗಿ ತೀರ್ಪು ನೀಡಿದೆ. ಜೊತೆಗೆ, ತನ್ನ ತೀರ್ಪಿನಲ್ಲಿ ಭಾರತದ ಆದಾಯ ತೆರಿಗೆ ಇಲಾಖೆಯು ವೊಡಾಫೋನ್​ ಸಂಸ್ಥೆಯ ಜೊತೆ ನ್ಯಾಯೋಚಿತವಾಗಿ ವರ್ತಿಸಿಲ್ಲ ಎಂದು ಹೇಳಿದೆ. 2007ರಲ್ಲಿ […]

ಅಂತಾರಾಷ್ಟ್ರೀಯ ಕೋರ್ಟ್​ನಲ್ಲಿ Vodafoneಗೆ ಕೋಟಿ ಕೋಟಿ ರಿಲೀಫ್​; ಭಾರತಕ್ಕೆ ಹಿನ್ನಡೆ
KUSHAL V
| Edited By: |

Updated on: Sep 26, 2020 | 1:59 PM

Share

ಭಾರತ ಸರ್ಕಾರ ವಿಧಿಸಿದ್ದ 20,000 ಕೋಟಿ ಪೂರ್ವಾನ್ವಯ ತೆರಿಗೆ ವಿಚಾರವಾಗಿ ವ್ಯಾಜ್ಯಗಳ ಕಾಯಂ ನ್ಯಾಯಾಲಯದಲ್ಲಿ (ಪರ್ಮನೆಂಟ್​ ಕೋರ್ಟ್ ಆಫ್​ ಆರ್ಬಿಟ್ರೇಷನ್) ನಡೆಯುತ್ತಿದ್ದ ಕೇಸ್​ನಲ್ಲಿ ಪ್ರತಿಷ್ಠಿತ ಟೆಲಿಕಾಂ ಕಂಪನಿ ವೊಡಾಫೋನ್​ಗೆ ದೊಡ್ಡ ರಿಲೀಫ್​ ಸಿಕ್ಕದೆ. ಕಳೆದ ಶುಕ್ರವಾರ ನೆದರ್​ಲ್ಯಾಂಡ್​ನ ಹೇಗ್​ ನಗರದಲ್ಲಿರುವ ವ್ಯಾಜ್ಯಗಳ ಕಾಯಂ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಕೇಸ್​ಗೆ ಸಂಬಂಧಿಸಿದಂತೆ ನ್ಯಾಯಾಲಯವು ವೊಡಾಫೋನ್​ ಪರವಾಗಿ ತೀರ್ಪು ನೀಡಿದೆ. ಜೊತೆಗೆ, ತನ್ನ ತೀರ್ಪಿನಲ್ಲಿ ಭಾರತದ ಆದಾಯ ತೆರಿಗೆ ಇಲಾಖೆಯು ವೊಡಾಫೋನ್​ ಸಂಸ್ಥೆಯ ಜೊತೆ ನ್ಯಾಯೋಚಿತವಾಗಿ ವರ್ತಿಸಿಲ್ಲ ಎಂದು ಹೇಳಿದೆ.

2007ರಲ್ಲಿ ಭಾರತದ ಆದಾಯ ತೆರಿಗೆ ಇಲಾಖೆಯು ಇಂಗ್ಲೆಂಡ್​ ಮೂಲದ ವೊಡಾಫೋನ್​ ಕಂಪನಿಗೆ 22,100 ಕೋಟಿ ರೂಪಾಯಿ ಪೂರ್ವಾನ್ವಯ ತೆರಿಗೆ ಕಟ್ಟಲು ನೋಟಿಸ್​ ನೀಡಿತ್ತು. ಕಂಪನಿಯು ದೇಶದಲ್ಲಿ ನಡೆಸಿದ್ದ ಕೆಲ ಆರ್ಥಿಕ ವ್ಯವಹಾರಗಳ ಮೇಲೆ ತೆರಿಗೆ ಪಾವತಿಸಿರಲಿಲ್ಲ ಎಂದು ಇಲಾಖೆಯು ನೋಟಿಸ್​ ಜಾರಿ ಮಾಡಿತ್ತು. 

ವೊಡಾಫೋನ್​ ಈ ಕುರಿತು 2012ರಲ್ಲಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿ ಗೆಲುವು ಸಹ ಸಾಧಿಸಿತ್ತು. ಆದರೆ, ಅಷ್ಟಕ್ಕೇ ನಿಲ್ಲದ ಭಾರತ ಸರ್ಕಾರ ಹೊಸ ಹಣಕಾಸಿನ ಕಾನೂನು ವಿಧಿಸಿ ಪೂರ್ನಾನ್ವಯ ತೆರಿಗೆ ವಸೂಲಿಗೆ ಮುಂದಾಗಿತ್ತು. ಹಾಗಾಗಿ, ವೊಡಾಫೋನ್​ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆಹೋಗಿತ್ತಿ.

ಇದೀಗ, ವ್ಯಾಜ್ಯಗಳ ಕಾಯಂ ನ್ಯಾಯಾಲಯದಲ್ಲಿ ವೊಡಾಫೋನ್​ ಗೆಲುವು ಸಾಧಿಸಿದೆ. ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಭಾರತ ಸರ್ಕಾರ ಪೂರ್ನಾನ್ವಯ ತೆರಿಗೆ ವಿಧಿಸಲು ಮುಂದಾಗಿದ್ದು ಭಾರತ ಮತ್ತು ನೆದರ್​ಲ್ಯಾಂಡ್​ ದೇಶಗಳ ನಡುವಿನ ಹೂಡಿಕೆ ಒಪ್ಪಂದದ ಉಲ್ಲಂಘನೆ ಎಂದು ಉಲ್ಲೇಖಿಸಿದೆ.

‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್