ಕೆಮಿಕಲ್ ತುಂಬಿದ ಬ್ಯಾರೆಲ್ನಲ್ಲಿ ದಿಢೀರ್ ಬೆಂಕಿ: ನಿನ್ನೆ ಹೊತ್ತಿದ ಬೆಂಕಿ ಇನ್ನೂ ನಂದಿಲ್ಲ.. ಅಗ್ನಿಶಾಮಕದಳ ಸಿಬ್ಬಂದಿ ಹರಸಾಹಸ
ಬೆಂಗಳೂರು: ಹಿಂದೆಂದೂ ಕಂಡಿರದಂತಾ ಬೆಂಕಿ.. ಎಂದೂ ಕಾಣದ ಹೊಗೆ.. ಬೆಂಗಳೂರು ಯಾವುತ್ತೂ ನೋಡಿರದ ಅಗ್ನಿ.. ಕೆಮಿಕಲ್ ತಯಾರಿಕ ಘಟಕದಲ್ಲಿ ಹೊತ್ತಿದ್ದ ಬೆಂಕಿ ಇಡೀ ರಾಜಧಾನಿಯನ್ನ ಬೆಚ್ಚಿ ಬೀಳಿಸಿದೆ. 56ಕ್ಕೂ ಅಧಿಕ ಅಗ್ನಿಶಾಮಕ ವಾಹನಗಳು ಅಖಾಡಕ್ಕಿಳಿದ್ರು, ಕಂಟ್ರೋಲ್‌ಗೆ ಬರದೇ ಹೊತ್ತಿ ಉರಿದಿದೆ. ಭವ್ಯ ನಗರದ ದಶ ದಿಕ್ಕಿನಲ್ಲೂ ನಿಂತು ನೋಡಿದ್ರೂ ಹೊಗೆ ಕಾಣ್ತಿತ್ತು. ಕಿಲೋ ಮೀಟರ್ ದೂರದಲ್ಲೇ ಬೆಂಕಿ ಗೋಚರಿಸುತ್ತಿತ್ತು. ನೂರಾರು ಮೀಟರ್‌ವರೆಗೂ ಶಾಕ ತಟ್ಟಿತ್ತು. ಸುತ್ತಮುತ್ತಲ ಮನೆಗಳನ್ನೇ ಆವರಿಸಿತ್ತು. ಕಾರುಗಳು ಸುಟ್ಟು ಹೋದ್ವು. ತಯಾರಿಕ ಘಟಕವೇ ಭಸ್ಮವಾಯ್ತು. […]

ಬೆಂಗಳೂರು: ಹಿಂದೆಂದೂ ಕಂಡಿರದಂತಾ ಬೆಂಕಿ.. ಎಂದೂ ಕಾಣದ ಹೊಗೆ.. ಬೆಂಗಳೂರು ಯಾವುತ್ತೂ ನೋಡಿರದ ಅಗ್ನಿ.. ಕೆಮಿಕಲ್ ತಯಾರಿಕ ಘಟಕದಲ್ಲಿ ಹೊತ್ತಿದ್ದ ಬೆಂಕಿ ಇಡೀ ರಾಜಧಾನಿಯನ್ನ ಬೆಚ್ಚಿ ಬೀಳಿಸಿದೆ. 56ಕ್ಕೂ ಅಧಿಕ ಅಗ್ನಿಶಾಮಕ ವಾಹನಗಳು ಅಖಾಡಕ್ಕಿಳಿದ್ರು, ಕಂಟ್ರೋಲ್‌ಗೆ ಬರದೇ ಹೊತ್ತಿ ಉರಿದಿದೆ.
ಭವ್ಯ ನಗರದ ದಶ ದಿಕ್ಕಿನಲ್ಲೂ ನಿಂತು ನೋಡಿದ್ರೂ ಹೊಗೆ ಕಾಣ್ತಿತ್ತು. ಕಿಲೋ ಮೀಟರ್ ದೂರದಲ್ಲೇ ಬೆಂಕಿ ಗೋಚರಿಸುತ್ತಿತ್ತು. ನೂರಾರು ಮೀಟರ್‌ವರೆಗೂ ಶಾಕ ತಟ್ಟಿತ್ತು. ಸುತ್ತಮುತ್ತಲ ಮನೆಗಳನ್ನೇ ಆವರಿಸಿತ್ತು. ಕಾರುಗಳು ಸುಟ್ಟು ಹೋದ್ವು. ತಯಾರಿಕ ಘಟಕವೇ ಭಸ್ಮವಾಯ್ತು. ಕಿಲೋ ಮೀಟರ್ ಉದ್ದಕ್ಕೂ ಟ್ರಾಫಿಕ್ ಜಾಮ್ ಆಗಿತ್ತು. ಇಂದೆಂದೂ ಕಾಣದ ಮಹಾ ಅಗ್ನಿದುರಂತವೇ ಬೆಂಗಳೂರಿನಲ್ಲಿ ನಡೆದು ಹೋಯ್ತು.
ಬೆಂಗಳೂರಿನಲ್ಲಿ ಹೊತ್ತಿ ಉರಿದ ಕೆಮಿಕಲ್ ಘಟಕ!
ನಿನ್ನೆ ಬೆಳಗ್ಗೆ 11.30 ರ ಸಮಯ. ಬಾಪೂಜಿನಗರ ಹೊಸಗುಡ್ಡದಹಳ್ಳಿಯ 1 ನೇ ಮುಖ್ಯರಸ್ತೆಯಲ್ಲಿರೋ ಕೆಮಿಕಲ್ ಘಟಕದಲ್ಲಿ ಎಂದಿನಂತೆ ಐದಾರು ಸಿಬ್ಬಂದಿ ಕೆಲಸ ಮಾಡ್ತಿದ್ರು. ಈ ಘಟಕದಲ್ಲಿ ಥಿನ್ನರ್, ಸ್ಯಾನಿಟೈಸರ್ ತಯಾರಿಸಲಾಗ್ತಿದ್ದು, ಕಾರ್ಮಿಕರು ಕೆಲಸದಲ್ಲಿ ಬ್ಯುಸಿಯಾಗಿದ್ರು. ಇದೇ ಹೊತ್ತಲ್ಲಿ ಅದೇನಾಯ್ತೋ ಕೆಮಿಕಲ್ ತುಂಬಿದ್ದ ಒಂದು ಬ್ಯಾರಲ್‌ಗೆ ಏಕಾಏಕಿ ಬೆಂಕಿ ಹೊತ್ತಿಕೊಳ್ತು. ನೋಡ ನೋಡ್ತಿದ್ದಂತೆ ಇಡೀ ಘಟಕಕ್ಕೆ ಬೆಂಕಿ ಆವರಿಸಿತ್ತು. ಒಳಗಿದ್ದ ಕಾರ್ಮಿಕರು ಎದ್ನೋ ಬಿದ್ನೋ ಅಂತ ಹೊರಗೆ ಓಡಿ ಬಂದ್ರು. ಬೆಂಕಿ ಅದೆಷ್ಟರ ಮಟ್ಟಿಗೆ ವ್ಯಾಪಿಸಿತ್ತು ಅಂದ್ರೆ, ಅಣುಬಾಂಬ್ ಪ್ರಯೋಗಿಸಿದಾಗ ಸಿಡಿಯೋ ಜ್ವಾಲೆಯಂತೆ ಸ್ಫೋಟಿಸಿತ್ತು. ಕೆಮಿಕಲ್ ತುಂಬಿದ್ದ ಬ್ಯಾರಲ್‌ಗಳು ಬಾಂಬ್‌ಗಳಂತೆ ಸಿಡಿಯುತಿದ್ವು.
56ಕ್ಕೂ ಅಧಿಕ ಅಗ್ನಿಶಾಮಕ ವಾಹನ.. ನಿರಂತರ ಕಾರ್ಯಾಚರಣೆ! ಹತ್ತಾರು ವಾಹನಗಳು ಬೆಂಕಿ ನಂದಿಸೋ ಕೆಲಸದಲ್ಲಿ ನಿರತವಾಗಿದ್ರು ಬೆಂಕಿ ಮಾತ್ರ ಹತೋಟಿಗೆ ಬರ್ಲಿಲ್ಲ. ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಲೇ ಹೋಯ್ತು. ಹೀಗಾಗಿ ಸಂಜೆ ವೇಳೆಗೆ ಬರೋಬ್ಬರಿ 56 ಅಗ್ನಿ ಶಾಮಕವಾಹನಗಳು ಆಗಮಿಸಿದ್ದು, ಇನ್ನೂ ಕಾರ್ಯಾಚರಣೆಯಲ್ಲಿ ತೊಡಿಗಿವೆ. ಪೆಟ್ರೋಲಿಯಂ ಹಾಗೂ ಆಲ್ಕೋಹಾಲ್ ಉತ್ಪನ್ನಗಳೇ ತುಂಬಿರೋದ್ರಿಂದ ಅಗ್ನಿ ಕ್ಷಣ ಕ್ಷಣಕ್ಕೂ ಹೆಚ್ಚಾಗ್ತಿದೆ ನೀರುಸುರಿದಷ್ಟು ಒಂದೊಂದಾಗಿ ಕೆಮಿಕಲ್ ಡ್ರಮ್ ಗಳು ಸ್ಪೋಟಿಸುತ್ತಲೇ ಇದ್ದು, ಬೆಂಕಿಯ ಆರ್ಭಟ ಹೆಚ್ಚುತ್ತಲೇ ಇದೆ. ಗೋದಾಮಿನಲ್ಲಿ 1 ಸಾವಿರಕ್ಕೂ ಹೆಚ್ಚು ಬ್ಯಾರೆಲ್‌ಗಳಿದ್ದವು ಎಂಬುದು ಹೇಳಲಾಗ್ತಿದೆ.
ಗೋದಾಮಿನ ಅಕ್ಕಪಕ್ಕದ ಮನೆಗಳ ನಿವಾಸಿಗಳು ಸ್ಥಳಾಂತರ: ಕೆಮಿಕಲ್ ಗೋದಾಮುನಲ್ಲಿ ಹೊತ್ತಿದ ಬೆಂಕಿ ಕಂಟ್ರೋಲ್‌ಗೆ ಬರತ್ತಿಲ್ಲ. ಈ ಬೆಂಕಿ ನೆರೆಹೊರೆಯ ಮನೆಗಳಿಗೂ ವ್ಯಾಪಿಸಿ, ದಟ್ಟಹೊಗೆಯಿಂದ ಉಸಿರಾಟಕ್ಕೆ ಸಮಸ್ಯೆಯಾಗುವ ಸಾಧ್ಯತೆ ಇತ್ತು. ಹೀಗಾಗಿ ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿ ಗೋದಾಮಿನ ಅಕ್ಕಪಕ್ಕದ 50ಕ್ಕೂ ಹೆಚ್ಚು ಮನೆಗಳ ನಿವಾಸಿಗಳ ಮನವೊಲಿಸಿ ಬೇರೆಡೆ ಸ್ಥಳಾಂತರ ಮಾಡಲಾಯ್ತು.
ಅಗ್ನಿ ನರ್ತನದಿಂದ 2-3 ಕೋಟಿ ರೂಪಾಯಿ ನಷ್ಟ! ವಾಹನಗಳು ಸೇರಿದಂತೆ ಅಂದಾಜು 2 ರಿಂದ 3 ಕೋಟಿ ಅಗ್ನಿ ಅವಘಡದಿಂದ ನಷ್ಟವಾಗಿದೆ. ಘಟನೆ ಸಂಬಂದ ಆರೋಪಿಗಳಾದ ಕಮಲ ಮತ್ತು ಸಜ್ಜನ್ ರಾಜ್ ವಿರುದ್ಧ ಬ್ಯಾಟರಾಯನಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 338, 285,427 , ಸ್ಪೋಟಕ ವಸ್ತುಗಳ ಕಾಯ್ದೆ ಅಡಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹೊಸಗುಡ್ಡದಹಳ್ಳಿ ನಿವಾಸಿಗಳು ದೀಪಾವಳಿ ಸಂಭ್ರಮಕ್ಕೆ ಅಣಿಯಾಗೊ ಹೊತ್ತಿನಲ್ಲಿ ಈ ದುರಂತ ನಡೆದಿದ್ದು, ಕಗ್ಗತ್ತಲು ಆವರಿಸುವಂತಾಗಿದೆ. ತಮ್ಮದಲ್ಲದ ತಪ್ಪಿಗೆ ಅಕ್ಕ-ಪಕ್ಕದ ನಿವಾಸಿಗಳು ಕಂಗೆಟ್ಟು ಹೋಗಿದ್ದಾರೆ. ಕಷ್ಟ ಪಟ್ಟು ಹಣ ಕೂಡಿಟ್ಟು, ಸಾಲಮಾಡಿ ಕಟ್ಟಿದ ಮನೆ, ಮನೆ ಸಾಮಾಗ್ರಿಗಳು, ಪಿಠೋಪಕರಣಗಳು, ವಾಹನಗಳು ಬೆಂಕಿಯ ಕೆನ್ನಾಲಿಗೆಗೆ ದಹಿಸಿದ್ದು, ಕೋಟಿ ಕೋಟಿ ನಷ್ಟ ಉಂಟಾಗಿದೆ.
ಒಟ್ನಲ್ಲಿ ಕ್ಷಣಮಾತ್ರದಲ್ಲಿ ಹೊತ್ತಿದ ಬೆಂಕಿ ಇನ್ನೂ ಧಗಧಗಿಸುತ್ತಿದೆ ಬೆಂಕಿಯ ಈ ಕೆನ್ನಾಲಿಗೆ ಹತ್ತಾರು ಕುಟುಂಬಗಳನ್ನ ಬೆಂದು ಹೋಗುವಂತೆ ಮಾಡಿದ್ದು, ಬೆಳಕಿನ ಹಬ್ಬದ ಸಂದರ್ಭದಲ್ಲಿ ಕತ್ತಲು ಆವರಿಸಿದೆ.





