ಹೋಂಡಾ ಶೋ ರೂಮ್ ಧಗಧಗ, ಲಕ್ಷಾಂತರ ಮೌಲ್ಯದ ಬೈಕ್​ಗಳು ಬೆಂಕಿಗಾಹುತಿ

ತುಮಕೂರು: ಬೈಕ್ ಶೋ ರೂಮ್‌ನಲ್ಲಿ ಏಕಾಏಕಿ ಅಗ್ನಿ ಅವಘಡ ಸಂಭವಿಸಿದ್ದು ಶೋ ರೂಮ್‌ನಲ್ಲಿದ್ದ ಬೈಕ್​ಗಳು ಬೆಂಕಿಗಾಹುತಿಯಾಗಿರುವ ಘಟನೆ ತುಮಕೂರಿನ B.H.ರಸ್ತೆಯಲ್ಲಿರುವ ಬೈಕ್ ಶೋ ರೂಮ್​ನಲ್ಲಿ ನಡೆದಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಬೈಕ್‌ಗಳು, ಅಪಾರ ಪ್ರಮಾಣದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಬೆಂಕಿಯ ತೀವ್ರತೆ ಹೆಚ್ಚಿದ್ದ ಕಾರಣ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು ಬೆಂಕಿ ನಂದಿಸಿದ್ದಾರೆ. ಇನ್ನು ಆತಂಕದ ವಿಚಾರ ಅಂದ್ರೆ 200 ಮೀಟರ್ ಅಂತರದಲ್ಲಿ ಪಟಾಕಿ ಮಳಿಗೆಗಳಿವೆ. ಆದರೆ […]

ಹೋಂಡಾ ಶೋ ರೂಮ್ ಧಗಧಗ, ಲಕ್ಷಾಂತರ ಮೌಲ್ಯದ ಬೈಕ್​ಗಳು ಬೆಂಕಿಗಾಹುತಿ

Updated on: Nov 15, 2020 | 7:05 AM

ತುಮಕೂರು: ಬೈಕ್ ಶೋ ರೂಮ್‌ನಲ್ಲಿ ಏಕಾಏಕಿ ಅಗ್ನಿ ಅವಘಡ ಸಂಭವಿಸಿದ್ದು ಶೋ ರೂಮ್‌ನಲ್ಲಿದ್ದ ಬೈಕ್​ಗಳು ಬೆಂಕಿಗಾಹುತಿಯಾಗಿರುವ ಘಟನೆ ತುಮಕೂರಿನ B.H.ರಸ್ತೆಯಲ್ಲಿರುವ ಬೈಕ್ ಶೋ ರೂಮ್​ನಲ್ಲಿ ನಡೆದಿದೆ.

ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಬೈಕ್‌ಗಳು, ಅಪಾರ ಪ್ರಮಾಣದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಬೆಂಕಿಯ ತೀವ್ರತೆ ಹೆಚ್ಚಿದ್ದ ಕಾರಣ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು ಬೆಂಕಿ ನಂದಿಸಿದ್ದಾರೆ. ಇನ್ನು ಆತಂಕದ ವಿಚಾರ ಅಂದ್ರೆ 200 ಮೀಟರ್ ಅಂತರದಲ್ಲಿ ಪಟಾಕಿ ಮಳಿಗೆಗಳಿವೆ. ಆದರೆ ಅದೃಷ್ಟವಶಾತ್ ಅನಾಹುತ ಸಂಭವಿಸಿಲ್ಲ.

ದೀಪಾವಳಿ ಹಬ್ಬ ಹಿನ್ನೆಲೆಯಲ್ಲಿ ಶೋ ರೋಮ್​ನಲ್ಲಿ ಪೂಜೆ ಮಾಡಲಾಗಿತ್ತು. ಈ ವೇಳೆ ದೀಪಗಳನ್ನು ಹಚ್ಚಲಾಗಿತ್ತು. ಬಹುಶಃ ಅದರಿಂದಲೇ ಬೆಂಕಿ ತಗುಲಿರುವ ಶಂಕೆ ಸಹ ವ್ಯಕ್ತವಾಗಿದೆ. ಬೆಂಕಿ ನಂದಿಸಿದರೂ ಹೊಗೆ ದಟ್ಟವಾಗಿ ಆವರಿಸಿದೆ. ಹೊಸ ಬಡವಾಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published On - 7:05 am, Sun, 15 November 20