ಕೊವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ, 10 ಜನ ಸಾವು
ಬುಕಾರೆಸ್ಟ: ಕೊವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ದುರಂತದಲ್ಲಿ 10 ಜನ ಮೃತಪಟ್ಟಿರುವ ಘಟನೆ ರುಮೇನಿಯಾದ ಕೊವಿಡ್ ಆಸ್ಪತ್ರೆಯ ICU ನಲ್ಲಿ ನಡೆದಿದೆ. ಪಿಯಾಟ್ರಾ ನೀಮ್ಟ್ ಕಂಟ್ರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ಅದು ಪಕ್ಕದ ಕೋಣೆಗೆ ಹರಡಿದೆ. ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಅಗ್ನಿ ಅವಘಡಕ್ಕೆ ಕಾರಣವೇನೆಂಬುವುದು ಇನ್ನು ಸ್ಪಷ್ಟವಾಗಿಲ್ಲ. ಅಲ್ಲದೆ ಘಟನೆಯಲ್ಲಿ ಕೊವಿಡ್ ವಾರ್ಡ್‌ನಲ್ಲಿದ್ದ 7 ಜನರಿಗೆ ಗಂಭೀರ ಗಾಯಗಳಾಗಿವೆ. ಆರೋಗ್ಯ ಸಚಿವ ನೆಲು ಟಾಟಾರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಉಳಿದಿರುವ […]
ಬುಕಾರೆಸ್ಟ: ಕೊವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ದುರಂತದಲ್ಲಿ 10 ಜನ ಮೃತಪಟ್ಟಿರುವ ಘಟನೆ ರುಮೇನಿಯಾದ ಕೊವಿಡ್ ಆಸ್ಪತ್ರೆಯ ICU ನಲ್ಲಿ ನಡೆದಿದೆ.
ಪಿಯಾಟ್ರಾ ನೀಮ್ಟ್ ಕಂಟ್ರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ಅದು ಪಕ್ಕದ ಕೋಣೆಗೆ ಹರಡಿದೆ. ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಅಗ್ನಿ ಅವಘಡಕ್ಕೆ ಕಾರಣವೇನೆಂಬುವುದು ಇನ್ನು ಸ್ಪಷ್ಟವಾಗಿಲ್ಲ. ಅಲ್ಲದೆ ಘಟನೆಯಲ್ಲಿ ಕೊವಿಡ್ ವಾರ್ಡ್‌ನಲ್ಲಿದ್ದ 7 ಜನರಿಗೆ ಗಂಭೀರ ಗಾಯಗಳಾಗಿವೆ.
ಆರೋಗ್ಯ ಸಚಿವ ನೆಲು ಟಾಟಾರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಉಳಿದಿರುವ ಆರು ರೋಗಿಗಳನ್ನು ಪೂರ್ವ ರೊಮೇನಿಯನ್ ನಗರದ ಕೋವಿಡ್ ಆಸ್ಪತ್ರೆಗೆ ವರ್ಗಾಯಿಸಿ ಚಿಕಿತ್ಸೆ ನೀಡಲಾಗುವುದ ಎಂದು ತಿಳಿಸಿದ್ರು. ಹಾಗೂ ಘಟನೆಯಲ್ಲಿ ದೇಹದ 40% ನಷ್ಟು ತೀವ್ರವಾದ ಸುಟ್ಟ ಗಾಯಗೊಂಡ ವೈದ್ಯರನ್ನು ರಾಜಧಾನಿ ಬುಚಾರೆಸ್ಟ್‌ನ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತೆ ಎಂದಿದ್ದಾರೆ.
Published On - 7:48 am, Sun, 15 November 20