ಭರವಸೆ ಮೂಡಿಸಿದ್ದ ಫೈಜರ್ನ ಲಸಿಕಾ ಪ್ರಯೋಗದಲ್ಲಿ ಎದುರಾಯ್ತಾ ತೊಡಕು?
ಕೊರೊನಾ ವೈರಸ್ನ ಮಟ್ಟಹಾಕುವ ನಿಟ್ಟಿನಲ್ಲಿ ವಿಶ್ವದಾದ್ಯಂತ ಲಸಿಕೆ ಮತ್ತು ಔಷಧಿಯ ಸಂಶೋಧನೆ ನಡೆಯುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಔಷಧಿ ತಯಾರಿಕಾ ಕಂಪನಿ ಫೈಜರ್ ಸಹ ಹೊಸ ಲಸಿಕೆವೊಂದನ್ನು ಸಿದ್ಧಪಡಿಸಿ, ಪ್ರಯೋಗಕ್ಕೆ ಒಳಪಡಿಸಿದೆ. ಆದರೆ, ಇದೀಗ ಇದರ ಫಲಿತಾಂಶ ಹೊರಬಂದಿದ್ದು ಆತಂಕವನ್ನು ಸೃಷ್ಟಿಸಿದೆ. ಫೈಜರ್ ಲಸಿಕೆಯ ಮೊದಲ ಪ್ರಯೋಗಕ್ಕೆ ಒಳಪಟ್ಟ ಸ್ವಯಂಸೇವಕರ ವರದಿಯ ಪ್ರಕಾರ ಈ ಲಸಿಕೆ ಪಡೆದವರಲ್ಲಿ ತೀವ್ರ ತಲೆನೋವು, ಜ್ವರ ಮತ್ತು ಸ್ನಾಯು ನೋವು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಈ ಹಿಂದೆ ಅಮೆರಿಕದ ಔಷಧಿ ನಿಯಂತ್ರಕ FDA […]
ಕೊರೊನಾ ವೈರಸ್ನ ಮಟ್ಟಹಾಕುವ ನಿಟ್ಟಿನಲ್ಲಿ ವಿಶ್ವದಾದ್ಯಂತ ಲಸಿಕೆ ಮತ್ತು ಔಷಧಿಯ ಸಂಶೋಧನೆ ನಡೆಯುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಔಷಧಿ ತಯಾರಿಕಾ ಕಂಪನಿ ಫೈಜರ್ ಸಹ ಹೊಸ ಲಸಿಕೆವೊಂದನ್ನು ಸಿದ್ಧಪಡಿಸಿ, ಪ್ರಯೋಗಕ್ಕೆ ಒಳಪಡಿಸಿದೆ. ಆದರೆ, ಇದೀಗ ಇದರ ಫಲಿತಾಂಶ ಹೊರಬಂದಿದ್ದು ಆತಂಕವನ್ನು ಸೃಷ್ಟಿಸಿದೆ.
ಫೈಜರ್ ಲಸಿಕೆಯ ಮೊದಲ ಪ್ರಯೋಗಕ್ಕೆ ಒಳಪಟ್ಟ ಸ್ವಯಂಸೇವಕರ ವರದಿಯ ಪ್ರಕಾರ ಈ ಲಸಿಕೆ ಪಡೆದವರಲ್ಲಿ ತೀವ್ರ ತಲೆನೋವು, ಜ್ವರ ಮತ್ತು ಸ್ನಾಯು ನೋವು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಈ ಹಿಂದೆ ಅಮೆರಿಕದ ಔಷಧಿ ನಿಯಂತ್ರಕ FDA ಮತ್ತು ಅದರ ಜರ್ಮನ್ ಪಾಲುದಾರ ಬಯೋಟೆಕ್, ಕೊವಿಡ್ ವಿರುದ್ಧ ಫೈಜರ್ ಲಸಿಕೆ ಶೇಕಡಾ 90ರಷ್ಟು ಪರಿಣಾಮಕಾರಿ ಎಂದು ಘೋಷಿಸಿತ್ತು. ಆದರೆ, ಇದೀಗ ಕೆಲವೇ ದಿನಗಳಲ್ಲಿ ಇದರ ಅಡ್ಡಪರಿಣಾಮದ ಬಗ್ಗೆ ವರದಿಯಾಗಿದೆ.
ಸೋಂಕಿನ ವಿರುದ್ಧ ಪರಿಣಾಮಕಾರಿಯಾದ ಔಷಧವನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಫೈಜರ್ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳಲ್ಲಿ ಆರು ದೇಶಗಳ ಸುಮಾರು 43,500ಕ್ಕೂ ಹೆಚ್ಚು ಸ್ವಯಂಸೇವಕರು ಭಾಗಿಯಾಗಿದ್ದರು. ಸದ್ಯ, ಅವರಲ್ಲಿ ತೀವ್ರ ತಲೆನೋವುನಂತಹ ಅಡ್ಡ ಪರಿಣಾಮಗಳು ಕಂಡುಬಂದಿರುವ ಜೊತೆಗೆ ದೇಹದ ಎಲ್ಲಾ ಭಾಗಗಳಲ್ಲೂ ನೋವು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.