ಉರಿ ಸೆಕ್ಟರ್​ನಲ್ಲಿ ಗದಗ ಜಿಲ್ಲೆಯ ಯೋಧ ಹುತಾತ್ಮ

ಗದಗ: ಜಮ್ಮು-ಕಾಶ್ಮೀರದ ಉರಿ ಸೆಕ್ಟರ್​ನಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ರೋಣ ತಾಲೂಕಿನ ಕರಮುಡಿ ಗ್ರಾಮದ ಯೋಧ ವೀರೇಶ ಕುರಟ್ಟಿ(40) ಹುತಾತ್ಮರಾಗಿದ್ದಾರೆ. ರೋಣ ತಾಲೂಕಿನ ಕರಮುಡಿ ಗ್ರಾಮದ ವೀರಯೋಧ ವೀರೇಶ ಕುರಹಟ್ಟಿ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನೆರವೇರಿದೆ. ಸಕಲ ಸರ್ಕಾರಿ ಗೌರವದೊಂದಿಗೆ ಲಿಂಗಾಯತ ವಿಧಿ ವಿಧಾನಗಳ ಮೂಲಕ ಕರಮುಡಿ ಸರ್ಕಾರಿ ಶಾಲೆಯ ಆವರಣದಲ್ಲಿ ಸೈನಿಕನ ಅಂತ್ಯಕ್ರಿಯೆ ನಡೆದಿದೆ. ಡಿಸೆಂಬರ್ 25 ರ ಮುಂಜಾನೆ ಜಮ್ಮು-ಕಾಶ್ಮೀರದ ಉರಿ ಸೆಕ್ಟರ್​ನಲ್ಲಿ ಉಗ್ರರೊಂದಿಗೆ ಹೋರಾಡುವಾಗ ನಡೆದ ಗುಂಡಿನ ಚಕಮಕಿಯಲ್ಲಿ ವೀರಯೋಧ ವೀರೇಶ ಕುರಹಟ್ಟಿ(45) […]

ಉರಿ ಸೆಕ್ಟರ್​ನಲ್ಲಿ ಗದಗ ಜಿಲ್ಲೆಯ ಯೋಧ ಹುತಾತ್ಮ

Updated on: Dec 31, 2019 | 8:32 AM

ಗದಗ: ಜಮ್ಮು-ಕಾಶ್ಮೀರದ ಉರಿ ಸೆಕ್ಟರ್​ನಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ರೋಣ ತಾಲೂಕಿನ ಕರಮುಡಿ ಗ್ರಾಮದ ಯೋಧ ವೀರೇಶ ಕುರಟ್ಟಿ(40) ಹುತಾತ್ಮರಾಗಿದ್ದಾರೆ. ರೋಣ ತಾಲೂಕಿನ ಕರಮುಡಿ ಗ್ರಾಮದ ವೀರಯೋಧ ವೀರೇಶ ಕುರಹಟ್ಟಿ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನೆರವೇರಿದೆ. ಸಕಲ ಸರ್ಕಾರಿ ಗೌರವದೊಂದಿಗೆ ಲಿಂಗಾಯತ ವಿಧಿ ವಿಧಾನಗಳ ಮೂಲಕ ಕರಮುಡಿ ಸರ್ಕಾರಿ ಶಾಲೆಯ ಆವರಣದಲ್ಲಿ ಸೈನಿಕನ ಅಂತ್ಯಕ್ರಿಯೆ ನಡೆದಿದೆ.

ಡಿಸೆಂಬರ್ 25 ರ ಮುಂಜಾನೆ ಜಮ್ಮು-ಕಾಶ್ಮೀರದ ಉರಿ ಸೆಕ್ಟರ್​ನಲ್ಲಿ ಉಗ್ರರೊಂದಿಗೆ ಹೋರಾಡುವಾಗ ನಡೆದ ಗುಂಡಿನ ಚಕಮಕಿಯಲ್ಲಿ ವೀರಯೋಧ ವೀರೇಶ ಕುರಹಟ್ಟಿ(45) ಹುತಾತ್ಮರಾಗಿದ್ದರು. 1990ರ ಜೂನ್​ನಲ್ಲಿ ವೀರೇಶ ಸೇನೆಗೆ ಸೇರಿದ್ದರು. ಪತ್ನಿ, ಇಬ್ಬರು ಮಕ್ಕಳು, ತಾಯಿ,‌ ಸಹೋದರ ಹಾಗೂ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಜನರು ವೀರೇಶ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

ಅಂತಿಮ ನಮನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್, ಸಂಸದ ಪಿ.ಸಿ.ಗದ್ದಿಗೌಡರ್, ಎಡಿಸಿ ರಾಯಪ್ಪ ಹುಣಸಗಿ, ವಿವಿಧ ಮಠಾಧೀಶರು, ಮಾಜಿ ಶಾಸಕರಾದ ಜಿ.ಎಸ್.ಪಾಟೀಲ್, ಬಿ.ಆರ್.ಯಾವಗಲ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.

Published On - 8:31 am, Tue, 31 December 19