ಒಂದು ಬಿಟ್​ ಕಾಯಿನ್​ ಬೆಲೆ ಬರೋಬ್ಬರಿ 43 ಲಕ್ಷ ರೂಪಾಯಿ!

ವಿಶ್ವದಲ್ಲಿ ಅತಿ ಹೆಚ್ಚು ಪ್ರಖ್ಯಾತಿ ಹೊಂದಿರುವ ಡಿಜಿಟಲ್​ ಕರೆನ್ಸಿಗಳಲ್ಲಿ ಬಿಟ್​ ಕಾಯಿನ್​ ಮೊದಲ ಸ್ಥಾನದಲ್ಲಿದೆ. ಬಿಟ್​ ಕಾಯಿನ್​ ಬೆಲೆ ಸದ್ಯ 60,497 ಡಾಲರ್​ ಇದೆ.

ಒಂದು ಬಿಟ್​ ಕಾಯಿನ್​ ಬೆಲೆ ಬರೋಬ್ಬರಿ 43 ಲಕ್ಷ ರೂಪಾಯಿ!
ಸಾಂದರ್ಭಿಕ ಚಿತ್ರ

Updated on: Mar 14, 2021 | 7:15 PM

ಮುಂಬೈ: ಬಿಟ್​ ಕಾಯಿನ್​ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಮೂರು ತಿಂಗಳ ಹಿಂದೆ 29 ಸಾವಿರ ಡಾಲರ್​ (ಭಾರತೀಯ ಕರೆನ್ಸಿಯಲ್ಲಿ 21.26 ಲಕ್ಷ ರೂಪಾಯಿ) ಇದ್ದ ಬಿಟ್​ ಕಾಯಿನ್​ ಬೆಲೆ ಈಗ ದ್ವಿಗುಣಗೊಂಡಿದೆ. ಇದೇ ಮೊದಲ ಬಾರಿಗೆ ಬಿಟ್​ ಕಾಯಿನ್​ ಬೆಲೆ 60 ಸಾವಿರ ಡಾಲರ್ (43.97 ಲಕ್ಷ ಡಾಲರ್​) ದಾಟಿದೆ. ಕೊರೊನಾ ವೈರಸ್​ ಮಧ್ಯೆಯೂ ಬಿಟ್​ ಕಾಯಿನ್​ ಬೆಲೆ ಮಿತಿ ಮೀರಿ ಏರಿಕೆ ಕಾಣುತ್ತಿರುವುದು ಸಾಕಷ್ಟು ಅಚ್ಚರಿ ಮೂಡಿಸಿದೆ. ಅಂದಹಾಗೆ, ಇತಿಹಾಸದಲ್ಲಿ ಬಿಟ್​ ಕಾಯಿನ್​ ಬೆಲೆ ಇಷ್ಟು ದೊಡ್ಡ ಮಟ್ಟಕ್ಕೆ ಏರಿಕೆ ಆಗಿದ್ದು ಇದೇ ಮೊದಲು.

ವಿಶ್ವದಲ್ಲಿ ಅತಿ ಹೆಚ್ಚು ಪ್ರಖ್ಯಾತಿ ಹೊಂದಿರುವ ಡಿಜಿಟಲ್​ ಕರೆನ್ಸಿಗಳಲ್ಲಿ ಬಿಟ್​ ಕಾಯಿನ್​ ಮೊದಲ ಸ್ಥಾನದಲ್ಲಿದೆ. ಬಿಟ್​ ಕಾಯಿನ್​ ಬೆಲೆ ಸದ್ಯ $ 60,497 ಇದೆ. ಡಿಸೆಂಬರ್​ 16ರಂದು 19 ಸಾವಿರ ಡಾಲರ್​ ಆಸುಪಾಸಿನಲ್ಲಿದ್ದ ಬಿಟ್​ ಕಾಯಿನ್​ ಬೆಲೆ ಏಕಾಏಕಿ ಏರಿಕೆ ಕಾಣಲು ಆರಂಭವಾಗಿತ್ತು. ಬಿಟ್​ ಕಾಯಿನ್​ನಲ್ಲಿ ಸಾಂಸ್ಥಿಕ ದತ್ತು ಪ್ರಕ್ರಿಯೆ (institutional adoption) ನಡೆಯುತ್ತಿದೆ. ಈ ಕಾರಣಕ್ಕೆ ಈ ಡಿಜಿಟಲ್​ ಕರೆನ್ಸಿಯಲ್ಲಿ ನಾಗಾಲೋಟ ಆರಂಭವಾಗಿದೆ ಎನ್ನಲಾಗುತ್ತಿದೆ. ಬಿಟ್​ ಕಾಯಿನ್​ ಬೆಲೆ ಮತ್ತೂ ಏರಿಕೆ ಕಾಣಬಹುದು ಎಂದು ಮಾರುಕಟ್ಟೆ ತಜ್ಞರ ಭವಿಷ್ಯ ನುಡಿದಿದ್ದಾರೆ.

ಮುಂದಿನ ದಿನಗಳಲ್ಲಿ ಜನರು ಹೂಡಿಕೆ ಮಾಡಲು ಚಿನ್ನದ ಬದಲಿಗೆ ಬಿಟ್​ ಕಾಯಿನ್​ನತ್ತ ಹೆಚ್ಚು ಒಲವು ತೋರುವ ಸಾಧ್ಯತೆ ಇದೆ. ಸಂಸ್ಥೆಗಳು ಬಿಟ್​ ಕಾಯಿನ್​ ಮೇಲೆ ಹೂಡಿಕೆ ಮಾಡಲು ಮುಂದೆ ಬಂದರೆ ಇದರ ಬೆಲೆ ಹೆಚ್ಚಲಿದೆ ಎನ್ನುತ್ತಾರೆ ಮಾರುಕಟ್ಟೆ ಪಂಡಿತರು.

ಏನಿದು ಬಿಟ್​ ಕಾಯಿನ್​?
ಬಿಟ್​ ಕಾಯಿನ್​ ಸಂಪೂರ್ಣವಾಗಿ ವರ್ಚುವಲ್​ ಕರೆನ್ಸಿ. ಇದು ಮೊದಲಿಗೆ ಆರಂಭವಾಗಿದ್ದು 2009ರಲ್ಲಿ. ಸತೋಷೋ ನಾಕಮೋಟಿ ಎಂಬುವವರು ಬಿಟ್ ಕಾಯಿನ್​ ಜನಕ. ಇದನ್ನು​ ನೀವು ನೇರವಾಗಿ ಅಂಗಡಿಗಳಲ್ಲಿ ಚಲಾವಣೆ ಮಾಡಲು ಸಾಧ್ಯವಿಲ್ಲ. ಇದನ್ನು ಆನ್​ಲೈನ್​ ಪ್ಲಾಟ್​ಫಾರ್ಮ್​ಗಳ ಮೂಲಕವೇ ಚಲಾವಣೆ ಮಾಡಬೇಕು. ಈ ಹಣ ಚಲಾವಣೆಗೆ ಯಾವುದೇ ನಿರ್ಬಂಧ ಇಲ್ಲ. ಈ ರೀತಿಯ ಸುಮಾರು 800 ಡಿಜಿಟಲ್​ ಕರೆನ್ಸಿ ಲಭ್ಯವಿದೆ. ಇದು ಆನ್​ಲೈನ್​ನಲ್ಲೇ ಇರುವುದರಿಂದ ವೈರಸ್​ ದಾಳಿಗೆ ತುತ್ತಾಗಿ, ಸುಲಭವಾಗಿ ಹ್ಯಾಕ್​ ಆಗಬಹುದು. ಬಿಟ್​ ಕಾಯಿನ್​ಗಳಿಗೆ ಭಾರತದಲ್ಲಿ ಮಾನ್ಯತೆ ಇಲ್ಲ.

ಇದನ್ನೂ ಓದಿ: Tv9 Digital Live | ಬಿಟ್​ ಕಾಯಿನ್​ Bitcoin ಎಂದರೇನು? ಭಾರತಕ್ಕೆ ಬರುತ್ತಾ ಡಿಜಿಟಲ್​ ಕರೆನ್ಸಿ?

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us