ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ: ಕುಖ್ಯಾತ ದಂತಚೋರರ ಬಂಧನ, ಆನೆ ದಂತ ವಶ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 13, 2021 | 6:50 PM

ಬಂಧಿತರಿಂದ ಒಂದು ಮೀಟರ್ ಉದ್ದದ ಆನೆದಂತವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ದಂತದ ಮೇಲೆ ಶ್ರೀಕೃಷ್ಣನ 14 ಬಗೆಯ ಚಿತ್ರಗಳ ಕೆತ್ತನೆ ಮಾಡಿ ಅಧಿಕ ಬೆಲೆಗೆ ಮಾರಾಟ ಮಾಡಲು ಯತ್ನಿಸಿದ್ದರು.

ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ: ಕುಖ್ಯಾತ ದಂತಚೋರರ ಬಂಧನ, ಆನೆ ದಂತ ವಶ
ಕುಖ್ಯಾತ ದಂತಚೋರರ ಬಂಧನ
Follow us on

ನೆಲಮಂಗಲ: ಬೆಂಗಳೂರು ವಲಯ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ, ಕೆತ್ತನೆ ಮಾಡಿರುವ ಆನೆ ದಂತ ಮಾರಲು ಯತ್ನಿಸುತ್ತಿದ್ದ 6 ಜನ ದಂತಚೋರರನ್ನು ಬಂಧಿಸಿರುವ ಘಟನೆ ಬೆಂಗಳೂರಿನ ಮರಿಯಪ್ಪನ ಪಾಳ್ಯದಲ್ಲಿ ನಡೆದಿದೆ.

ಸದಾಶಿವ (39), ನಾಗರಾಜು (40), ಮೋಹಮದ್ ಅಸ್ಗರ್ (46), ಪ್ರಮಿಳಾ ಕುಮಾರಿ (42), ಪ್ರಭು (46), ಪುರುಷೋತ್ತಮ (55) ಬಂಧಿತ ಆರೋಪಿಗಳು. ಬಂಧಿತರು ಬೆಂಗಳೂರಿನ ಮರಿಯಪ್ಪನ ಪಾಳ್ಯದ ಮನೆಯೊಂದರಲ್ಲಿ ಆನೆಯ ದಂತಗಳನ್ನ ಸಂಗ್ರಹಿಸಿ ನಗರದ ವಿವಿದೆಡೆ ಮಾರಾಟಕ್ಕೆ ಯತ್ನ ನಡೆಸಿದ್ದರು. ಈ ವಿಚಾರ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ದಂತ ಕೊಂಡುಕೊಳ್ಳುವ ನೆಪದಲ್ಲಿ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಒಂದು ಮೀಟರ್ ಉದ್ದದ ಆನೆ ದಂತವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ದಂತದ ಮೇಲೆ ಶ್ರೀಕೃಷ್ಣನ 14 ಬಗೆಯ ಚಿತ್ರಗಳ ಕೆತ್ತನೆ ಮಾಡಿ ಅಧಿಕ ಬೆಲೆಗೆ ಮಾರಾಟ ಮಾಡಲು ಯತ್ನಿಸಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮೈಸೂರು: ಆನೆ ದಂತ ಮಾರಾಟ, ಕೇರಳದ ಇಬ್ಬರು ಸೇರಿ ನಾಲ್ವರ ಅರೆಸ್ಟ್

Published On - 6:49 pm, Wed, 13 January 21