Operation ‘ರಾಮಸೇತು’ ಸಕ್ಸಸ್​… ಪ್ರವಾಹದಲ್ಲಿ ಸಿಲುಕಿದ್ದ 64 ಮಂಗಗಳ ರಕ್ಷಣೆ

ದಾವಣಗೆರೆ: ರಾವಣನ ವಿರುದ್ಧ ಯುದ್ಧಕ್ಕೆ ಸಜ್ಜಾದ ರಾಮನಿಗೆ ಲಂಕೆ ತಲುಪಲು ವಾನರ ಸೇನೆಯು ಸೇತುವೆ ನಿರ್ಮಿಸಿತ್ತು ಎಂಬ ಉಲ್ಲೇಖ ರಾಮಾಯಣದಲ್ಲಿ ಇದೆ. ಆದರೆ, ಈ ಕಥೆಗೆ ಕೊಂಚ ವಿಭಿನ್ನವಾಗಿ, ನದಿ ಪ್ರವಾಹಕ್ಕೆ ಸಿಲುಕಿ ಮರದ ಮೇಲೆ ಆಸರೆ ಪಡೆದಿದ್ದ ಕೋತಿಗಳನ್ನು ಸೇತುವೆ ನಿರ್ಮಿಸುವ ಮೂಲಕ ರಕ್ಷಣಾ ಸಿಬ್ಬಂದಿ ದಡ ತಲುಪಿಸಿದ್ದಾರೆ. ಅಂದ ಹಾಗೆ, ಈ ಘಟನೆ ನಡೆದಿರೋದು ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ. ತುಂಗಭದ್ರಾ ನದಿ ಪ್ರವಾಹದಲ್ಲಿ ಮಂಗಗಳು ಸಿಲುಕಿದ್ದ ಹಿನ್ನೆಲೆಯಲ್ಲಿ ಅಗ್ನಿ ಶಾಮಕ ದಳ ಹಾಗೂ […]

Operation ‘ರಾಮಸೇತು’ ಸಕ್ಸಸ್​... ಪ್ರವಾಹದಲ್ಲಿ ಸಿಲುಕಿದ್ದ 64 ಮಂಗಗಳ ರಕ್ಷಣೆ

Updated on: Aug 09, 2020 | 4:44 PM

ದಾವಣಗೆರೆ: ರಾವಣನ ವಿರುದ್ಧ ಯುದ್ಧಕ್ಕೆ ಸಜ್ಜಾದ ರಾಮನಿಗೆ ಲಂಕೆ ತಲುಪಲು ವಾನರ ಸೇನೆಯು ಸೇತುವೆ ನಿರ್ಮಿಸಿತ್ತು ಎಂಬ ಉಲ್ಲೇಖ ರಾಮಾಯಣದಲ್ಲಿ ಇದೆ. ಆದರೆ, ಈ ಕಥೆಗೆ ಕೊಂಚ ವಿಭಿನ್ನವಾಗಿ, ನದಿ ಪ್ರವಾಹಕ್ಕೆ ಸಿಲುಕಿ ಮರದ ಮೇಲೆ ಆಸರೆ ಪಡೆದಿದ್ದ ಕೋತಿಗಳನ್ನು ಸೇತುವೆ ನಿರ್ಮಿಸುವ ಮೂಲಕ ರಕ್ಷಣಾ ಸಿಬ್ಬಂದಿ ದಡ ತಲುಪಿಸಿದ್ದಾರೆ. ಅಂದ ಹಾಗೆ, ಈ ಘಟನೆ ನಡೆದಿರೋದು ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ.

ತುಂಗಭದ್ರಾ ನದಿ ಪ್ರವಾಹದಲ್ಲಿ ಮಂಗಗಳು ಸಿಲುಕಿದ್ದ ಹಿನ್ನೆಲೆಯಲ್ಲಿ ಅಗ್ನಿ ಶಾಮಕ ದಳ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಕಳೆದ ಮೂರು ದಿನಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದರು. ಇದೀಗ, ಸಿಬ್ಬಂದಿಯು ಸಿಲುಕಿದ್ದ ಎಲ್ಲಾ 64 ಮಂಗಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೋತಿಗಳಿಗಾಗಿ ಬಿದಿರಿನ ಕಟ್ಟಿಗೆ ಹಾಗೂ ಹಗ್ಗವನ್ನು ಬಳಸಿ ವಿಶೇಷ ಸೇತುವೆ ನಿರ್ಮಿಸಿದ ರಕ್ಷಾಣ ಸಿಬ್ಬಂದಿ ಆ ಮೂಲಕ ಮಂಗಗಳು ಸುರಕ್ಷಿತವಾಗಿ ದಡ ಸೇರಲು ಸುಲಭವಾದ ಮಾರ್ಗ ಸೃಷ್ಟಿಸುವಲ್ಲಿ ಯಶಸ್ವಿಯಾದರು.