ಕಬಿನಿ ಹಿನ್ನೀರಿನಲ್ಲಿ ವಿದೇಶಿ ಪಕ್ಷಿಗಳು ಕಲರವ: ಫಾರಿನ್ ಹಕ್ಕಿಗಳ ನೋಟವೇ ಬಲುಚೆಂದ

ಮೈಸೂರು: ಕಬಿನಿ ಜಲಾಶಯದಲ್ಲೀಗ ಫಾರಿನ್ ಗೆಸ್ಟ್​ಗಳ ಮೋಡಿ ಜೋರಾಗಿದೆ. ತಿಳಿನೀರಲ್ಲಿ ಆಡ್ತಾ, ಬಾನಲ್ಲಿ ಹಾರಾಡ್ತಾ, ನೀರಲ್ಲಿ ಮುಳುಗೇಳ್ತಾ ಮಸ್ತಿ ಮಾಡ್ತಿದ್ದಾರೆ. ಅವ್ರ ಚೆಲ್ಲಾಟ ನೋಡೋಕಂತ್ಲೇ ಪ್ರವಾಸಿಗರು ಸಹ ಬರ್ತಿದ್ದಾರೆ. ತಿಳಿಗಾಳಿಗೆ ಮೆಲ್ಲನೆ ಅಪ್ಪಳಿಸೋ ಅಲೆ.. ತಂಗಾಳಿಯ ಸ್ಪರ್ಶ.. ತಮ್ಮದೇ ಲೋಕದಲ್ಲಿ ತೇಲಾಡೋ ಬಾನಾಡಿಗಳು. ಒಮ್ಮೆ ದಡದಲ್ಲಿ, ಮತ್ತೊಮ್ಮೆ ನೀರಲ್ಲಿ, ಮಗದೊಮ್ಮೆ ಬಾನಲ್ಲಿ. ಎಲ್ಲೆಲ್ಲೂ ಈ ಚಿಲಿಪಿಲಿಗಳದ್ದೇ ಕಲರವ. ಪಕ್ಷಿಲೋಕದ್ದೇ ತುಂಟಾಟ. ಬಾನಾಡಿಗಳ ಕಲರವ ಜೋರು:  ಮೈಸೂರಿನ ಕಬಿನಿ ಜಲಾಶಯದ ಹಿನ್ನೀರಿನಲ್ಲೀಗ ಬಾನಾಡಿಗಳ ಕಲರವ ಜೋರಾಗಿದೆ. ಮೈಸೂರಿಗೆ ದೂರದ […]

ಕಬಿನಿ ಹಿನ್ನೀರಿನಲ್ಲಿ ವಿದೇಶಿ ಪಕ್ಷಿಗಳು ಕಲರವ: ಫಾರಿನ್ ಹಕ್ಕಿಗಳ ನೋಟವೇ ಬಲುಚೆಂದ
Follow us
ಸಾಧು ಶ್ರೀನಾಥ್​
|

Updated on:Jan 19, 2020 | 1:34 PM

ಮೈಸೂರು: ಕಬಿನಿ ಜಲಾಶಯದಲ್ಲೀಗ ಫಾರಿನ್ ಗೆಸ್ಟ್​ಗಳ ಮೋಡಿ ಜೋರಾಗಿದೆ. ತಿಳಿನೀರಲ್ಲಿ ಆಡ್ತಾ, ಬಾನಲ್ಲಿ ಹಾರಾಡ್ತಾ, ನೀರಲ್ಲಿ ಮುಳುಗೇಳ್ತಾ ಮಸ್ತಿ ಮಾಡ್ತಿದ್ದಾರೆ. ಅವ್ರ ಚೆಲ್ಲಾಟ ನೋಡೋಕಂತ್ಲೇ ಪ್ರವಾಸಿಗರು ಸಹ ಬರ್ತಿದ್ದಾರೆ. ತಿಳಿಗಾಳಿಗೆ ಮೆಲ್ಲನೆ ಅಪ್ಪಳಿಸೋ ಅಲೆ.. ತಂಗಾಳಿಯ ಸ್ಪರ್ಶ.. ತಮ್ಮದೇ ಲೋಕದಲ್ಲಿ ತೇಲಾಡೋ ಬಾನಾಡಿಗಳು. ಒಮ್ಮೆ ದಡದಲ್ಲಿ, ಮತ್ತೊಮ್ಮೆ ನೀರಲ್ಲಿ, ಮಗದೊಮ್ಮೆ ಬಾನಲ್ಲಿ. ಎಲ್ಲೆಲ್ಲೂ ಈ ಚಿಲಿಪಿಲಿಗಳದ್ದೇ ಕಲರವ. ಪಕ್ಷಿಲೋಕದ್ದೇ ತುಂಟಾಟ.

ಬಾನಾಡಿಗಳ ಕಲರವ ಜೋರು:  ಮೈಸೂರಿನ ಕಬಿನಿ ಜಲಾಶಯದ ಹಿನ್ನೀರಿನಲ್ಲೀಗ ಬಾನಾಡಿಗಳ ಕಲರವ ಜೋರಾಗಿದೆ. ಮೈಸೂರಿಗೆ ದೂರದ ಊರಿನಿಂದ ಬಂದಿರೋ ವಿದೇಶಿ ಪಕ್ಷಿಗಳು ತುಂಟಾಟ ಆಡ್ತಿವೆ. ವರ್ಷದ ಕೊನೆಯಲ್ಲಿ ಬರೋ ಈ ಬಾರ್‌ಹೆಡ್‌ ಗೊಸ್‌ ಪಕ್ಷಿಗಳು ಮೂರು ತಿಂಗಳ ಕಾಲ ಮೈಸೂರಿನಲ್ಲೇ ಬೀಡು ಬಿಟ್ಟಿರ್ತಾವೆ. ಅದರಲ್ಲು ಚಳಿಗಾಲದ ಸಂದರ್ಭದಲ್ಲಿ ಹೆಚ್.ಡಿ.ಕೋಟೆಯ ಬೀಚನಹಳ್ಳಿಯ ಕಬಿನಿ ಡ್ಯಾಂಗೆ ಲಗ್ಗೆ ಇಡುತ್ವೆ. ಅವುಗಳ ಎಂಟ್ರಿಯಿಂದ ಜಲಾಶಯದ ಅಂದವೇ ಹೆಚ್ಚಾಗಿದೆ.

ಪಕ್ಷಿಲೋಕದ ನೋಟವೇ ಬಲುಚೆಂದ: ಇನ್ನು ಈ ಬಾರ್ ಹೆಡ್ ಗೂಸ್ ಪಕ್ಷಿಗಳು ವಲಸೆ ಹಕ್ಕಿಗಳಾಗಿದ್ದು ನೇಪಾಳ, ಮಂಗೋಲಿಯಾ, ಸೈಬಿರಿಯಾ ದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಇವುಗಳು ಸಂತಾನೋತ್ಪತ್ತಿಗಾಗಿ ನದಿಗಳು ಹಾಗೂ ಜಲಾಶಯದ ಹಿನ್ನೀರನ್ನ ಆಯ್ಕೆ ಮಾಡಿಕೊಳ್ಳುತ್ತವೆ. ಮೂರ್ನಾಲ್ಕು ತಿಂಗಳು ಕಾಲ ವಲಸೆ ಬಂದು ಕಬಿನಿ ಡ್ಯಾಂ ಬಳಿಯೇ ಬೀಡು ಬಿಟ್ಟಿರುತ್ತವೆ. ಹೊಲ ಗದ್ದೆಗಳಲ್ಲಿ ಆಹಾರ ಸೇವಿಸಿ ಸಂತಾನೋತ್ಪತ್ತಿ ಮುಗಿಸಿ ವಾಪಸ್ಸಾಗುತ್ತವೆ. ಪಕ್ಷಿಲೋಕದ ನೋಟವೇ ಬಲುಚೆಂದ. ಅದ್ರಲ್ಲೂ ದೂರದೂರಿಂದ ಹಿಂಡು ಹಿಂಡಾಗಿ ಬರೋ ಈ ಪಕ್ಷಿಗಳು ನೋಡೋ ಕಂಗಳಿಗೆ ಖುಷಿ ಕೊಡುತ್ತವೆ. ಹಾಗೇ ಪ್ರಕೃತಿ ಅಂದವನ್ನ ಮತ್ತಷ್ಟು ಹೆಚ್ಚಿಸುತ್ತವೆ.

Published On - 1:33 pm, Sun, 19 January 20

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ