ಸೋಂಕು ದೃಢಪಟ್ಟು 4 ದಿನ ಆದ ಮೇಲೆ ಬಂತು ಌಂಬುಲೆನ್ಸ್​ , ಆದರೆ..

ಕಲಬುರಗಿ: ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಸೋಂಕಿತ ನಿವೃತ್ತ ಪೊಲೀಸ್ ಸಿಬ್ಬಂದಿ ಕೊನೆಯುಸಿರೆಳೆದಿರುವ ಘಟನೆ ಸಿದ್ದೇಶ್ವರ ನಗರದಲ್ಲಿ ಬೆಳಕಿಗೆ ಬಂದಿದೆ. ಖಾಸಗಿ ಆಸ್ಪತ್ರೆಯಲ್ಲಿ ಕೊವಿಡ್ ಟೆಸ್ಟ್ ಮಾಡಿಸಿಕೊಂಡಿದ್ದ ವೇಳೆ ನಿವೃತ್ತ ಪೇದೆಗೆ ಸೋಂಕು ಪತ್ತೆಯಾಗಿತ್ತು. ಆದರೆ, ಸೋಂಕು ದೃಢಪಟ್ಟು 4 ದಿನವಾದರೂ ಚಿಕಿತ್ಸೆ ಸಿಕ್ಕಿರಲಿಲ್ಲ. ಜಿಲ್ಲಾ ಆರೋಗ್ಯಾಧಿಕಾರಿಯ ಸಹಾಯವಾಣಿಗೂ ಕರೆ ಮಾಡಿ ಐಸೋಲೇಷನ್ ವಾರ್ಡ್​ಗೆ ಶಿಫ್ಟ್ ಮಾಡುವಂತೆ ಕೋರಿದ್ದ. ಆದರೆ, ಯಾರೂ ಸ್ಪಂದಿಸಿರಲಿಲ್ಲ. ಜೊತೆಗೆ, ಆಸ್ಪತ್ರೆಗೆ ಸಾಗಿಸಲು ಌಂಬುಲೆನ್ಸ್​ ಸಹ ಬಂದಿರಲಿಲ್ಲ. ಹೀಗಾಗಿ, ಸೋಂಕಿತ ತನ್ನ ಮನೆಯಲ್ಲಿಯೇ […]

ಸೋಂಕು ದೃಢಪಟ್ಟು 4 ದಿನ ಆದ ಮೇಲೆ ಬಂತು ಌಂಬುಲೆನ್ಸ್​ , ಆದರೆ..
Edited By:

Updated on: Jul 27, 2020 | 10:07 PM

ಕಲಬುರಗಿ: ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಸೋಂಕಿತ ನಿವೃತ್ತ ಪೊಲೀಸ್ ಸಿಬ್ಬಂದಿ ಕೊನೆಯುಸಿರೆಳೆದಿರುವ ಘಟನೆ
ಸಿದ್ದೇಶ್ವರ ನಗರದಲ್ಲಿ ಬೆಳಕಿಗೆ ಬಂದಿದೆ.

ಖಾಸಗಿ ಆಸ್ಪತ್ರೆಯಲ್ಲಿ ಕೊವಿಡ್ ಟೆಸ್ಟ್ ಮಾಡಿಸಿಕೊಂಡಿದ್ದ ವೇಳೆ ನಿವೃತ್ತ ಪೇದೆಗೆ ಸೋಂಕು ಪತ್ತೆಯಾಗಿತ್ತು. ಆದರೆ, ಸೋಂಕು ದೃಢಪಟ್ಟು 4 ದಿನವಾದರೂ ಚಿಕಿತ್ಸೆ ಸಿಕ್ಕಿರಲಿಲ್ಲ. ಜಿಲ್ಲಾ ಆರೋಗ್ಯಾಧಿಕಾರಿಯ ಸಹಾಯವಾಣಿಗೂ ಕರೆ ಮಾಡಿ ಐಸೋಲೇಷನ್ ವಾರ್ಡ್​ಗೆ ಶಿಫ್ಟ್ ಮಾಡುವಂತೆ ಕೋರಿದ್ದ. ಆದರೆ, ಯಾರೂ ಸ್ಪಂದಿಸಿರಲಿಲ್ಲ.

ಜೊತೆಗೆ, ಆಸ್ಪತ್ರೆಗೆ ಸಾಗಿಸಲು ಌಂಬುಲೆನ್ಸ್​ ಸಹ ಬಂದಿರಲಿಲ್ಲ. ಹೀಗಾಗಿ, ಸೋಂಕಿತ ತನ್ನ ಮನೆಯಲ್ಲಿಯೇ ಪರದಾಡುವ ಸ್ಥಿತಿ ಎದುರಾಯ್ತು. ಕೊನೆಗೆ, ಮಾಜಿ ಶಾಸಕ ಬಿ.ಆರ್.ಪಾಟೀಲ್ ಹೇಳಿದ ನಂತರ ನಿನ್ನೆ ಸೋಂಕಿತನನ್ನ ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್ ಬಂತಂತೆ.

ಆದರೆ, ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯದಲ್ಲಿ ನಿವೃತ್ತ ಪೇದೆ ಸಾವನ್ನಪ್ಪಿದ್ದಾರೆ. ಹೀಗಾಗಿ, ಜಿಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

Published On - 12:51 pm, Mon, 27 July 20