ಕೊರೊನಾಗಿಂತ ಹೆಚ್ಚು ಕ್ರೌರ್ಯ ಮನುಷ್ಯನಲ್ಲಿದೆ: ಮಾಜಿ ಸ್ಪೀಕರ್‌ ರಮೇಶ್​ಕುಮಾರ್‌

| Updated By: ಸಾಧು ಶ್ರೀನಾಥ್​

Updated on: Jul 03, 2020 | 2:47 PM

ಕೋಲಾರ: ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಮಾನವೀಯತೆ ಹೋಗಿ, ರಾಕ್ಷಸರಾಗುತ್ತಿದ್ದೇವೆೇ. ಇದು ಕೊರೊನಾದ ಕ್ರೌರ್ಯಕ್ಕಿಂತ ಘೋರವಾಗಿದೆ ಎಂದು ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ವಿಷಾದ ವ್ಯಕ್ತಪಡಿಸಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಮಾಜಿ ಸಚಿವ ರಮೇಶ್‌ ಕುಮಾರ್‌, ಕೆಲವೆಡೆ ಕೊರೊನಾದಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆಗೆ ವಿರೋಧ ವ್ಯಕ್ತವಾಗುತ್ತಿದೆ. ಕೊರೊನಾ ಕಾಯಿಲೆಗಿಂತ ಮನುಷ್ಯರಲ್ಲಿ ಕ್ರೌರ್ಯ ಹೆಚ್ಚಾಗಿದೆ. ಪ್ರೀತಿ, ವಿಶ್ವಾಸ, ಮಾನವೀಯತೆ ಕಳೆದುಕೊಳ್ಳುತ್ತಿದ್ದೇವೆ ಎಂದು ಇತ್ತೀಚಿನ ಕೆಲ ಘಟನೆಗಳನ್ನು ಉಲ್ಲೇಖಿಸಿದರು. ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಾನವೀಯತೆಯೇ ಇಲ್ಲಾ. ರಾಜಕಾರಣಿಗಳಿಗೆ ಅಧಿಕಾರ ಯಾವತ್ತೂ ಶಾಶ್ವತವಲ್ಲ. ಅಧಿಕಾರದಲ್ಲಿರುವವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. […]

ಕೊರೊನಾಗಿಂತ ಹೆಚ್ಚು ಕ್ರೌರ್ಯ ಮನುಷ್ಯನಲ್ಲಿದೆ: ಮಾಜಿ ಸ್ಪೀಕರ್‌ ರಮೇಶ್​ಕುಮಾರ್‌
Follow us on

ಕೋಲಾರ: ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಮಾನವೀಯತೆ ಹೋಗಿ, ರಾಕ್ಷಸರಾಗುತ್ತಿದ್ದೇವೆೇ. ಇದು ಕೊರೊನಾದ ಕ್ರೌರ್ಯಕ್ಕಿಂತ ಘೋರವಾಗಿದೆ ಎಂದು ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ವಿಷಾದ ವ್ಯಕ್ತಪಡಿಸಿದ್ದಾರೆ.

ಕೋಲಾರದಲ್ಲಿ ಮಾತನಾಡಿದ ಮಾಜಿ ಸಚಿವ ರಮೇಶ್‌ ಕುಮಾರ್‌, ಕೆಲವೆಡೆ ಕೊರೊನಾದಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆಗೆ ವಿರೋಧ ವ್ಯಕ್ತವಾಗುತ್ತಿದೆ. ಕೊರೊನಾ ಕಾಯಿಲೆಗಿಂತ ಮನುಷ್ಯರಲ್ಲಿ ಕ್ರೌರ್ಯ ಹೆಚ್ಚಾಗಿದೆ. ಪ್ರೀತಿ, ವಿಶ್ವಾಸ, ಮಾನವೀಯತೆ ಕಳೆದುಕೊಳ್ಳುತ್ತಿದ್ದೇವೆ ಎಂದು ಇತ್ತೀಚಿನ ಕೆಲ ಘಟನೆಗಳನ್ನು ಉಲ್ಲೇಖಿಸಿದರು.
ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಾನವೀಯತೆಯೇ ಇಲ್ಲಾ. ರಾಜಕಾರಣಿಗಳಿಗೆ ಅಧಿಕಾರ ಯಾವತ್ತೂ ಶಾಶ್ವತವಲ್ಲ. ಅಧಿಕಾರದಲ್ಲಿರುವವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಆದ್ರೆ ಅವರಿಗೆ ಪ್ರಾಥಮಿಕ ತಿಳಿವಳಿಕೆ ಇಲ್ಲದಿರುವುದೇ ನಮ್ಮೆಲ್ಲರ ದೌರ್ಭಾಗ್ಯ ಎಂದು ಬಿಜಿಪಿ ಸರ್ಕಾರದ ವಿರುದ್ಧ ರಮೇಶ್‌ ಕುಮಾರ್‌ ಕಿಡಿಕಾರಿದರು.