ಸೋಂಕಿತರ ಅಂತ್ಯಕ್ರಿಯೆಗೆ ಜಾಗ ಮೀಸಲು, ಗಿಡ್ಡೇನಹಳ್ಳಿ ಜನರಿಂದ ಪ್ರತಿಭಟನೆ
ಬೆಂಗಳೂರು: ಬೆಂಗಳೂರಿನ ಹೊರವಲಯದಲ್ಲಿರುವ ಗಿಡ್ಡೇನಹಳ್ಳಿ ಬಳಿ ಕೊರೊನಾದಿಂದ ಸಾವನ್ನಪ್ಪಿರುವವರ ಅಂತ್ಯಕ್ರಿಯೆಗೆ ಸ್ಥಳ ನಿಗದಿ ಮಾಡಿರುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಇಂದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ರಾಜ್ಯದಲ್ಲಿ ಪ್ರತಿ ದಿನ ಒಬ್ಬರಲ್ಲ ಒಬ್ಬರು ಕೊರೊನಾದಿಂದ ಸಾಯುತ್ತಲೇ ಇದ್ದಾರೆ. ಹೀಗೆ ಸಾವನ್ನಪ್ಪಿದವರ ಅಂತ್ಯಕ್ರಿಯೆಗೆ ಕೆಲವೊಂದಿಷ್ಟು ಕಡೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಕೊರೊನಾದಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆಗಾಗಿಯೇ ಪ್ರತ್ಯೇಕ ಸ್ಮಶಾನಗಳನ್ನ ನಿಗದಿ ಮಾಡಿದೆ. ಅದಕ್ಕಾಗಿ ಕೆಲ ನಿರ್ದಿಷ್ಟ ಪ್ರದೇಶಗಳನ್ನ ಗುರುತಿಸಿ ಮೀಸಲಿರಿಸಿದೆ. […]
ಬೆಂಗಳೂರು: ಬೆಂಗಳೂರಿನ ಹೊರವಲಯದಲ್ಲಿರುವ ಗಿಡ್ಡೇನಹಳ್ಳಿ ಬಳಿ ಕೊರೊನಾದಿಂದ ಸಾವನ್ನಪ್ಪಿರುವವರ ಅಂತ್ಯಕ್ರಿಯೆಗೆ ಸ್ಥಳ ನಿಗದಿ ಮಾಡಿರುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಇಂದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.
ರಾಜ್ಯದಲ್ಲಿ ಪ್ರತಿ ದಿನ ಒಬ್ಬರಲ್ಲ ಒಬ್ಬರು ಕೊರೊನಾದಿಂದ ಸಾಯುತ್ತಲೇ ಇದ್ದಾರೆ. ಹೀಗೆ ಸಾವನ್ನಪ್ಪಿದವರ ಅಂತ್ಯಕ್ರಿಯೆಗೆ ಕೆಲವೊಂದಿಷ್ಟು ಕಡೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಕೊರೊನಾದಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆಗಾಗಿಯೇ ಪ್ರತ್ಯೇಕ ಸ್ಮಶಾನಗಳನ್ನ ನಿಗದಿ ಮಾಡಿದೆ. ಅದಕ್ಕಾಗಿ ಕೆಲ ನಿರ್ದಿಷ್ಟ ಪ್ರದೇಶಗಳನ್ನ ಗುರುತಿಸಿ ಮೀಸಲಿರಿಸಿದೆ. ಅದರಂತೆ ಬೆಂಗಳೂರಿನ ಹೊರವಲಯದಲ್ಲಿರುವ ದಾಸನಪುರದ ಹೋಬಳಿಯ ಗಿಡ್ಡೇನಹಳ್ಳಿ ಬಳಿಯೂ 4 ಎಕರೆ ಜಾಗವನ್ನ ಗುರುತಿಸಲಾಗಿದೆ.
ಆದ್ರೆ ರಾಜ್ಯ ಸರ್ಕಾರದ ಈ ಕ್ರಮಕ್ಕೆ ಗಿಡ್ಡೇನಹಳ್ಳಿ ಜನತೆ ಪ್ರತಿಭಟನೆ ಮಾಡಿದ್ದಾರೆ. ಕೊರೊನಾದಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆಗೆ ನಾವು ಅವಕಾಶ ಮಾಡಿಕೊಡುವುದಿಲ್ಲ. ನಮ್ಮಲ್ಲಿನ ಕೆಲವರಿಗೆ ಏಡ್ಸ್ ಕಾಯಿಲೆ ಇದೆ. ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಅವರ ಪ್ರಾಣಕ್ಕೆ ಅಪಾಯ. ಹೀಗಾಗಿ ಇಲ್ಲಿ ಮೀಸಲಾಗಿರುವ ಜಾಗವನ್ನ ರದ್ದುಪಡಿಸಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.