ಇಡೀ ಬೆಂಗಳೂರು ಮತ್ತೆ ಸ್ತಬ್ಧ..!

ಬೆಂಗಳೂರು: ಈಗಾಗಲೇ ಕೊರೊನಾ ಲಾಕ್​ಡೌನ್​ನಿಂದ ಇಡೀ ರಾಜ್ಯವೇ ಪತರಗುಟ್ಟಿಹೋಗಿದೆ. ಅದ್ರಲ್ಲಂತೂ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಒಂದೇ ದಿನಕ್ಕೆ ಸಾವಿರ ಗಡಿ ಸಮೀಪಿಸುತ್ತಿದೆ. ಈ ಮಧ್ಯೆ ನಾಳೆ ವೀಕೆಂಡ್ ಇದೆ ಎಂದು ನಗರ ಬಿಟ್ಟು ಎಲ್ಲಾದ್ರು ಹೋಗೋಣ ಅಂನ್ಕೊಂಡಿದ್ರೆ, ನಿಮಗೆ ನಿರಾಸೆ ಗ್ಯಾರಂಟಿ. ಹೌದು, ನಾಳೆ ಶನಿವಾರದಿಂದ ವೀಕ್ ಎಂಡ್ ಲಾಕ್​ಡೌನ್ ಜಾರಿಯಾಗಲಿದೆ. ನಾಳೆ ರಾತ್ರಿ 8 ರಿಂದ ಸೋಮವಾರ ಬೆಳಗ್ಗೆ 5ರವರೆಗೆ ಕಂಪ್ಲೀಟ್​ ಲಾಕ್​ ಆಗಲಿದೆ. ಹಾಗಾಗಿ ಮನೆಯಿಂದ ಹೊರಬರುವ ಮುನ್ನ ಬೆಂಗಳೂರಿಗರೇ ಎಚ್ಚರಿಕೆಯಿಂದಿರಿ. ಯಾಕಂದ್ರೆ […]

ಇಡೀ ಬೆಂಗಳೂರು ಮತ್ತೆ ಸ್ತಬ್ಧ..!
ಭಾಸ್ಕರ್ ರಾವ್
Follow us
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು

Updated on:Jul 03, 2020 | 2:35 PM

ಬೆಂಗಳೂರು: ಈಗಾಗಲೇ ಕೊರೊನಾ ಲಾಕ್​ಡೌನ್​ನಿಂದ ಇಡೀ ರಾಜ್ಯವೇ ಪತರಗುಟ್ಟಿಹೋಗಿದೆ. ಅದ್ರಲ್ಲಂತೂ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಒಂದೇ ದಿನಕ್ಕೆ ಸಾವಿರ ಗಡಿ ಸಮೀಪಿಸುತ್ತಿದೆ. ಈ ಮಧ್ಯೆ ನಾಳೆ ವೀಕೆಂಡ್ ಇದೆ ಎಂದು ನಗರ ಬಿಟ್ಟು ಎಲ್ಲಾದ್ರು ಹೋಗೋಣ ಅಂನ್ಕೊಂಡಿದ್ರೆ, ನಿಮಗೆ ನಿರಾಸೆ ಗ್ಯಾರಂಟಿ.

ಹೌದು, ನಾಳೆ ಶನಿವಾರದಿಂದ ವೀಕ್ ಎಂಡ್ ಲಾಕ್​ಡೌನ್ ಜಾರಿಯಾಗಲಿದೆ. ನಾಳೆ ರಾತ್ರಿ 8 ರಿಂದ ಸೋಮವಾರ ಬೆಳಗ್ಗೆ 5ರವರೆಗೆ ಕಂಪ್ಲೀಟ್​ ಲಾಕ್​ ಆಗಲಿದೆ. ಹಾಗಾಗಿ ಮನೆಯಿಂದ ಹೊರಬರುವ ಮುನ್ನ ಬೆಂಗಳೂರಿಗರೇ ಎಚ್ಚರಿಕೆಯಿಂದಿರಿ. ಯಾಕಂದ್ರೆ ಸುಖಾ ಸುಮ್ಮನೇ ಮನೆಯಿಂದ ಹೊರ ಬಂದ್ರೆ ಫೈನ್ ಬೀಳುತ್ತೆ. ಅಲ್ಲದೆ, ಲಿಮಿಟೆಡ್ ಕ್ರಾಸ್ ಮಾಡಿದ್ರೆ, ಕೇಸ್ ಸಹ ನಿಮ್ಮ ಮೇಲೆ ಬೀಳುತ್ತೆ. ಜೈಲಿಗೂ ಹಾಕುವ ಸಾಧ್ಯತೆಯಿದೆ.

ವೀಕೆಂಡ್ ಲಾಕ್​ಡೌನ್​ನಲ್ಲಿ ಏನಿರುತ್ತೆ? ಕೊರೊನಾ ಕಂಟ್ರೋಲ್ ಮಾಡಲು ಸ್ಟ್ರಿಕ್ಟ್​ ವೀಕೆಂಡ್​ ಲಾಕ್​ಡೌನ್​ ಮಾಡಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಪೂರೈಕೆಗಷ್ಟೇ ಅವಕಾಶ ನೀಡಲಾಗಿದೆ. ಇನ್ನು ಲಾಕ್​ಡೌನ್​ ಅವಧಿಯಲ್ಲಿ ಏನಿರುತ್ತೆ ಅನ್ನೋದು ನೋಡೋದಾದ್ರೆ ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್ಸ್, ದಿನಸಿ ಅಂಗಡಿ, ಹೋಟೆಲ್​ನಲ್ಲಿ ಪಾರ್ಸೆಲ್​ಗೆ ಮಾತ್ರ ಅವಕಾಶ ನೀಡಲಾಗುತ್ತೆ. ತರಕಾರಿ, ಮಾಂಸದ ಅಂಗಡಿ ಲಭ್ಯವಿರುತ್ತೆ. ಈ ಹಿಂದೆ ಇದ್ದಂತೆ ಲಾಕ್​ಡೌನ್ ಮುಂದುವರೆಯುವುದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

Published On - 2:29 pm, Fri, 3 July 20