ಕಲಬುರಗಿ: ಶಾಲೆ ಓಪನ್ ಮಾಡ್ಬೇಕಾ ಬೇಡ್ವಾ ಅನ್ನೋ ಗೊಂದಲದಲ್ಲಿದ್ದ ರಾಜ್ಯ ಸರ್ಕಾರ ಮತ್ತ ಪೋಷಕರಿಗೆ ಈ ಸುದ್ದಿ ಆಘಾತ ತಂದೊಡ್ಡಿದೆ. ಯಾಕಂದ್ರೆ, ವಠಾರ ಶಾಲೆಗೆ ಹೋಗಿದ್ದ 4 ಮಕ್ಕಳಿಗೆ ಕೊರೊನಾ ದೃಢವಾಗಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶಾಳ್ ಗ್ರಾಮದಲ್ಲಿ ನಡೆದಿದೆ.
ಏನಿದು ವಿದ್ಯಾಗಮ ಯೋಜನೆ?
ವಿದ್ಯಾಗಮ ಯೋಜನೆ ಹೆಸ್ರಲ್ಲಿ ಮಕ್ಕಳಿಗೆ ತರಗತಿ ನಡೆಸಲಾಗ್ತಾ ಇದೆ. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ತರಗತಿ ನಡೆಸಲಾಗ್ತಾ ಇದೆ. ವಠಾರದಲ್ಲಿರೋ ಅಥವಾ ಅಕ್ಕಪಕ್ಕದಲ್ಲಿರೋ ಮಕ್ಕಳನ್ನ ಸೇರಿಸಿ ಕ್ಲಾಸ್ ಮಾಡಲಾಗುತ್ತಿದ್ದು ಸರ್ಕಾರದ ನಿಯಮದಂತೆ 5 ಮಕ್ಕಳನ್ನ ಮೀರಿ ಸೇರಿಸೋ ಹಾಗಿಲ್ಲ. ಅಂದರೆ, ತರಗತಿ ನಡೆಸೋದಕ್ಕೆ ಮಿತಿ ಮೀರಿ ಮಕ್ಕಳನ್ನ ತರಗತಿಗೆ ಕರೆಯೋ ಹಾಗಿಲ್ಲ.
ಆದರೆ, ಪ್ರಸ್ತುತ ಸರ್ಕಾರದ ಆದೇಶವನ್ನು ಧಿಕ್ಕರಿಸಿ 30-40 ಮಕ್ಕಳನ್ನ ಒಂದೇ ಕಡೆ ಸೇರಿಸಿ ತರಗತಿ ತೆಗೆದುಕೊಳ್ತಿದ್ದಾರೆ. ಹಾಗಾಗಿ, ವಿದ್ಯಾಗಮ ಯೋಜನೆಯೇ ಮಕ್ಕಳಿಗೆ ಮಾರಕವಾಗುತ್ತಿದೆ. ಈ ಹಿಂದೆ, ವಿದ್ಯಾಗಮ ಯೋಜನೆ ಬಗ್ಗೆ ಖಾಸಗಿ ಶಾಲೆಗಳು ಸಹ ತಕರಾರು ಎತ್ತಿದ್ದವು.