DJ ಹಳ್ಳಿ ಗಲಭೆ: ದಳ್ಳುರಿಯಲ್ಲಿ 4 ಮರಿಗಳನ್ನ ಕಳೆದುಕೊಂಡ ತಾಯಿ ಬೆಕ್ಕಿನ ಮೂಕರೋಧನೆ
ಬೆಂಗಳೂರು: DJ ಹಳ್ಳಿಯಲ್ಲಿ ನಡೆದ ಗಲಭೆಯ ವೇಳೆ ಉದ್ರಿಕ್ತರ ಕೆಂಗಣ್ಣಿಗೆ ಕೇವಲ ಪೊಲೀಸ್ ಠಾಣೆ ಮತ್ತು ವಾಹನಗಳಷ್ಟೇ ಅಲ್ಲ ನಾಲ್ಕು ಪುಟ್ಟ ಕಂದಮ್ಮಗಳು ಸಹ ಗುರಿಯಾದವು. ಹೌದು, ಪೊಲೀಸ್ ಠಾಣೆಯ ಬೇಸ್ಮೆಂಟ್ನಲ್ಲಿ ವಾರದ ಹಿಂದೆ ಬೆಕ್ಕು ಒಂದು 4 ಮರಿಗಳಿಗೆ ಜನ್ಮ ನೀಡಿತ್ತಂತೆ. ಆದರೆ, ಮೊನ್ನೆ ನಡೆದ ಗಲಭೆಯಲ್ಲಿ ಕಿಡಿಗೇಡಿಗಳು ಬೇಸ್ಮೆಂಟ್ನಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚಿಬಿಟ್ಟರು. ಗಲಭೆಕೋರರು ಹಚ್ಚಿದ ಬೆಂಕಿಗೆ ಸಿಲುಕಿ ಆ ನಾಲ್ಕೂ ಪುಟ್ಟ ಕಂದಮ್ಮಗಳು ಸಜೀವ ದಹನವಾಗಿವೆ. ಇದೇ ವೇಳೆ ಅಲ್ಲಿಂದ ತಪ್ಪಿಸಿಕೊಂಡಿದ್ದ ತಾಯಿ […]

ಬೆಂಗಳೂರು: DJ ಹಳ್ಳಿಯಲ್ಲಿ ನಡೆದ ಗಲಭೆಯ ವೇಳೆ ಉದ್ರಿಕ್ತರ ಕೆಂಗಣ್ಣಿಗೆ ಕೇವಲ ಪೊಲೀಸ್ ಠಾಣೆ ಮತ್ತು ವಾಹನಗಳಷ್ಟೇ ಅಲ್ಲ ನಾಲ್ಕು ಪುಟ್ಟ ಕಂದಮ್ಮಗಳು ಸಹ ಗುರಿಯಾದವು.

ಹೌದು, ಪೊಲೀಸ್ ಠಾಣೆಯ ಬೇಸ್ಮೆಂಟ್ನಲ್ಲಿ ವಾರದ ಹಿಂದೆ ಬೆಕ್ಕು ಒಂದು 4 ಮರಿಗಳಿಗೆ ಜನ್ಮ ನೀಡಿತ್ತಂತೆ. ಆದರೆ, ಮೊನ್ನೆ ನಡೆದ ಗಲಭೆಯಲ್ಲಿ ಕಿಡಿಗೇಡಿಗಳು ಬೇಸ್ಮೆಂಟ್ನಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚಿಬಿಟ್ಟರು. ಗಲಭೆಕೋರರು ಹಚ್ಚಿದ ಬೆಂಕಿಗೆ ಸಿಲುಕಿ ಆ ನಾಲ್ಕೂ ಪುಟ್ಟ ಕಂದಮ್ಮಗಳು ಸಜೀವ ದಹನವಾಗಿವೆ.
ಇದೇ ವೇಳೆ ಅಲ್ಲಿಂದ ತಪ್ಪಿಸಿಕೊಂಡಿದ್ದ ತಾಯಿ ಬೆಕ್ಕು ಇದೀಗ ತನ್ನ ಮರಿಗಳನ್ನು ಹುಡುಕುತ್ತಾ ಠಾಣೆ ಮತ್ತು ಬೇಸ್ಮೆಂಟ್ನಲ್ಲಿ ತಿರುಗಾಡುವ ದೃಶ್ಯ ಕಂಡುಬಂತು. ಪದೇ ಪದೇ ಬೇಸ್ಮೆಂಟ್ಗೆ ಹೋಗಿ ತನ್ನ ನಾಲ್ಕು ಪುಟ್ಟ ಕಂದಮ್ಮಗಳಿಗಾಗಿ ಹುಡುಕುತ್ತಿರುವ ಈ ಮೂಕ ಜೀವಿಯ ರೋಧನೆ ನೆರೆದವರ ಕಣ್ಣಾಲಿಗಳನ್ನು ತೇವ ಗೊಳಿಸಿತು.




