ಬೆಂಗಳೂರಲ್ಲಿ ಸತ್ತ ಮೇಲೂ ನೆಮ್ಮದಿ ಇಲ್ಲ..

|

Updated on: Jul 15, 2020 | 2:00 PM

ಬೆಂಗಳೂರು: ಮಹಿಳೆ ಮೃತಪಟ್ಟ 5 ದಿನಗಳ ಬಳಿಕ ಅಂತ್ಯಸಂಸ್ಕಾರ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈಕೆ ಬದುಕಿದ್ದಾಗ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗಲಿಲ್ಲ. ಮೃತಪಟ್ಟ ಮೇಲೆ ಸರಿಯಾದ ಸಮಯಕ್ಕೆ ರಿಪೋರ್ಟ್ ಕೂಡ ಬರಲಿಲ್ಲ. ಈಗ ಸರಿಯಾದ ಸಮಯಕ್ಕೆ ಅಂತ್ಯ ಸಂಸ್ಕಾರ ಸಹ ಮಾಡಿಲ್ಲ. ಬೆಂಗಳೂರಲ್ಲಿ ಸತ್ತ ಮೇಲೂ ನೆಮ್ಮದಿ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಪುಲಿಕೇಶಿನಗರದ ವೆಂಕಟೇಶಪುರ ನಿವಾಸಿ ಜುಲೈ10ರಂದು ಅಂಬೇಡ್ಕರ್ ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್​ಗೆ ಮಾದರಿ ಸಂಗ್ರಹ ಮಾಡಲಾಗಿತ್ತು. ಬಳಿಕ ಮಹಿಳೆಗೆ ಸೂಕ್ತ ಚಿಕಿತ್ಸೆಯನ್ನೂ ನೀಡದ […]

ಬೆಂಗಳೂರಲ್ಲಿ ಸತ್ತ ಮೇಲೂ ನೆಮ್ಮದಿ ಇಲ್ಲ..
Follow us on

ಬೆಂಗಳೂರು: ಮಹಿಳೆ ಮೃತಪಟ್ಟ 5 ದಿನಗಳ ಬಳಿಕ ಅಂತ್ಯಸಂಸ್ಕಾರ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈಕೆ ಬದುಕಿದ್ದಾಗ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗಲಿಲ್ಲ. ಮೃತಪಟ್ಟ ಮೇಲೆ ಸರಿಯಾದ ಸಮಯಕ್ಕೆ ರಿಪೋರ್ಟ್ ಕೂಡ ಬರಲಿಲ್ಲ. ಈಗ ಸರಿಯಾದ ಸಮಯಕ್ಕೆ ಅಂತ್ಯ ಸಂಸ್ಕಾರ ಸಹ ಮಾಡಿಲ್ಲ. ಬೆಂಗಳೂರಲ್ಲಿ ಸತ್ತ ಮೇಲೂ ನೆಮ್ಮದಿ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರಿನ ಪುಲಿಕೇಶಿನಗರದ ವೆಂಕಟೇಶಪುರ ನಿವಾಸಿ ಜುಲೈ10ರಂದು ಅಂಬೇಡ್ಕರ್ ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್​ಗೆ ಮಾದರಿ ಸಂಗ್ರಹ ಮಾಡಲಾಗಿತ್ತು. ಬಳಿಕ ಮಹಿಳೆಗೆ ಸೂಕ್ತ ಚಿಕಿತ್ಸೆಯನ್ನೂ ನೀಡದ ಆರೋಪ ಕೇಳಿ ಬಂದಿದೆ.

ಜುಲೈ 11ರಂದು ಚಿಕಿತ್ಸೆ ಫಲಿಸದೆ ಮಹಿಳೆ ಮೃತಪಟ್ಟಿದ್ರು. ಮಹಿಳೆ ಮೃತಪಟ್ಟು 5 ದಿನವಾದ್ರೂ ಕೊವಿಡ್ ವರದಿ ಬಂದಿಲ್ಲ. ಹೀಗಾಗಿ ವಿಕ್ಟೋರಿಯಾ ಶವಾಗಾರದಲ್ಲೇ ಮೃತದೇಹ ಇರಿಸಲಾಗಿತ್ತು. ಸತ್ತು 5 ದಿನವಾದ್ರೂ ಕೋವಿಡ್ ವರದಿ ಬಾರದ ಕಾರಣ ಇಂದು ಮೃತ ಮಹಿಳೆ ಕುಟುಂಬಸ್ಥರು ಕಾಡಿಬೇಡಿ ಮೃತದೇಹವನ್ನು ಪಡೆದು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಕೊರೊನಾ ಭಯದಲ್ಲೇ ಕಲ್ಪಳ್ಳಿ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆದಿದೆ.