
ಗದಗ: ಜಿಲ್ಲೆಯ ದಂಗಲ್ ಹುಡುಗಿಯರು ಅಂದ್ರೆ ಸಾಕು ದಂಗಲ್ ಗಂಡು ಕಲಿಗಳು ಭಯ ಪಡ್ತಾರೆ. ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ನಾಡಿನ ಕೀರ್ತಿ ಪತಾಕೆ ಹಾರಿಸಿದ ದಂಗಲ್ ಹುಡ್ಗಿರು ಕೋವಿಡ್ ಬಳಿಕ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ರಾಷ್ಟ ಮಟ್ಟದ ದಂಗಲ್ ಶಿಕಾರಿಗೆ ಭರ್ಜರಿ ತಾಲೀಮು ನಡೆಸಿದ್ದಾರೆ.
ಈ ದಂಗಲ್ ಹುಡುಗಿಯರು ಎದುರಾಳಿಗಳು ಎಂಥಾ ಸ್ಟ್ರಾಂಗ್ ಇದ್ರೂ, ಅಖಾಡದಲ್ಲಿ ಒಂದು ಕಣ್ಣೋಟ ನೋಡುವಷ್ಟರಲ್ಲಿ ಎದುರಾಳಿಯನ್ನು ನೆಲಕ್ಕೆ ಉರುಳಿಸ್ತಾರೆ. ಈ ಹಿಂದೆ ನಡೆದ ರಾಷ್ಟ್ರ, ಅಂತರಾಷ್ಟ್ರೀಯ ಕುಸ್ತಿ ಚಾಂಪಿಯನ್ ಶಿಪ್ನಲ್ಲಿ ಗದಗ ಜಿಲ್ಲೆಯ ಈ ಹುಡುಗಿಯರು ಚಿನ್ನ, ಬೆಳ್ಳಿ, ಕಂಚಿನ ಪದಕಗಳ ಬೇಟೆಯಾಡಿದ್ದಾರೆ. ಈ ಬೇಟೆ ಅಷ್ಟು ಸುಲಭವಾಗಿ ಸಿಕ್ಕಿಲ್ಲ. ರಾಷ್ಟ್ರಮಟ್ಟದ ಚಾಂಪಿಯನ್ ಶಿಪ್ನಲ್ಲಿ ದೇಶದ 10 ಕ್ಕೂ ಅಧಿಕ ರಾಜ್ಯಗಳ ಕುಸ್ತಿ ಪಟುಗಳು ಭಾಗವಹಿಸಿದ್ರು.
ಸಾಕಷ್ಟು ಸ್ಟ್ರಾಂಗ್ ಕಾಂಪಿಟೇಶನ್ನಲ್ಲಿ ಎದುರಾಳಿಗಳನ್ನು ಎದುರಿಸಿದ ಕನ್ನಡದ ಯುವತಿಯರು ಸಾಕಷ್ಟು ಪದಕಗಳನ್ನ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಕರ್ನಾಟಕದ ಕೀರ್ತಿ ಪತಾಕೆ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದಾರೆ. ಆದ್ರೆ ಕೊರೊನಾ ಹೆಮ್ಮಾರಿ ಒಕ್ಕರಿಸಿದ ಬಳಿಕ ಕುಸ್ತಿ ಸದ್ದೇ ಬಂದಾಗಿತ್ತು. ಆದ್ರೆ ಈಗ ಸರ್ಕಾರದ ಅನುಮತಿ ಹಿನ್ನೆಲೆಯಲ್ಲಿ ಮತ್ತೆ ದಂಗಲ್ ಹವಾ ಮಾಡಲು ಸಜ್ಜಾಗಿದ್ದಾರೆ. ಗದಗ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ತರಬೇತುದಾರ ಶರಣಪ್ಪ ಅವರು ಹುಡುಗಿಯರಿಗೆ ಭರ್ಜರಿ ತಾಲೀಮು ನಡೆಸಿದ್ದಾರೆ.
ಅಯೋಧ್ಯೆಯಲ್ಲಿ ಸೀನಿಯರ್ ನ್ಯಾಷನಲ್ ಚಾಂಪಿಯನ್ ಶಿಪ್ ನಡೆಯಲಿದೆ..
ಇದು ರಾಷ್ಟ್ರೀಯ ಮಟ್ಟದ ದಂಗಲ್, ಅಂದ್ರೆ ಸುಮ್ನೆ ಮಾತಲ್ಲ. ರಾಜ್ಯ ಮಟ್ಟದಲ್ಲಿ ನಡೆಯೋ ಆಯ್ಕೆ ಪ್ರಕ್ರಿಯೆಯಲ್ಲಿ ಘಟಾನುಘಟಿಗಳು ಸೆಣಸಾಡಬೇಕು. ಅದಕ್ಕೆ ಪ್ರತಿ ನಿತ್ಯ ಬೆಳಗ್ಗೆ ಎರಡು ಗಂಟೆ ಸಂಜೆ ಎರಡು ಗಂಟೆ ಅಖಾಡದಲ್ಲಿ ತರಬೇತಿ ನೀಡಲಾಗುತ್ತಿದೆ. ಡಿಸೆಂಬರ್ 18 ರಿಂದ 21 ವರೆಗೆ ಅಯೋಧ್ಯೆಯಲ್ಲಿ ಸೀನಿಯರ್ ನ್ಯಾಷನಲ್ ಚಾಂಪಿಯನ್ ಶಿಪ್ ನಡೆಯಲಿದೆ.
ಅಲ್ಲಿ ನಡೆಯಲಿರೋ ಚಾಂಪಿಯನ್ ಶಿಪ್ನಲ್ಲಿ ಗದಗ ಜಿಲ್ಲೆಯ 5 ಹುಡುಗಿಯರು ಹಾಗೂ 3 ಹುಡುಗರು ಭಾಗವಹಿಸಲಿದ್ದಾರಂತೆ. ಅಂತರಾಷ್ಟ್ರೀಯ ಕುಸ್ತಿ ಪಟು, ಟಿವಿ9 ಕ್ರೀಡಾ ಪ್ರಶಸ್ತಿ ಪುರಸ್ಕೃತೆ ಪ್ರೇಮಾ ಹುಚ್ಚಣ್ಣವರ, ಬಸೀರಾ, ಶಹಿದಾ ಬೇಗಂ, ಶ್ವೇತಾ ಬೆಳಗಟ್ಟಿ, ಶಶಿಕಲಾ, ಪ್ರಶಾಂತಗೌಡ, ಸಾಗರ, ಫಾಲಾಕ್ಷ ಗೌಡ ಆಡಲಿದ್ದಾರೆ. ಅಯೋಧ್ಯೆಯಲ್ಲಿ ನಡೆಯೋ ಚಾಂಪಿಯನ್ ಶಿಪ್ನಲ್ಲಿ ಭಾಗಿಯಾಗಲು ಕಠಿಣ ತಾಲೀಮು ನಡೆಸಿದ್ದು, ಪದಕಗಳನ್ನು ಬೇಟೆಯಾಡಿ ಜಿಲ್ಲೆ ಮತ್ತು ರಾಜ್ಯಕ್ಕೆ ಕೀರ್ತಿ ತರ್ತೀವಿ ಅಂತಾರೆ ದಂಗಲ್ ಹುಡುಗಿ ಬಸೀರಾ ವಕಾರಾದ.
ಮಹಿಳಾ ಕುಸ್ತಿ ಅಂದ್ರೆ ಗದಗ ಎನ್ನುವಂತೆ ಮಾಡಿದ್ದಾರೆ ಈ ಕುಸ್ತಿ ಹುಡುಗಿಯರು. ಹೋದಲೆಲ್ಲಾ ಚಿನ್ನದ ಶಿಕಾರಿ ಮಾಡುವ ನಮ್ಮ ಕನ್ನಡದ ಕುವರಿಯರಿಗೆ ಆಲ್ ದಿ ಬೆಸ್ಟ್ ಹೇಳೋಣಾ..
-ಸಂಜೀವ ಪಾಂಡ್ರೆ
Published On - 2:52 pm, Fri, 20 November 20