ಇದು ನಿವೃತ್ತ ಮೇಷ್ಟ್ರು ಮನೆ ಮೇಲ್ಛಾವಣಿಯನ್ನೇ ಗಾರ್ಡನ್ ಮಾಡಿದ ಕಥೆ..!

ಇದು ನಿವೃತ್ತ ಮೇಷ್ಟ್ರು ಮನೆ ಮೇಲ್ಛಾವಣಿಯನ್ನೇ ಗಾರ್ಡನ್ ಮಾಡಿದ ಕಥೆ..!

ಧಾರವಾಡ: ಲೋಕೋ ಭಿನ್ನ ರುಚಿ.. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಹವ್ಯಾಸವಿರುತ್ತೆ. ಕೆಲವರಿಗೆ ನಾಣ್ಯಗಳನ್ನು ಸಂಗ್ರಹಿಸುವುದು, ಮತ್ತೆ ಕೆಲವರಿಗೆ ಅಂಚೆ ಚೀಟಿ ಸಂಗ್ರಹಿಸುವುದು, ಇನ್ನೂ ಕೆಲವರಿಗೆ ಪ್ರಾಣಿ-ಪಕ್ಷಿಗಳನ್ನು ಸಾಕುವ ಹವ್ಯಾಸವಿರುತ್ತೆ. ಧಾರವಾಡದಲ್ಲಿ ವಿಭಿನ್ನ ದಂಪತಿ ಇದ್ದಾರೆ. ಅದರಲ್ಲಿ ಪತಿ ಶಿಕ್ಷಕ ಸೇವೆಯಿಂದ ನಿವೃತ್ತಿಯಾದ ಬಳಿಕ ಗಿಡ ಹಾಗೂ ಕೃಷಿ ಮೇಲಿನ ಪ್ರೀತಿಯಿಂದ ತಮ್ಮ ಮನೆಯ ಮೇಲ್ಛಾವಣಿಯನ್ನೇ ಸಣ್ಣ ಕೈತೋಟವನ್ನಾಗಿ ಮಾಡಿಕೊಂಡಿದ್ದಾರೆ. ಈ ದಂಪತಿಯ ಹೆಸರು ಗಂಗಯ್ಯ ಹಾಗೂ ಮಮತಾ ಹಿರೇಮಠ. ಇವರು ಧಾರವಾಡ ನಗರದ ಆಕಾಶವಾಣಿ ಕಚೇರಿ ಹತ್ತಿರದ […]

pruthvi Shankar

| Edited By: sadhu srinath

Nov 20, 2020 | 2:41 PM

ಧಾರವಾಡ: ಲೋಕೋ ಭಿನ್ನ ರುಚಿ.. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಹವ್ಯಾಸವಿರುತ್ತೆ. ಕೆಲವರಿಗೆ ನಾಣ್ಯಗಳನ್ನು ಸಂಗ್ರಹಿಸುವುದು, ಮತ್ತೆ ಕೆಲವರಿಗೆ ಅಂಚೆ ಚೀಟಿ ಸಂಗ್ರಹಿಸುವುದು, ಇನ್ನೂ ಕೆಲವರಿಗೆ ಪ್ರಾಣಿ-ಪಕ್ಷಿಗಳನ್ನು ಸಾಕುವ ಹವ್ಯಾಸವಿರುತ್ತೆ. ಧಾರವಾಡದಲ್ಲಿ ವಿಭಿನ್ನ ದಂಪತಿ ಇದ್ದಾರೆ. ಅದರಲ್ಲಿ ಪತಿ ಶಿಕ್ಷಕ ಸೇವೆಯಿಂದ ನಿವೃತ್ತಿಯಾದ ಬಳಿಕ ಗಿಡ ಹಾಗೂ ಕೃಷಿ ಮೇಲಿನ ಪ್ರೀತಿಯಿಂದ ತಮ್ಮ ಮನೆಯ ಮೇಲ್ಛಾವಣಿಯನ್ನೇ ಸಣ್ಣ ಕೈತೋಟವನ್ನಾಗಿ ಮಾಡಿಕೊಂಡಿದ್ದಾರೆ.

ಈ ದಂಪತಿಯ ಹೆಸರು ಗಂಗಯ್ಯ ಹಾಗೂ ಮಮತಾ ಹಿರೇಮಠ. ಇವರು ಧಾರವಾಡ ನಗರದ ಆಕಾಶವಾಣಿ ಕಚೇರಿ ಹತ್ತಿರದ ನಿವಾಸಿಗಳು. ಗಂಗಯ್ಯ ಹಿರೇಮಠ ನಿವೃತ್ತ ಶಿಕ್ಷಕ. ಮೊದಲಿನಿಂದಲೂ ಕೃಷಿ, ಪರಿಸರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಗಂಗಯ್ಯ ನಿವೃತ್ತಿ ಬಳಿಕ ಅದೇ ಪ್ರೀತಿಯನ್ನು ಹೆಚ್ಚಿಸಿಕೊಳ್ಳಲು ನಿರ್ಧರಿಸಿದರು.

ಕೂಡಲೇ ಅನೇಕರನ್ನು ಸಂಪರ್ಕಿಸಿ, ವಿವಿಧ ಜಾತಿಯ ಸಸಿಗಳನ್ನು ತಮ್ಮ ಮನೆಯ ಮೇಲ್ಭಾಗದಲ್ಲೇ ಬೆಳೆಸಿ ತಮ್ಮದೇ ಆದ ಸುಂದರ ಗಾರ್ಡನ್ ಮಾಡಿಕೊಂಡಿದ್ದಾರೆ. ಸುಮಾರು 300ಕ್ಕೂ ಅಧಿಕ ಜಾತಿಯ ಸಸಿಗಳನ್ನು ನೆಟ್ಟು ಪರಿಸರದ ಸುಖ ಅನುಭವಿಸುತ್ತಿದ್ದಾರೆ. ಇದಕ್ಕೆ ಅವರ ಪತ್ನಿ ಮಮತಾ ಕೂಡ ಸಾಥ್ ನೀಡುತ್ತಿದ್ದಾರೆ.

ಹಲವು ಔಷಧ ಸಸ್ಯಗಳು ಇಲ್ಲಿವೆ.. ಔಷಧ ಸಸ್ಯಗಳಾದ ರಣಕಲ್ಲಿ, ನೆಲಬೇವು, ಕಸ್ತೂರಿ, ದೊಡ್ಡಪತ್ರಿ ಸೇರಿದಂತೆ ಅರೇಕಾ, ಝಡ್ ಝಡ್ ಪ್ಲ್ಯಾಂಟ್ಸ್, ಸೆಕ್ಯುಲಂಟ್ ಪ್ಲ್ಯಾಂಟ್ಸ್, ಅಡೋನಿಯಮ್ಸ್ ನಂತಹ ಅನೇಕ ತರಹೇವಾರಿ ಸಸಿಗಳನ್ನು ಇವರು ತಮ್ಮ ಮನೆಯ ಟೆರೇಸ್ ಮೇಲೆ ಹವ್ಯಾಸಕ್ಕಾಗಿ ಜೋಪಾನ ಮಾಡುತ್ತಿದ್ದಾರೆ. ಪತಿ ಊರಲ್ಲಿಲ್ಲದ ವೇಳೆಯಲ್ಲಿ ಅವುಗಳ ಕಾಳಜಿ ಜವಾಬ್ದಾರಿಯು ಪತ್ನಿ ಮಮತಾ ಹಿರೇಮಠರದ್ದು. ಪತಿಯ ಮಾರ್ಗದರ್ಶನದಲ್ಲಿ ಎಲ್ಲ ಮಾಹಿತಿಗಳನ್ನು ಪಡೆದಿರೋ ಮಮತಾ, ಸಾಕಷ್ಟು ಕಾಳಜಿ ವಹಿಸಿ ಟೆರೇಸ್ ಗಾರ್ಡನ್ ನಿರ್ವಹಣೆ ಮಾಡುತ್ತಾರೆ.

ಇಂಗು ಗುಂಡಿಯ ನಿರ್ಮಾಣ.. ಇನ್ನು ಈ ಸಸಿಗಳಿಗೆ ಬೇಕಾದ ಎರೆಹುಳು ಗೊಬ್ಬರನ್ನು ಸ್ವತಃ ತಾವೇ ಸಿದ್ಧಪಡಿಸುವ ಈ ದಂಪತಿ, ಕಸದಿಂದ ರಸವನ್ನು ತೆಗೆಯುತ್ತಿದ್ದಾರೆ. ಇನ್ನು ಮಳೆಯ ನೀರು ವೇಸ್ಟ್ ಆಗಬಾರದು ಅಂತಾ ಮನೆಯ ಹಿಂಭಾಗದಲ್ಲಿ ಇಂಗು ಗುಂಡಿಯನ್ನೂ ನಿರ್ಮಿಸಿ ಭೂಮಿಯ ಅಂತರ್ಜಲಮಟ್ಟ ಹೆಚ್ಚಳ ಮಾಡಲು ಕೈ ಜೋಡಿಸಿದ್ದಾರೆ. ಒಟ್ಟಿನಲ್ಲಿ ಸರಕಾರಿ ನೌಕರರು ನಿವೃತ್ತಿಯಾದ ಬಳಿಕ ನೆಮ್ಮದಿಯಾಗಿ ಕುಟುಂಬದೊಂದಿಗೆ ಕಾಲ ಕಳೆಯಬೇಕು ಅಂತಾ ಬಯಸುತ್ತಾರೆ.‌ ಅಂಥವರ ಮಧ್ಯೆ ಇಂಥ‌ ಹವ್ಯಾಸಗಳೊಡೆಯರು ನೆಮ್ಮದಿಯ ಜೀವನ ಕಾಣುತ್ತಿರುವುದು ಸಂತಸದ ಸಂಗತಿಯೇ ಸರಿ. – ನರಸಿಂಹಮೂರ್ತಿ ಪ್ಯಾಟಿ

Follow us on

Related Stories

Most Read Stories

Click on your DTH Provider to Add TV9 Kannada