AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ ಶಿವ.. ಅದ್ದೂರಿ ಹವಾ: ಇದು ರಿಯಲ್​ ರೌಡಿಯ ಬಿಂದಾಸ್​ ವೈಭೋಗ!

ಬೆಂಗಳೂರು: ಪೆರೋಲ್ ಮೇಲೆ ಜೈಲಿನಿಂದ ಹೊರಬಂದ ರೌಡಿ ಶೀಟರ್​ ಒಬ್ಬನ ಅದ್ದೂರಿ ವೈಭೋಗದ ದೃಶ್ಯಾವಳಿ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಹೌದು, ಸಿಎಂ, ಪಿಎಂಗೂ ಅಷ್ಟು ಬೆಂಗಾವಲು ವಾಹನ ಇರೋದಿಲ್ಲ ಅಷ್ಟು ಗಾಡಿಗಳನ್ನು ಕುಖ್ಯಾತ ರೌಡಿ ಶೀಟರ್​ ಬಳ್ಳಾರಿ ಶಿವನ ಬಳಿಯಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಅಂದ ಹಾಗೆ, ಟ್ಯಾಬ್ ರಘು , ಸ್ಟ್ಯಾಂಡ್ ಕುಟ್ಟಿ ಮರ್ಡರ್ ಸೇರಿದಂತೆ ಹತ್ತಕ್ಕು ಹೆಚ್ಚು ಕೇಸ್​ಗಳು ಬಳ್ಳಾರಿ ಶಿವ ಮೇಲಿವೆ. ಜೊತೆಗೆ, ತಲಘಟ್ಟಪುರ, ಜೆ.ಪಿ. ನಗರ ಹಾಗೂ ಹನುಮಂತನಗರ ಪೊಲೀಸ್​ ಠಾಣೆಗಳಲ್ಲಿ […]

ಬಳ್ಳಾರಿ ಶಿವ.. ಅದ್ದೂರಿ ಹವಾ: ಇದು ರಿಯಲ್​ ರೌಡಿಯ ಬಿಂದಾಸ್​ ವೈಭೋಗ!
KUSHAL V
| Updated By: ಸಾಧು ಶ್ರೀನಾಥ್​|

Updated on:Nov 20, 2020 | 2:45 PM

Share

ಬೆಂಗಳೂರು: ಪೆರೋಲ್ ಮೇಲೆ ಜೈಲಿನಿಂದ ಹೊರಬಂದ ರೌಡಿ ಶೀಟರ್​ ಒಬ್ಬನ ಅದ್ದೂರಿ ವೈಭೋಗದ ದೃಶ್ಯಾವಳಿ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಹೌದು, ಸಿಎಂ, ಪಿಎಂಗೂ ಅಷ್ಟು ಬೆಂಗಾವಲು ವಾಹನ ಇರೋದಿಲ್ಲ ಅಷ್ಟು ಗಾಡಿಗಳನ್ನು ಕುಖ್ಯಾತ ರೌಡಿ ಶೀಟರ್​ ಬಳ್ಳಾರಿ ಶಿವನ ಬಳಿಯಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಅಂದ ಹಾಗೆ, ಟ್ಯಾಬ್ ರಘು , ಸ್ಟ್ಯಾಂಡ್ ಕುಟ್ಟಿ ಮರ್ಡರ್ ಸೇರಿದಂತೆ ಹತ್ತಕ್ಕು ಹೆಚ್ಚು ಕೇಸ್​ಗಳು ಬಳ್ಳಾರಿ ಶಿವ ಮೇಲಿವೆ. ಜೊತೆಗೆ, ತಲಘಟ್ಟಪುರ, ಜೆ.ಪಿ. ನಗರ ಹಾಗೂ ಹನುಮಂತನಗರ ಪೊಲೀಸ್​ ಠಾಣೆಗಳಲ್ಲಿ ಬಳ್ಳಾರಿ ಶಿವನ ವಿರುದ್ಧ ರೌಡಿ ಶೀಟ್​ ಸಹ ಓಪನ್​ ಇದೆ. ಈ ನಡುವೆ, ಮರ್ಡರ್ ಕೇಸ್​ ಒಂದರಲ್ಲಿ ಕಳೆದ 4 ವರ್ಷದಿಂದ ಜೈಲುಪಾಲಾಗಿದ್ದ ಬಳ್ಳಾರಿ ಶಿವ ಕಳೆದ ವಾರ ಪೆರೋಲ್ ಮೇಲೆ ಹೊರ ಬಂದಿದ್ದ.

ಈ ವೇಳೆ, ತನ್ನ ಹುಟ್ಟೂರಾದ ಕನಕಪುರದ ಹಳ್ಳಿಯಲ್ಲಿ ಬಾಡೂಟ ಹಾಕಿಸಿದ್ದ ಬಳ್ಳಾರಿ ಶಿವ ಬಳಿಕ ತನ್ನ ಕಾರಿನ ಹಿಂದೆ 20ಕ್ಕೂ ಹೆಚ್ಚು ಬೆಂಗಾವಲು ವಾಹನಗಳಲ್ಲಿ ತನ್ನ ಬೆಂಬಲಿಗರ ದಂಡನ್ನು ಕಟ್ಟಿಕೊಂಡು ಊರೆಲ್ಲಾ ರೌಂಡ್ಸ್​ ಹೊಡೆದಿದ್ದಾನೆ.

ಬಳ್ಳಾರಿ ಶಿವನ ಈ ವೈಭೋಗ ಕಂಡು ಖುದ್ದು ಪೊಲೀಸರೇ ದಂಗಾಗಿ ಹೋಗಿದ್ದಾರೆ. ಅಂದ ಹಾಗೆ, ತನ್ನ ವಿಜಯ ಯಾತ್ರೆ ಮುಗಿಸಿದ ಬಳ್ಳಾರಿ ಶಿವನ ಪೆರೋಲ್ ಅವಧಿ ಮುಗಿದಿದ್ದು ರೌಡಿ ಮತ್ತೆ ಕೃಷ್ಣನ ಜನ್ಮಸ್ಥಾನ ಸೇರಿದ್ದಾನೆ.

Published On - 2:15 pm, Fri, 20 November 20

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!