ಮೈಸೂರು: ಅನ್ಯ ಜಾತಿ ಯುವಕನನ್ನು ಪ್ರೀತಿಸಿದ್ದಕ್ಕೆ ಹೆತ್ತವರೇ ಮಗಳನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಮೈಸೂರು ತಾಲೂಕಿನ ದೊಡ್ಡ ಕಾನ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಯುವತಿ ದೂರು ನೀಡಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನನ್ನ ಅಣ್ಣ ತೀವ್ರ ಹಲ್ಲೆ ಮಾಡಿ ಕತ್ತು ಹಿಸುಕಿ ಸಾಯಿಸಲು ಯತ್ನಿಸಿದ. ಆದರೆ ಇದನ್ನು ನಮ್ಮ ಮನೆಯವರು ತಡೆಯಲಿಲ್ಲ. ನಾನು ಗೃಹ ಬಂಧನಲ್ಲಿರುವೆ, ನನಗೆ ಜೀವ ಭಯವಿದೆ. ನನ್ನನ್ನು ಕಾಪಾಡಿ ಎಂದು ಜೂನ್ 16 ಹಾಗೂ ಆಗಸ್ಟ್ 6ರಂದು ಎರಡು ಬಾರಿ SPಗೆ ಮೃತ ಮೀನಾಕ್ಷಿ ಇ-ಮೇಲ್ ಮೂಲಕ ದೂರು ನೀಡಿದ್ದಳಂತೆ.
ಕಳೆದ ಬುಧವಾರ ಸಂಜೆ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಮನೆಯಲ್ಲೇ ಪತ್ತೆಯಾಗಿದ್ದು, ಅನ್ಯ ಜಾತಿ ಯುವಕನನ್ನು ಮದುವೆ ಆಗುತ್ತೇನೆಂದು ಪಟ್ಟು ಹಿಡಿದಿದ್ದಕ್ಕೆ ಹೆತ್ತವರೇ ಮೀನಾಕ್ಷಿಯನ್ನ ಹತ್ಯೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಅನುಮಾನಾಸ್ಪದ ಸಾವು ಎಂದು ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Published On - 2:03 pm, Fri, 4 September 20