AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗರಹಾವಿನ ರಕ್ಷಣೆಗೆ ಧಾವಿಸಿದ ಹಂದಿಗಳು, ಕಾಗೆ ಬಳಗ.. ವಿಡಿಯೋ ಆಯ್ತು Viral!

ದಾವಣಗೆರೆ: ಹಾವು ಮುಂಗುಸಿಯ ಕಾಳಗದ ವೇಳೆ ಅಪಾಯದಲ್ಲಿ ಸಿಲುಕಿದ ನಾಗರಹಾವಿನ ರಕ್ಷಣೆಗೆ ಹಂದಿಗಳು ಮತ್ತು ಕಾಗೆಗಳು ಹಿಂಡು ಹಿಂಡಾಗಿ ಧಾವಿಸಿರುವ ಅಪರೂಪದ ಘಟನೆ ಜಿಲ್ಲೆಯ ತುರ್ಚಗಟ್ಟದಲ್ಲಿ ಬೆಳಕಿಗೆ ಬಂದಿದೆ. ಅಂದ ಹಾಗೆ, ಈ ಕಾಳಗದ ಅಪರೂಪದ ದೃಶ್ಯ ಯುವಕನ ಮೊಬೈಲ್​ನಲ್ಲಿ ಸೆರೆಯಾಗಿದೆ. ಮುಂಗುಸಿಯ ದಾಳಿಗೆ ತತ್ತರಿಸಿ ಹೋದ ನಾಗರಹಾವನ್ನ ಕಂಡ ತಾಯಿ ಹಂದಿ, ಮತ್ತು ಆಕೆಯ ಮರಿಗಳು ಕೂಡಲೇ ಹಾವನ್ನು ಕುಕ್ಕುತ್ತಿದ್ದ ಮುಂಗುಸಿಯನ್ನ ಓಡಿಸುವ ಯತ್ನ ಮಾಡಿದೆ. ಈ ನಡುವೆ, ಕಾಳಗವನ್ನು ನೋಡುತ್ತಿದ್ದ ಕಾಗೆ ಬಳಗವೊಂದು ಮುಂಗುಸಿ […]

ನಾಗರಹಾವಿನ ರಕ್ಷಣೆಗೆ ಧಾವಿಸಿದ ಹಂದಿಗಳು, ಕಾಗೆ ಬಳಗ.. ವಿಡಿಯೋ ಆಯ್ತು Viral!
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Sep 04, 2020 | 2:26 PM

ದಾವಣಗೆರೆ: ಹಾವು ಮುಂಗುಸಿಯ ಕಾಳಗದ ವೇಳೆ ಅಪಾಯದಲ್ಲಿ ಸಿಲುಕಿದ ನಾಗರಹಾವಿನ ರಕ್ಷಣೆಗೆ ಹಂದಿಗಳು ಮತ್ತು ಕಾಗೆಗಳು ಹಿಂಡು ಹಿಂಡಾಗಿ ಧಾವಿಸಿರುವ ಅಪರೂಪದ ಘಟನೆ ಜಿಲ್ಲೆಯ ತುರ್ಚಗಟ್ಟದಲ್ಲಿ ಬೆಳಕಿಗೆ ಬಂದಿದೆ. ಅಂದ ಹಾಗೆ, ಈ ಕಾಳಗದ ಅಪರೂಪದ ದೃಶ್ಯ ಯುವಕನ ಮೊಬೈಲ್​ನಲ್ಲಿ ಸೆರೆಯಾಗಿದೆ.

ಮುಂಗುಸಿಯ ದಾಳಿಗೆ ತತ್ತರಿಸಿ ಹೋದ ನಾಗರಹಾವನ್ನ ಕಂಡ ತಾಯಿ ಹಂದಿ, ಮತ್ತು ಆಕೆಯ ಮರಿಗಳು ಕೂಡಲೇ ಹಾವನ್ನು ಕುಕ್ಕುತ್ತಿದ್ದ ಮುಂಗುಸಿಯನ್ನ ಓಡಿಸುವ ಯತ್ನ ಮಾಡಿದೆ. ಈ ನಡುವೆ, ಕಾಳಗವನ್ನು ನೋಡುತ್ತಿದ್ದ ಕಾಗೆ ಬಳಗವೊಂದು ಮುಂಗುಸಿ ಹತ್ತಿರ ಬಾರದಂತೆ ಹಾವಿನ ಸುತ್ತ ಸರಪಳಿ ಸಹ ರಚಿಸಿ, ರಕ್ಷಿಸಿದ ಅಮೋಘ ದೃಶ್ಯ ಕಂಡುಬಂದಿದೆ.

ಅವುಗಳ ಧೈರ್ಯಕ್ಕೆ ಸೋತ ಮುಂಗುಸಿ ಕೊನೆಯಲ್ಲಿ ಅಲ್ಲಿಂದ ಕಾಲ್ಕಿತ್ತಿದೆ. ಈ ಬಲು ಅಪರೂಪದ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು ಪಂಚತಂತ್ರದ ಕಥೆಯಂತೆ ಎಲ್ಲಾ ಪ್ರಾಣಿ, ಪಕ್ಷಿಗಳು ಒಂದಾಗಿ ಬದುಕುಬೇಕು ಎಂಬ ಸಂದೇಶ ಸಾರುತ್ತದೆ.