‘ನಾರಾಯಣ ಅಚಾರ್ ನೂರಲ್ಲ, ಐನೂರು ಎಕರೆ ಆಸ್ತಿ ಸಂಪಾದನೆ ಮಾಡಿದ್ದಾರೆ’
ಕೊಡಗು: ತಲಕಾವೇರಿ ಬೆಟ್ಟ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ಅರ್ಚಕ ನಾರಾಯಣ ಆಚಾರ್ ಕುಟುಂಬದ ವಿರುದ್ಧ ವಕೀಲ ಮಾಚಯ್ಯ ಮಡಿಕೇರಿ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ತಲಕಾವೇರಿ ಬ್ರಹ್ಮಗಿರಿ ಬೆಟ್ಟದ ಅರ್ಚಕ ನಾರಾಯಣ ಆಚಾರ್ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪುತ್ತೂರಿನಿಂದ ಬಂದ ಅರ್ಚಕ ಕುಟುಂಬ ನೂರು ಎಕರೆ ಆಸ್ತಿ ಸಂಪಾದನೆ ಮಾಡಿದ್ದು ಹೇಗೆ? ಆಚಾರ್ ಕುಟುಂಬ ನೂರಲ್ಲ, ಐನೂರು ಎಕರೆ ಆಸ್ತಿ ಸಂಪಾದನೆ ಮಾಡಿದ್ದಾರೆ. ಆಚಾರ್ ಆಸ್ತಿ ಬಗ್ಗೆ ತನಿಖೆಗೆ ಆಗಲೇ ಬೇಕು […]

ಕೊಡಗು: ತಲಕಾವೇರಿ ಬೆಟ್ಟ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ಅರ್ಚಕ ನಾರಾಯಣ ಆಚಾರ್ ಕುಟುಂಬದ ವಿರುದ್ಧ ವಕೀಲ ಮಾಚಯ್ಯ ಮಡಿಕೇರಿ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ತಲಕಾವೇರಿ ಬ್ರಹ್ಮಗಿರಿ ಬೆಟ್ಟದ ಅರ್ಚಕ ನಾರಾಯಣ ಆಚಾರ್ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪುತ್ತೂರಿನಿಂದ ಬಂದ ಅರ್ಚಕ ಕುಟುಂಬ ನೂರು ಎಕರೆ ಆಸ್ತಿ ಸಂಪಾದನೆ ಮಾಡಿದ್ದು ಹೇಗೆ? ಆಚಾರ್ ಕುಟುಂಬ ನೂರಲ್ಲ, ಐನೂರು ಎಕರೆ ಆಸ್ತಿ ಸಂಪಾದನೆ ಮಾಡಿದ್ದಾರೆ. ಆಚಾರ್ ಆಸ್ತಿ ಬಗ್ಗೆ ತನಿಖೆಗೆ ಆಗಲೇ ಬೇಕು ಎಂದು ಮಾಚಯ್ಯ ಒತ್ತಾಯ ಮಾಡಿದ್ದಾರೆ. ಪುತ್ತೂರಿನಿಂದ ಬಂದ ಅರ್ಚಕರಿಗೆ ಇಷ್ಟೋಂದು ಆಸ್ತಿ ಹೇಗೆ ಬಂತು.
ಅಮ್ಮ ಕೊಡವ ಜನಾಂಗಕ್ಕೂ ಪೂಜೆ ಮಾಡಲು ಅವಕಾಶ ಕೊಡಿ ಪೂಜೆ ಮಾಡೋ ಇವ್ರಿಗೆ ಅಷ್ಟೋಂದು ಆಸ್ತಿ ಏಕೆ? ಮೊದಲು ಆಸ್ತಿ ಬಗ್ಗೆ ಸರ್ಕಾರ ತನಿಖೆ ಮಾಡಲಿ. ಆಸ್ತಿ ರಕ್ಷಣೆ ಮಾಡಲು ಪೂಜೆ ನಮಗೇ ಕೊಡಿ ಅಂತ ಅರ್ಚಕರು ಒತ್ತಾಯ ಮಾಡ್ತಿದ್ದಾರೆ. ಅಮ್ಮ ಕೊಡವ ಜನಾಂಗಕ್ಕೂ ಪೂಜೆ ಮಾಡಲು ಅವಕಾಶ ಕೊಡಿ ಎಂದು ಸುದ್ದಿಗೋಷ್ಠಿಯಲ್ಲಿ ವಕೀಲ ಮಾಚಯ್ಯ ಒತ್ತಾಯಿಸಿದ್ದಾರೆ.