ತಲೆಯಿಂದ ರಕ್ತ ಸೋರುತ್ತಿರೋ ಫೋಟೋನ ಸ್ನೇಹಿತರಿಗೆ ಕಳಿಸಿದ್ದ ಯುವತಿ ಅನುಮಾನಾಸ್ಪದ ಸಾವು
ಚಿಕ್ಕಮಗಳೂರು: ನಗರದಲ್ಲಿ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರೋ ಘಟನೆ ಕಲ್ಯಾಣನಗರದಲ್ಲಿ ನಡೆದಿದೆ. ಮೃತ ಯುವತಿಯನ್ನು 19 ವರ್ಷದ ಸಿಂಧೂ ಎಂದು ಗುರುತಿಸಲಾಗಿದೆ. ಸಿಂಧೂನ ಆಸ್ಪತ್ರೆಗೆ ಕರೆತಂದ ಆಕೆಯ ಪೋಷಕರು ಪೊಲೀಸರಿಗೆ ಯುವತಿ ನೇಣು ಹಾಕಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ಇದಕ್ಕೂ ಮುನ್ನ ಯುವತಿಯ ತಲೆಯ ಭಾಗಕ್ಕೆ ಬಲವಾದ ಪೆಟ್ಟುಬಿದ್ದಿತ್ತು ಎಂದು ಹೇಳಲಾಗಿದೆ. ಇದಲ್ಲದೆ, ಕೆಲ ಗಂಟೆಗಳ ಹಿಂದೆ ತಲೆಯಿಂದ ರಕ್ತ ಸೋರುತ್ತಿರುವ ಫೋಟೋವನ್ನು ಸಿಂಧೂ ತನ್ನ ಸ್ನೇಹಿತರಿಗೆ ಕಳುಹಿಸಿದ್ದಳಂತೆ. ಇದೀಗ, ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ […]
ಚಿಕ್ಕಮಗಳೂರು: ನಗರದಲ್ಲಿ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರೋ ಘಟನೆ ಕಲ್ಯಾಣನಗರದಲ್ಲಿ ನಡೆದಿದೆ. ಮೃತ ಯುವತಿಯನ್ನು 19 ವರ್ಷದ ಸಿಂಧೂ ಎಂದು ಗುರುತಿಸಲಾಗಿದೆ.
ಸಿಂಧೂನ ಆಸ್ಪತ್ರೆಗೆ ಕರೆತಂದ ಆಕೆಯ ಪೋಷಕರು ಪೊಲೀಸರಿಗೆ ಯುವತಿ ನೇಣು ಹಾಕಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ಇದಕ್ಕೂ ಮುನ್ನ ಯುವತಿಯ ತಲೆಯ ಭಾಗಕ್ಕೆ ಬಲವಾದ ಪೆಟ್ಟುಬಿದ್ದಿತ್ತು ಎಂದು ಹೇಳಲಾಗಿದೆ. ಇದಲ್ಲದೆ, ಕೆಲ ಗಂಟೆಗಳ ಹಿಂದೆ ತಲೆಯಿಂದ ರಕ್ತ ಸೋರುತ್ತಿರುವ ಫೋಟೋವನ್ನು ಸಿಂಧೂ ತನ್ನ ಸ್ನೇಹಿತರಿಗೆ ಕಳುಹಿಸಿದ್ದಳಂತೆ. ಇದೀಗ, ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.