
ಬೆಳಗಾವಿ: ಮದ್ಯದ ಅಮಲಿನಲ್ಲಿ ಬಸ್ ಚಲಾಯಿಸಿದ್ದ ಚಾಲಕನಿಗೆ ಥಳಿಸಿರುವ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ಗೋವಾ ಸರ್ಕಾರದ ಕದಂಬ ಬಸ್ ಅನ್ನು ಚಾಲಕ ಪಣಜಿಯಿಂದ ಬೆಳಗಾವಿಗೆ ಪಾನಮತ್ತನಾಗಿಯೇ ಚಾಲನೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಅಷ್ಟೇ ಅಲ್ಲದೆ, ಚಾಲಕ ಬೆಳಗಾವಿ ಮೂಲದ ವಕೀಲನ ಜೊತೆ ಸಹ ಕಿರಿಕ್ ಮಾಡಿಕೊಂಡಿದ್ದಾನೆ. ಗೋವಾದಿಂದ ಬಂದಿದ್ದ ಪಾರ್ಸಲ್ ಕೊಡಲ್ಲ ಎಂದು ಪಾನಮತ್ತನಾಗಿದ್ದ ಚಾಲಕ ಕಿರಿಕ್ ಮಾಡಿದ್ದನಂತೆ. ಇದರಿಂದ ಆಕ್ರೋಶಗೊಂಡ ವಕೀಲ ಸಹ ಚಾಲಕನಿಗೆ ಕಪಾಳಮೋಕ್ಷ ಮಾಡಿದ್ದು ಚೆನ್ನಾಗಿ ಬಾರಿಸಿದ್ದಾನೆ.