ಬೆಂಗಳೂರು: ಚಿನ್ನ ದರ ಇಂದು ಕೊಂಚ ಇಳಿಕೆಯತ್ತ ಸಾಗಿದ್ದು 22 ಕ್ಯಾರೆಟ್ ಚಿನ್ನ ದರ 10 ಗ್ರಾಂಗೆ 42,100 ರೂಪಾಯಿ ಆಗಿದೆ. ಹಾಗೂ 24 ಕ್ಯಾರೆಟ್ ಚಿನ್ನ ದರ 10ಗ್ರಾಂಗೆ 45,930 ರೂಪಾಯಿ ಆಗಿದೆ. ಜೊತೆಗೆ ಬೆಳ್ಳಿ ದರ ಕೂಡಾ ಇಳಿಕೆ ಕಂಡಿದ್ದು, 1ಕೆ.ಜಿ ಬೆಳ್ಳಿ ದರ ಇಂದು 67,600 ರೂಪಾಯಿ ಇದೆ. ಈ ವಾರದ ಮೊದಲ ದಿನ ಸೋಮವಾರ ಮತ್ತು ಮಂಗಳವಾರ ಚಿನ್ನ ಇಳಿಕೆಯತ್ತ ಸಾಗುತ್ತಿತ್ತು. ತದ ನಂತರ ದರದಲ್ಲಿ ಬದಲಾವಣೆಯಾಗಿ ನಿನ್ನೆ, ಚಿನ್ನ ಮತ್ತು ಬೆಳ್ಳಿ ದರ ಕೊಂಚ ಮೆಟ್ಟಿಲೇರಿತ್ತು. ಇದೀಗ ದರ ಮೆಟ್ಟಿಲಿನಿಂದ ಕೆಳಗಿಳಿದಿದೆ. ಅಂದರೆ, ದರ ಕೊಂಚವೇ ಇಳಿಕೆಯತ್ತ ಮುಖ ಮಾಡಿದೆ.
ಹಿಂದಿನ ವರ್ಷ ಆಗಸ್ಟ್ 7, 2020 ರಂದು 10 ಗ್ರಾಂ ಚಿನ್ನ ದರ 57,008 ರೂಪಾಯಿಗೆ ತಲುಪಿತ್ತು. ಇದೀಗ ಚಿನ್ನ ದರ ಕುಸಿದಿದ್ದು, 47 ಸಾವಿರದ ಆಸು ಪಾಸಿನಲ್ಲಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿನ ಕುಸಿತವು ಹೂಡಿಕೆದಾರರಿಗೆ ಗೊಂದಲವನ್ನು ಸೃಷ್ಟಿಸುತ್ತಿದೆ. ಅಮೂಲ್ಯವಾದ ಲೋಹಗಳಲ್ಲಿ ಹೂಡಿಕೆ ಮಾಡಬೇಕೇ? ತಮ್ಮಲ್ಲಿರುವದನ್ನು ಮಾರಾಟ ಮಾಡಬೇಕೇ ಅಥವಾ ಇನ್ನೂ ಸ್ವಲ್ಪ ದಿನಗಳ ಕಾಲ ಹಿಡಿದಿಟ್ಟುಕೊಳ್ಳಬೇಕೆ ಎಂಬ ಗೊಂದಲ ಸೃಷ್ಟಿಸಿದೆ. ಪ್ರಸ್ತುತ ಬೆಲೆಯಲ್ಲಿ ಚಿನ್ನದಲ್ಲಿ ಹೂಡಿಕೆ ಮಾಡುವುದು ಸುರಕ್ಷಿತವಾಗಿದೆ ಎಂದು ಕೆಲವರು ಯೋಚಿಸುತ್ತಿದ್ದಾರೆ.
ನಿನ್ನೆ ಮತ್ತು ಇಂದು 22 ಕ್ಯಾರೆಟ್ ಚಿನ್ನ ದರದ ಮಾಹಿತಿ
1ಗ್ರಾಂ ಚಿನ್ನ ದರ ನಿನ್ನೆ 4,305 ರೂಪಾಯಿಗೆ ಮಾರಾಟವಾಗಿದೆ. ಇಂದಿನ ದರದಲ್ಲಿ 95 ರೂಪಾಯಿಯಷ್ಟು ಇಳಿಕೆ ಕಂಡಿದ್ದು, ಇಂದಿನ ದರ 4,210 ರೂಪಾಯಿ ಆಗಿದೆ. 8 ಗ್ರಾಂ ಚಿನ್ನ ದರ ನಿನ್ನೆ 34,440 ರೂಪಾಯಿ ಇದ್ದು, ಇಂದಿನ ದರ 33,680 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 760 ರೂಪಾಯಿಯಷ್ಟು ಇಳಿಕೆ ಕಂಡಿದೆ. 10 ಗ್ರಾಂ ಚಿನ್ನ ದರ ನಿನ್ನೆ 43,050 ರೂಪಾಯಿ ಇದ್ದು, ದೈನಂದಿನ ದರ ಬದಲಾವಣೆಯಲ್ಲಿ 950 ರೂಪಾಯಿ ಇಳಿಕೆ ಕಂಡಿದೆ. ಇಂದಿನ ದರ 42,100 ರೂಪಾಯಿ ಆಗಿದೆ. ಹಾಗೆಯೇ 100 ಗ್ರಾಂ ಚಿನ್ನ ದರ ನಿನ್ನೆ 4,30,500 ರೂಪಾಯಿಯಾಗಿದ್ದು ಇಂದಿನ ದರ 4,21,000 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 9,500 ರೂಪಾಯಿಯಷ್ಟು ಇಳಿಕೆ ಕಂಡಿದೆ.
24 ಕ್ಯಾರೆಟ್ ಚಿನ್ನ ದರದ ಸಂಪೂರ್ಣ ಮಾಹಿತಿ
1ಗ್ರಾಂ ಚಿನ್ನ ದರ ನಿನ್ನೆ 4,697 ರೂಪಾಯಿಗೆ ಮಾರಾಟವಾಗಿದೆ. ಇಂದಿನ ದರ 4,593 ರೂಪಾಯಿ ಇದೆ. 8 ಗ್ರಾಂ ಚಿನ್ನ ದರ ನಿನ್ನೆ 37,576 ರೂಪಾಯಿ ಇದ್ದು ಇಂದಿನ ದರ 36,744 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ 832 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. 10 ಗ್ರಾಂ ಚಿನ್ನ ದರ ನಿನ್ನೆ 46,970 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 45,930 ರೂಪಾಯಿಯಾಗಿದೆ. ಹಾಗೂ 100 ಗ್ರಾಂ ಚಿನ್ನ ದರ ನಿನ್ನೆ 4,69,700 ರೂಪಾಯಿ ಇದ್ದು, ಇಂದಿನ ದರ 4,59,300 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 10,400 ರೂಪಾಯಿ ಇಳಿಕೆ ಕಂಡಿದೆ.
ನಿನ್ನೆ ಮತ್ತು ಇಂದಿನ ದರ ಬದಲಾವಣೆಯ ಬೆಳ್ಳಿ ದರದ ಮಾಹಿತಿ
1 ಗ್ರಾಂ ಬೆಳ್ಳಿ ದರ ನಿನ್ನೆ 70.10 ರೂಪಾಯಿಗೆ ಮಾರಾಟವಾಗಿತ್ತು. ಇದೀಗ 67.60 ರೂಪಾಯಿ ಆಗಿದ್ದು, ದೈನಂದಿನ ದರ ಬದಲಾವಣೆಯಲ್ಲಿ 2 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. 8 ಗ್ರಾಂ ಬೆಳ್ಳಿ ದರ ನಿನ್ನೆ 560.80 ರೂಪಾಯಿಗೆ ಮಾರಾಟವಾಗಿದ್ದು ಇಂದಿನ ಬೆಲೆ 540.80 ರೂಪಾಯಿ ಆಗಿದೆ. ದರ ಬದಲಾವಣೆಯಲ್ಲಿ 20 ರೂಪಾಯಿಯಷ್ಟು ಇಳಿಕೆ ಕಂಡಿದೆ. 10 ಗ್ರಾಂ ಬೆಳ್ಳಿ ದರ ನಿನ್ನೆ 701 ರೂಪಾಯಿ ಇದ್ದು, ಇಂದಿನ ದರ 676 ರೂಪಾಯಿ ಆಗಿದೆ. ದರ ಬದಲಾವಣೆಯಲ್ಲಿ 25 ರೂಪಾಯಿ ಇಳಿಕೆ ಕಂಡಿದೆ. 100 ಗ್ರಾಂ ಬೆಳ್ಳಿ ದರ ನಿನ್ನೆ 7,010 ರೂಪಾಯಿ ಆಗಿದ್ದು, ಇಂದಿನ ದರ 6,760 ರೂಪಾಯಿ ಆಗಿದೆ. ದರ ಬದಲಾವಣೆಯಲ್ಲಿ 250 ರೂಪಾಯಿ ಇಳಿಕೆ ಕಂಡು ಬಂದಿದೆ. ಹಾಗೆಯೇ 1 ಕೆ.ಜಿ ಬೆಳ್ಳಿ ದರ ನಿನ್ನೆ 70,100 ರೂಪಾಯಿಗೆ ಮಾರಾಟವಾಗಿತ್ತು, ಇಂದಿನ ದರದಲ್ಲಿ 2,500 ರೂಪಾಯಿಯಷ್ಟು ಮಾರಾಟವಾಗಿದ್ದು 67,600 ರೂಪಾಯಿ ಆಗಿದೆ.
ಇದನ್ನೂ ಓದಿ: Gold Silver Price: ಗ್ರಾಹಕರೇ ಇಲ್ಲೊಮ್ಮೆ ಗಮನಿಸಿ.. ಏರಿಕೆಯತ್ತ ಹೆಜ್ಜೆ ಇಟ್ಟ ಚಿನ್ನ ದರ..
ಇದನ್ನೂ ಓದಿ: Gold Silver Price: ಮಾರ್ಚ್ ತಿಂಗಳ ಆರಂಭ.. ಇಳಿಕೆಯತ್ತ ಸಾಗುತ್ತಿರುವ ಚಿನ್ನದ ದರ!
Published On - 8:43 am, Wed, 3 March 21