Gold Silver Price: ಗ್ರಾಹಕರೇ ಇಲ್ಲೊಮ್ಮೆ ಗಮನಿಸಿ.. ಏರಿಕೆಯತ್ತ ಹೆಜ್ಜೆ ಇಟ್ಟ ಚಿನ್ನ ದರ..

Gold Silver Rate in Bengaluru: ನಿನ್ನೆಗಿಂತ ಇಂದಿನ ದರ ಗಮನಿಸಿದಾಗ ಚಿನ್ನ ಕೊಂಚ ಏರಿಕೆಯತ್ತ ಜಿಗಿದಿದೆ. ಬೆಳ್ಳಿ ದರ ಕೂಡಾ ಬದಲಾವಣೆ ಕಂಡಿದ್ದು, ನಿನ್ನೆಗಿಂತ ದರದಲ್ಲಿ ಹೆಚ್ಚಳ ಕಂಡು ಬಂದಿದೆ.

Gold Silver Price: ಗ್ರಾಹಕರೇ ಇಲ್ಲೊಮ್ಮೆ ಗಮನಿಸಿ.. ಏರಿಕೆಯತ್ತ ಹೆಜ್ಜೆ ಇಟ್ಟ ಚಿನ್ನ ದರ..
ಸಾಂದರ್ಭಿಕ ಚಿತ್ರ
Follow us
shruti hegde
| Updated By: Digi Tech Desk

Updated on:Mar 02, 2021 | 9:10 AM

ಬೆಂಗಳೂರು: ಚಿನ್ನ ದರ ಹಾವು ಎಣಿ ಆಟ ಆಡುತ್ತಿರುವುದು ಸರ್ವೇಸಾಮಾನ್ಯ. ಕಳೆದ 2 ದಿನದಿಂದ ಇಳಿಕೆಯತ್ತ ಸಾಗುತ್ತಿದ್ದ ಚಿನ್ನ ಇಂದು ಕೊಂಚ ಏರಿಕೆಯತ್ತ ಮುಖ ಮಾಡಿದೆ. 22 ಕ್ಯಾರೆಟ್​ 10 ಗ್ರಾಂ ಚಿನ್ನ ದರ ಇಂದು 43,050 ರೂಪಾಯಿ ಅಗಿದೆ. ಹಾಗೂ 24 ಕ್ಯಾರೆಟ್​ 10 ಗ್ರಾಂ ಚಿನ್ನ ದರ 46,970 ರೂಪಾಯಿ ಆಗಿದೆ. ಹಾಗೆಯೇ ಬೆಳ್ಳಿ ದರ ಕೂಡಾ ಏರಿಕೆಯತ್ತ ಸಾಗಿದ್ದು ಇಂದಿನ ದರ 1ಕೆ.ಜಿ ಬೆಳ್ಳಿಗೆ 70,100 ರೂಪಾಯಿ ಇದೆ. ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಮೌಲ್ಯದಲ್ಲಿ ಏರಿಳಿತ ಕಾಣುತ್ತಿದೆ. ಇದಕ್ಕೆ ಕಾರಣವೇನೆಂದರೆ, ಡಾಲರ್ ಮೌಲ್ಯದಲ್ಲಿ ಆಗುತ್ತಿರುವ ಏರಿಳಿತ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗುವ ಬೆಲೆಯ ಏರಿಳಿತಗಳು, ಭಾರತದ ಚಿನ್ನದ ಮಾರುಕಟ್ಟೆ ಮೇಲೆ ಪ್ರಭಾವ ಬೀರುತ್ತದೆ.

ಕಳೆದ ಎರಡು ದಿನಗಳಿಂದ ಇಳಿಕೆಯತ್ತ ಮುಖ ಮಾಡಿದ್ದ ಚಿನ್ನ ದರ ಇದೀಗ ಕೊಂಚ ಏರಿಕೆ ಕಂಡಿದೆ. ಆದರೂ, ಕಳೆದ ವರ್ಷಕ್ಕೆ ಹೋಲಿಸಿದರೆ ಚಿನ್ನ ಗಗನ ಮುಟ್ಟಿಲ್ಲ ಎಂಬುದು ಗ್ರಾಹಕರಿಗೆ ನಿರಳಾದ ವಿಚಾರ. ಪೆಟ್ರೋಲ್, ಡೀಸೆಲ್ ಸೇರಿದಂತೆ ಸಿಲಿಂಡರ್​ (ಗ್ಯಾಸ್) ದರ ಕೂಡಾ ಒಂದೇ ಸಮನೇ ಏರಿಕೆಯತ್ತಲೇ ಸಾಗುತ್ತಿದೆ. ಇದರಿಂದಾಗ ಜನರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಜೊತೆಯಲ್ಲಿಯೇ ಚಿನ್ನ ದರವೂ ಗಗನಕ್ಕೇರಿದ್ದರೆ ಗ್ರಾಹಕರಿಗೆ ತುಂಬಾ ಕಷ್ಟವಾಗಿ ಬಿಡುತ್ತಿತ್ತು. ಚಿನ್ನ ದರ ಹಾವು ಏಣಿ ಆಟ ಆಡುತ್ತಿದ್ದರೂ ಕೂಡಾ ದರ ಅತಿರೇಕದ ಏರಿಕೆ ಕಂಡಿಲ್ಲ ಎಂಬುದು ಸಂತೋಷ ತರುವ ವಿಚಾರ.

22 ಕ್ಯಾರೆಟ್ ಚಿನ್ನ ದರ 1ಗ್ರಾಂ ಚಿನ್ನದರ ನಿನ್ನೆ 4,269 ರೂಪಾಯಿಗೆ ಮಾರಾಟವಾಗಿತ್ತು. ಆದರೆ 4,305 ರೂಪಾಯಿಗೆ ಏರಿದೆ. 8 ಗ್ರಾಂ ಚಿನ್ನ ದರ ನಿನ್ನೆ 34,152 ರೂಪಾಯಿ ಇದ್ದು, ಇಂದಿನ ದರ 34,440 ರೂಪಾಯಿ ಏರಿಕೆ ಕಂಡಿದೆ. ದೈನಂದಿನ ದರ ಬದಲಾವಣೆಯಲ್ಲಿ 288 ರೂಪಾಯಿಯಷ್ಟು ಏರಿಕೆ ಕಂಡಿದೆ. 10 ಗ್ರಾಂ ಚಿನ್ನ ದರ ನಿನ್ನೆ 42,690 ರೂಪಾಯಿ ಇದ್ದು, ಇಂದು ದರ 43,050 ರೂಪಾಯಿಗೆ ಏರಿಕೆಯಾಗಿದೆ. ಸುಮಾರು 360 ರೂಪಾಯಿಯಷ್ಟು ಏರಿಕೆ ಕಂಡಿದೆ. 100 ಗ್ರಾಂ ಚಿನ್ನ ನಿನ್ನೆ 4,26,900 ರೂಪಾಯಿಗೆ ಮಾರಾಟವಾಗಿತ್ತು. ಇದೀಗ ಚಿನ್ನ ದರ 4,30,500 ರೂಪಅಯಿ ಆಗಿದೆ. ಅಂದರೆ ದರ ಬದಲಾವಣೆಯಲ್ಲಿ 3,600 ರೂಪಾಯಿ ಏರಿಕೆ ಕಂಡಿದೆ.

24 ಕ್ಯಾರೆಟ್​ ಚಿನ್ನ ದರ 1 ಗ್ರಾಂ ಚಿನ್ನ ದರ ನಿನ್ನೆ 4,657 ರೂಪಾಯಿಗೆ ಮಾರಾಟವಾಗಿದೆ. ಇಂದಿನ ದರ 4,697 ರೂಪಾಯಿಗೆ ಏರಿಕೆಯಾಗಿದ್ದು, ದರ ಬದಲಾವಣೆಯಲ್ಲಿ 40 ರೂಪಾಯಿ ಏರಿಕೆ ಕಂಡಿದೆ. 8 ಗ್ರಾಂ ಚಿನ್ನ ನಿನ್ನೆ 37,256 ರೂಪಾಯಿ ಇದ್ದು, ಇಂದಿನ ದರ 37,576 ರೂಪಾಯಿ ಆಗಿದೆ. ಅಂದರೆ ದೈನಂದಿನ ದರ ಬದಲಾವಣೆಯಲ್ಲಿ 320 ರೂಪಾಯಿ ಏರಿಕೆ ಕಂಡಿದೆ. 10 ಗ್ರಾಂ ಚಿನ್ನ ದರ ನಿನ್ನೆ 46,570 ರೂಪಾಯಿಗೆ ಮಾರಾಟವಾಗಿದ್ದು, ಇಂದಿನ ದರ 46,970 ರೂಪಾಯಿ ಆಗಿದೆ. ಹಾಗೂ 100 ಗ್ರಾಂ ಚಿನ್ನ ದರ ನಿನ್ನೆ 4,65,700 ರೂಪಾಯಿ ಇದ್ದು, ಇಂದಿನ ದರ 4,69,700 ರೂಪಾಯಿಗೆ ಏರಿಕೆ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 4,000 ರೂಪಾಯಿಯಷ್ಟು ಏರಿಕೆ ಕಂಡಿದೆ.

ಬೆಳ್ಳಿ ದರ: ಬೆಳ್ಳಿ ದರವೂ ಕೂಡಾ ನಿನ್ನೆಗಿಂತ ಕೊಂಚ ಏರಿಕೆಯತ್ತ ಸಾಗಿದೆ. ನಿನ್ನೆ 1 ಗ್ರಾಂ ಬೆಳ್ಳಿ 69.30 ರೂಪಾಯಿ ಇದ್ದು, ಇಂದು 70.10 ರೂಪಾಯಿಗೆ ಏರಿಕೆಯಾಗಿದೆ. 8 ಗ್ರಾಂ ಬೆಳ್ಳಿ ನಿನ್ನೆ 554.40 ರೂಪಾಯಿತ್ತು, ಇಂದಿನ ದರ 560 ರೂಪಾಯಿಗೆ ಏರಿಕೆಯಾಗಿದೆ. 10 ಗ್ರಾಂ ಬೆಳ್ಳಿ ದರ ನಿನ್ನೆ 693 ರೂಪಾಯಿ ಇದ್ದು, ಇಂದಿನ ದರ 701 ರೂಪಾಯಿ ಆಗಿದೆ.100 ಗ್ರಾಂ ಬೆಳ್ಳಿ ದರ ನಿನ್ನೆ 6,930 ರೂಪಾಯಿಗೆ ಮಾರಾಟವಾಗಿದ್ದು, ಇಂದಿನ ದರ 7,010 ರೂಪಾಯಿಗೆ ಏರಿಕೆಯಾಗಿದೆ. ಹಾಗೆಯೇ 1 ಕೆ.ಜಿ ಬೆಳ್ಳಿ ದರ ನಿನ್ನೆ 69,300 ರೂಪಾಯಿ ಇದ್ದು, ಇಂದಿನ ದರ 70,100ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿGold Silver Price: ಮಾರ್ಚ್​ ತಿಂಗಳ ಆರಂಭ.. ಇಳಿಕೆಯತ್ತ ಸಾಗುತ್ತಿರುವ ಚಿನ್ನದ ದರ!

ಇದನ್ನೂ ಓದಿ: Gold/Silver Prices: ಚಿನ್ನ ದರ ಕೊಂಚ ಏರಿಕೆ; ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ದರ?

Published On - 8:52 am, Tue, 2 March 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್