Gold Silver Price: ಮಾರ್ಚ್​ ತಿಂಗಳ ಆರಂಭ.. ಇಳಿಕೆಯತ್ತ ಸಾಗುತ್ತಿರುವ ಚಿನ್ನದ ದರ!

Gold Silver Rate: ಚಿನ್ನ ದರ ಇನ್ನಷ್ಟು ಇಳಿಕೆಯತ್ತ ಸಾಗಿದೆ. ಖರೀದಿದಾರರಿಗೆ ಬಲು ಸಂತೋಷವನ್ನುಂಟು ಮಾಡಿದೆ. ಹಾಗಿದ್ದಲ್ಲಿ ಎಷ್ಟಿರಬಹುದು ಚಿನ್ನ, ಬೆಳ್ಳಿ ದರ..

Gold Silver Price: ಮಾರ್ಚ್​ ತಿಂಗಳ ಆರಂಭ.. ಇಳಿಕೆಯತ್ತ ಸಾಗುತ್ತಿರುವ ಚಿನ್ನದ ದರ!
ಸಾಂರ್ಭಿಕ ಚಿತ್ರ
Follow us
shruti hegde
| Updated By: ಆಯೇಷಾ ಬಾನು

Updated on: Mar 01, 2021 | 8:41 AM

ಬೆಂಗಳೂರು: ಚಿನ್ನದರ ಇಳಿಕೆಯತ್ತ ಸಾಗುತ್ತಿದೆ. 22 ಕ್ಯಾರೆಟ್​ 10 ಗ್ರಾಂ ಚಿನ್ನ ನಿನ್ನೆ 42,700 ರೂಪಾಯಿಗೆ ಮಾರಾಟವಾಗಿತ್ತು. ಆದರೆ ಇಂದು ದರ 42,690 ರೂಪಾಯಿಗೆ ಇಳಿದಿದೆ. ಹಾಗೂ 24 ಕ್ಯಾರೆಟ್​ 10 ಗ್ರಾಂ ಚಿನ್ನ ನಿನ್ನೆ 46,580 ರೂಪಾಯಿ ಇತ್ತು. ಇಂದು 46,570 ರೂಪಾಯಿಗೆ ಇಳಿದಿದೆ. ಅಂದರೆ ದೈನಂದಿನ ದರ ಬದಲಾವಣೆಯಲ್ಲಿ 10 ರೂಪಾಯಿಯಷ್ಟು ಇಳಿಕೆಯತ್ತ ಸಾಗುತ್ತಿದೆ. ಬೆಳ್ಳಿ ದರದಲ್ಲಿ ಕೊಂಚ ಇಳಿಕೆ ಕಂಡಿದೆ. 1 ಕೆ.ಜಿ ಬೆಳ್ಳಿ ದರ ನಿನ್ನೆ 69,600 ರೂಪಾಯಿಗೆ ಮಾರಾಟವಾಗಿದ್ದು, ಇಂದು 69,300 ರೂಪಾಯಿಗೆ ಇಳಿದಿದೆ.

ಕೊರೊನಾ ಸಂಕಷ್ಟ ಮುಗಿದು ನಿಧಾನವಾಗಿ ಮನೆಯಲ್ಲಿ ವಿಶೇಷ ಪೂಜೆಗಳು ಪ್ರಾರಂಭಗೊಳ್ಳುತ್ತಿದೆ. ಪೂಜೆ ಅಂದತಕ್ಷಣ ಅತಿಥಿಗಳನ್ನು ಮನೆಗೆ ಕರೆದು ಸಂಭ್ರಮದಿಂದ ಆಚರಿಸುತ್ತೇವೆ. ಹೀಗಿದ್ದಾಗ, ಅಂದ-ಚಂದದ ಸೀರೆ ಉಟ್ಟು, ಹೊಸ ಡಿಸೈನ್​ ಚಿನ್ನ ತೊಟ್ಟು ಅಲಂಕಾರ ಮಾಡಿಕೊಳ್ಳುವುದು ಮಾಮೂಲಿ. ಈ ಉದ್ದೇಶಕ್ಕಾಗಿ ಚಿನ್ನ ಕೊಂಡುಕೊಳ್ಳಲು ಹೊರಟಿದ್ದರೆ. ಆಭರಣ ಚಿನ್ನಕ್ಕೆ ಎಷ್ಟು ಬೆಲೆ ಇದೆ ಎಂಬುದನ್ನು ಒಮ್ಮೆ ತಿಳಿದುಕೊಳ್ಳಿ. ಹಾಗೂ ಈ ವರ್ಷದ ಹೊಸ ತಿಂಗಳ(ಮಾರ್ಚ್) ಮೊದಲ ದಿನಕ್ಕೆ ಕಾಲಿಟ್ಟಿದ್ದೇವೆ.ತಿಂಗಳ ಆರಂಭಕ್ಕೆ ಶುಭಾಶಯಗಳು.. ಹೊಸ ತಿಂಗಳ ಹೊಸ ದಿನದ ಆರಂಭ ಚಿನ್ನ ಕೊಳ್ಳುವುದರೊಂದಿಗೆ ಆರಂಭಿಸಬೇಕು ಎಂದಿದ್ದರೆ ಇಲ್ಲಿದೆ ಚಿನ್ನ ದರದ ಮಾಹಿತಿ.

22 ಕ್ಯಾರೆಟ್ ಚಿನ್ನ ದರ: 22 ಕ್ಯಾರೆಟ್​ 1ಗ್ರಾಂ ಚಿನ್ನ ನಿನ್ನೆ 4,270 ರೂಪಾಯಿಗೆ ಮಾರಾಟಾಗಿತ್ತು. ಇಂದು 4,269 ರೂಪಾಯಿ ಆಗಿದೆ. 8 ಗ್ರಾಂ ಚಿನ್ನ ನಿನ್ನೆ 34,160 ರೂಪಾಯಿಗೆ ಮಾರಾಟವಾಗಿದ್ದು, ಇಂದು 34,152 ರೂಪಾಯಿಗೆ ಕುಸಿದಿದೆ. 10 ಗ್ರಾಂ ಚಿನ್ನ ನಿನ್ನೆ 42,700 ರೂಪಾಯಿ ಇದ್ದು, ಇಂದಿನ ದರ 42,690 ರೂಪಾಯಿ ಆಗಿದೆ. ಹಾಗೆಯೇ 100 ಗ್ರಾಂ ಚಿನ್ನ ನಿನ್ನೆ 4,27,000 ರೂಪಾಯಿಗೆ ಮಾರಾಟವಾಗಿದ್ದು ಇಂದಿನ ದರ 4,26,900 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 100 ರೂಪಾಯಿಯಷ್ಟು ಕುಸಿದಿದೆ.

24 ಕ್ಯಾರೆಟ್​ ಚಿನ್ನ: 24 ಕ್ಯಾರೆಟ್ 1 ಗ್ರಾಂ ಚಿನ್ನ ನಿನ್ನೆ 4,658 ರೂಪಾಯಿ ಇದ್ದು, ಇಂದಿನ ದರ 4,657 ರೂಪಾಯಿ ಆಗಿದೆ. 8 ಗ್ರಾಂ ಚಿನ್ನ ದರ ನಿನ್ನೆ 37,264 ರೂಪಾಯಿ ಇದ್ದು, ಇಂದಿನ ದರ 37,256 ರೂಪಾಯಿ ಇದೆ. 10 ಗ್ರಾಂ ಚಿನ್ನ ದರ ನಿನ್ನೆ 46,580 ರೂಪಾಯಿ ಇದ್ದು, ಇಂದಿನ ದರ 46,570 ರೂಪಾಯಿಗೆ ಇಳಿದಿದೆ. ಹಾಗೂ 100 ಗ್ರಾಂ ಚಿನ್ನ ದರ ನಿನ್ನೆ 4,65,800 ರೂಪಾಯಿ ಇದ್ದು, ಇಂದಿನ ದರ 4,65,700 ರೂಪಾಯಿಗೆ ಕುಸಿದಿದೆ.

ಬೆಳ್ಳಿ ದರ:

1ಗ್ರಾಂ ಬೆಳ್ಳಿ ದರ ನಿನ್ನೆ 69.60 ರೂಪಾಯಿಗೆ ಮಾರಾಟವಾಗಿದೆ. ಇಂದು ಕೊಂಚ ಇಳಿಕೆಯತ್ತ ಸಾಗಿದ್ದು, 69.30 ರೂಪಾಯಿಯಾಗಿದೆ. 8 ಗ್ರಾಂ ಬೆಳ್ಳಿ ನಿನ್ನೆ 556.80 ರೂಪಾಯಿ ಇದ್ದು, ಇಂದು ದರ 554.40 ರೂಪಾಯಿಗೆ ಇಳಿದಿದೆ. 10 ಗ್ರಾಂ ಬೆಳ್ಳಿ ನಿನ್ನೆ 696 ರೂಪಾಯಿ ಇದ್ದು, ಇಂದಿನ ದರ 693 ರೂಪಾಯಿ ಇದೆ. 100 ಗ್ರಾ ಬೆಳ್ಳಿ ನಿನ್ನೆ 6,960 ರೂಪಾಯಿಗೆ ಮಾರಾಟವಾಗಿದೆ. ಇದೀಗ ದರ 6,930 ರೂಪಾಯಿಗೆ ಇಳಿಕೆಯಾಗಿದೆ. ಹಾಗೂ 1ಕೆ.ಜಿ ಬೆಳ್ಳಿ ದರ ನಿನ್ನೆ 69,600 ರೂಪಾಯಿ ಇದ್ದು, ಇಂದು ದರ 69,300 ರೂಪಾಯಿ ಆಗಿದೆ. ಅಂದರೆ, ದರ ಬದಲಾವಣೆಯಲ್ಲಿ 300 ರೂಪಾಯಿಯಷ್ಟು ಇಳಿಕೆ ಕಂಡಿದೆ.

ಇದನ್ನೂ ಓದಿ: SBI Gold Loan: ಹಣದ ತುರ್ತು ಅಗತ್ಯಕ್ಕೆ ಚಿನ್ನದ ಮೇಲೆ ಸಾಲ ಏಕೆ ಬೆಸ್ಟ್?

ಇದನ್ನೂ ಓದಿ: Gold Silver Price: ಚಿನ್ನ ದರ ಮತ್ತಷ್ಟು ಇಳಿಕೆಯತ್ತ.. 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 42,700 ರೂಪಾಯಿ !