Gold Silver Price: ಚಿನ್ನ ದರ ಮತ್ತಷ್ಟು ಇಳಿಕೆಯತ್ತ.. 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 42,700 ರೂಪಾಯಿ !

Gold Silver Rate: ಚಿನ್ನ ದರ ಇನ್ನಷ್ಟು ಇಳಿಕೆಯತ್ತ ಸಾಗಿದೆ. ಖರೀದಿದಾರರಿಗೆ ಬಲು ಸಂತೋಷವನ್ನುಂಟು ಮಾಡಿದೆ. ಹಾಗಿದ್ದಲ್ಲಿ ಎಷ್ಟಿರ ಬಹುದು ಚಿನ್ನ, ಬೆಳ್ಳಿ ದರ..

Gold Silver Price: ಚಿನ್ನ ದರ ಮತ್ತಷ್ಟು ಇಳಿಕೆಯತ್ತ.. 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 42,700 ರೂಪಾಯಿ !
ಸಾಂರ್ಭಿಕ ಚಿತ್ರ
Follow us
shruti hegde
| Updated By: ಆಯೇಷಾ ಬಾನು

Updated on: Feb 28, 2021 | 8:37 AM

ಬೆಂಗಳೂರು: ಇಂದು 22 ಕ್ಯಾರೆಟ್ ಚಿನ್ನ ದರ 10 ಗ್ರಾಂಗೆ 42,700 ರೂಪಾಯಿ ಇದೆ. ನಿನ್ನೆಗಿಂತ ಇಂದು 550 ರೂಪಾಯಿ ಇಳಿಕೆ ಕಂಡಿದೆ. 24 ಕ್ಯಾರೆಟ್​ 10ಗ್ರಾಂ ಚಿನ್ನ ದರ ನಿನ್ನೆ 47,180ಕ್ಕೆ ಮಾರಾಟವಾಗಿದ್ದು, ಇದೀಗ ಚಿನ್ನ ದರ 46,580ಕ್ಕೆ ಇಳಿದಿದೆ. ದೈನಂದಿನ ದರ ಬದಲಾವಣೆಯಲ್ಲಿ 600 ರೂಪಾಯಿಯಷ್ಟು ಇಳಿಕೆ ಕಂಡಿದೆ. ಹಾಗೂ ಬೆಳ್ಳಿ ದರವೂ ಇಳಿಕೆಯತ್ತ ಮುಖ ಮಾಡಿದ್ದು 1 ಕೆ.ಜಿ ಬೆಳ್ಳಿ ದರ ನಿನ್ನೆ 70,600 ರೂಪಾಯಿಗೆ ಮಾರಾಟವಾಗಿದೆ. ಇಂದು 69,600 ರೂಪಾಯಿಗೆ ಇಳಿದಿದೆ. ಅಂದರೆ ದೈನಂದಿನ ದರ ಬದಲಾವಣೆಯಲ್ಲಿ 1,000 ರೂಪಾಯಿಯಷ್ಟು ಇಳಿಕೆ ಕಂಡಿದೆ. ಹಾವು ಏಣಿ ಆಟವಾಡುತ್ತ ಗ್ರಾಹಕರಿಗೆ ಗೊಂದಲ ಉಂಟು ಮಾಡಿದ್ದ ಚಿನ್ನ,ಬೆಳ್ಳಿ ದರ ಇದೀಗ ಇಳಿಕೆ ಕಂಡಿರುವುದು ಗ್ರಾಹಕರಿಗೆ ಖುಷಿ ತಂದಿದೆ.

ಚಿನ್ನ ದರ ಮತ್ತುಷ್ಟು ಇಳಿಕೆಯತ್ತ ಮುಖ ಮಾಡಿರುವುದು ಗ್ರಾಹಕರಿಗೆ ಖುಷಿ ತಂದಿದೆ. ಏರಿಳಿತವಾಡುತ್ತಿದ್ದ ಚಿನ್ನದ ದರ ಇದೀಗ ಇಳಿಕೆಯತ್ತ ಮುಖ ಮಾಡಿರುವುದರಿಂದ ಚಿನ್ನ, ಬೆಳ್ಳಿ ಖರೀದಿಗೆ ಉತ್ತಮ ಸಮಯ ಎಂದು ಹೇಳಬಹುದು. ಕೊರೊನಾ ಸಮಯದಲ್ಲಿ ಏರಿಕೆ ಕಂಡಿದ್ದ ಚಿನ್ನ ದರ ಇದೀಗ ಇಳಿಕೆಯತ್ತ ಸಾಗಿದೆ. ಸತತವಾಗಿ ಎರಡು ದಿನಗಳ ಕಾಲ ಚಿನ್ನ ದರ ಕುಸಿಯುತ್ತಿದೆ. ಚಿನ್ನ ದರ ದಿನೇ ದಿನೇ ವ್ಯತ್ಯಾಸವಾಗುತ್ತಿರುವುದನ್ನು ನೋಡುತ್ತಿದ್ದ ಜನರಿಗೆ ಚಿನ್ನ ಖರೀದಿಸ ಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಗೊಂದಲ ಸೃಷ್ಟಿಯಾಗಿತ್ತು. ಆದರೆ ಎರಡು ದಿನಗಳಿಂದ ಇಳಿಕೆ ಕಂಡಿರುವ ಗ್ರಾಹಕರಿಗೆ ಚಿನ್ನಕೊಳ್ಳಲು ಇದು ಒಳ್ಳೆಯ ಸಮಯ.

22 ಕ್ಯಾರೆಟ್​ ಚಿನ್ನ: 1 ಗ್ರಾಂ ಚಿನ್ನ ದರ ನಿನ್ನೆ 4,325 ಇದ್ದು, ಇದೀಗ ದರ 4,270ಕ್ಕೆ ಇಳಿದಿದೆ. ಅಂದರೆ ದೈನಂದಿನ ಬದಲಾವಣೆಯಲ್ಲಿ 55 ರೂಪಾಯಿ ಇಳಿಕೆ ಕಂಡಿದೆ. 8ಗ್ರಾಂ ಚಿನ್ನ ನಿನ್ನೆ 34,600 ಇದ್ದು, ಇಂದಿನ ದರ 34,160 ರೂಪಾಯಿ ಇದೆ. ದರ ಬದಲಾವಣೆಯಲ್ಲಿ 440 ರೂಪಾಯಿ ಇಳಿಕೆ ಕಂಡಿದೆ. 10 ಗ್ರಾಂ ಚಿನ್ನ ದರ ನಿನ್ನೆ 43,250 ಇದ್ದು, ಇಂದಿನ ದರ 42,700 ಇದೆ. ದರ ಬದಲಾವಣೆಯಲ್ಲಿ 550 ರೂಪಾಯಿ ಬದಲಾವಣೆ ಆಗಿದೆ. ಹಾಗೂ 100 ಗ್ರಾಂ ಚಿನ್ನ ದರ ನಿನ್ನೆ 4,,32,500 ರೂಪಾಯಿ ಇದ್ದು ಇಂದು 4,27,000ಕ್ಕೆ ಇಳಿದಿದೆ. ದೈನಂದಿನ ದರ ಬದಲಾವಣೆಯಲ್ಲಿ 5,500 ರೂಪಾಯಿ ಇಳಿಕೆ ಕಂಡಿದೆ.

24 ಕ್ಯಾರೆಟ್​ ಚಿನ್ನ: 1 ಗ್ರಾಂ ಚಿನ್ನ ದರ ನಿನ್ನೆ 4,718 ಇದ್ದು, ಇದೀಗ ದರ 4,658ಕ್ಕೆ ಇಳಿದಿದೆ. ಅಂದರೆ ದೈನಂದಿನ ಬದಲಾವಣೆಯಲ್ಲಿ 60 ರೂಪಾಯಿ ಇಳಿಕೆ ಕಂಡಿದೆ. 8ಗ್ರಾಂ ಚಿನ್ನ ನಿನ್ನೆ 37,744 ಇದ್ದು, ಇಂದಿನ ದರ 37,264 ರೂಪಾಯಿ ಇದೆ. ದರ ಬದಲಾವಣೆಯಲ್ಲಿ 480 ರೂಪಾಯಿ ಇಳಿಕೆ ಕಂಡಿದೆ. 10 ಗ್ರಾಂ ಚಿನ್ನ ದರ ನಿನ್ನೆ 47,180 ಇದ್ದು, ಇಂದಿನ ದರ 46,580 ಇದೆ. ದರ ಬದಲಾವಣೆಯಲ್ಲಿ 600 ರೂಪಾಯಿ ಬದಲಾವಣೆ ಆಗಿದೆ. ಹಾಗೂ 100 ಗ್ರಾಂ ಚಿನ್ನ ದರ ನಿನ್ನೆ 4,71,800 ರೂಪಾಯಿ ಇದ್ದು ಇಂದು 4,65,800ಕ್ಕೆ ಇಳಿದಿದೆ. ದೈನಂದಿನ ದರ ಬದಲಾವಣೆಯಲ್ಲಿ 6,000 ರೂಪಾಯಿ ಇಳಿಕೆ ಕಂಡಿದೆ.

ಬೆಳ್ಳಿದರ : ಇಂದು ಬೆಂಗಳೂರಿನಲ್ಲಿ ಬೆಳ್ಳಿ ದರವೂ ಇಳಿಕೆಯತ್ತ ಸಾಗಿದ್ದು, 1 ಗ್ರಾಂ bಬೆಳ್ಳಿ ದರ ನಿನ್ನೆ 70.60 ರೂಪಾಯಿ ಇದ್ದ ದರ ಇಂದು, 69.60 ರೂಪಾಯಿ ಆಗಿದೆ. ದರ ಬದಲಾವಣೆಯಲ್ಲಿ 1 ರೂಪಾಯಿಯಷ್ಟು ಇಳಿಕೆ ಕಂಡಿದೆ. 8 ಗ್ರಾಂ ಬೆಳ್ಳಿ ದರ ನಿನ್ನೆ 564.80 ರೂಪಾಯಿ ಇದ್ದು, ಇಂದು 556.80 ರೂಪಾಯಿಗೆ ಇಳಿದಿದೆ. ದರ ಬದಲಾವಣೆಯಲ್ಲಿ 8 ರೂಪಾಯಿಯಷ್ಟು ಇಳಿಕೆ ಕಂಡಿದೆ. 10 ಗ್ರಾಂ ಬೆಳ್ಳಿ ದರ ನಿನ್ನೆ 706 ಇದ್ದು, ಇಂದು 696 ರೂಪಾಯಿಗೆ ಇಳಿದಿದೆ. ದೈನಂದಿನ ದರ ಬದಲಾವಣೆಯಲ್ಲಿ 10 ರೂಪಾಯಿ ವ್ಯತ್ಯಾಸ ಕಂಡಿದೆ. 100 ಗ್ರಾಂ ಬೆಳ್ಳಿ ದರ ನಿನ್ನೆ 7,060 ರೂಪಾಯಿ ಇದ್ದು, ಇಂದು ದರ 6,960 ರೂಪಾಯಿ ಆಗಿದೆ. ದರದಲ್ಲಿ 100 ರೂಪಾಯಿ ಇಳಿಕೆ ಕಂಡಿದೆ. ಹಾಗೂ 1 ಕೆ.ಜಿ ಬೆಳ್ಳಿ ದರ 70,600 ರೂಪಾಯಿಗೆ ಮಾರಾಟವಾಗಿದ್ದು, ಇಂದು 69,600 ರೂಪಾಯಿಗೆ ಇಳಿದಿದೆ. ಅಂದರೆ, ದರ ಬದಲಾವಣೆಯಲ್ಲಿ 1,000 ರೂಪಾಯಿಯಷ್ಟು ಇಳಿಕೆ ಕಂಡಿದೆ.

ಇದನ್ನೂ ಓದಿ: Gold/Silver Prices: ಚಿನ್ನ ದರ ಕೊಂಚ ಏರಿಕೆ; ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ದರ?

ಇದನ್ನೂ ಓದಿ: Gold Silver Price: ಮಹಿಳೆಯರಿಗೆ ಇಂದು ಶುಭ ಶುಕ್ರವಾರ; ಬೆಂಗಳೂರಿನಲ್ಲಿ ಇಳಿಕೆಯತ್ತ ಚಿನ್ನದ ದರ!