Gold/Silver Prices: ಚಿನ್ನ ದರ ಕೊಂಚ ಏರಿಕೆ; ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ದರ?

Gold Silver Rates: ಚಿನ್ನ, ಬೆಳ್ಳಿ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ.‌ಆಭರಣ ಪ್ರಿಯರಂತೂ ಚಿನ್ನಕ್ಕೆ ಮುಗಿ ಬೀಳುತ್ತಾರೆ. ಕೊಡಿಸುವವರು ತಲೆ ಕೆಡಿಸಿಕೊಳ್ಳಬೇಕೆ ವಿನಾಃ ಕೊಳ್ಳುವವರಿಗೆ ತಲೆಬಿಸಿ ಏಕೆ.

Gold/Silver Prices: ಚಿನ್ನ ದರ ಕೊಂಚ ಏರಿಕೆ; ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ದರ?
ಸಾಂದರ್ಭಿಕ ಚಿತ್ರ
Follow us
shruti hegde
|

Updated on:Feb 21, 2021 | 10:16 AM

ಬೆಂಗಳೂರು: ಚಿನ್ನ, ಬೆಳ್ಳಿ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ.‌ಆಭರಣ ಪ್ರಿಯರಂತೂ ಚಿನ್ನಕ್ಕೆ ಮುಗಿಬೀಳುತ್ತಾರೆ. ಕೊಡಿಸುವವರು ತಲೆ ಕೆಡಿಸಿಕೊಳ್ಳಬೇಕೆ ವಿನಾಃ ಕೊಳ್ಳುವವರಿಗೆ ತಲೆಬಿಸಿ ಏಕೆ? ಹಾಗಿದ್ದಾಗ ಚಿನ್ನ ಬೆಳ್ಳಿ ದರ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ. 22 ಕ್ಯಾರೆಟ್ ಚಿನ್ನ ಬೆಲೆ ಇಂದು 10 ಗ್ರಾಂಗೆ ₹ ₹43,250 ಇದೆ. ಹಾಗೂ 1ಕೆಜಿ ಬೆಳ್ಳಿದರ ₹ 68,700 ಇದೆ.

ಚಿನ್ನ ಮತ್ತು ಬೆಳ್ಳಿಯ ದರ ಹಾವು ಏಣಿ ಆಡುವುದು ಸಾಮಾನ್ಯ. ದಿನದಿಂದ ದಿನಕ್ಕೆ ದರದಲ್ಲಿ ಏರಿಕೆ ಅಥವಾ ಇಳಿಕೆಯತ್ತ ಸಾಗುತ್ತವೆ. ಹೀಗಾಗಿ ಚಿನ್ನ ಖರೀದಿಸಬಹುದೇ? ಅಥವಾ ಹೂಡಿಕೆ ಮಾಡಬಹುದೇ? ಎಂಬ ಗೊಂದಲಕ್ಕೆ ಜನ ಒಳಗಾಗಿದ್ದಾರೆ. ದರ ಕಡಿಮೆ ಇದ್ದಾಗ ಚಿನ್ನ ಖರೀದಿಸುವುದು ಉತ್ತಮ. ಅದೆಷ್ಟೋ ಕಷ್ಟ ಕಾಲದಲ್ಲಿ ಚಿನ್ನ ಸಹಾಯಕ್ಕೆ ಬರುವುದು. ಚಿನ್ನ ಮೇಲೆ ಹೂಡಿಕೆ ಮಾಡಿ, ಕಷ್ಟ ಕಾಲದಲ್ಲಿ ಬಳಸಿಕೊಳ್ಳುವವರು ಈಗಲೇ ಯೋಚಿಸಿ.

ಪ್ರಿಯ ಆಭರಣ ಚಿನ್ನದ ಹೊಳಪಿಗೆ ಹೆಣ್ಣು ಅಂದವಾಗಿಯೇ ಕಾಣಿಸುತ್ತಾಳೆ. ಹಾಗಾಗಿಯೇ ಮಹಿಳೆಯರಿಗೆ ಚಿನ್ನ ಎಂದರೆ ಅಷ್ಟಿಷ್ಟ. ಮದುವೆ ಸಮಾರಂಭಗಳಿಗೆ ಚಿನ್ನ ಖರೀದಿಸಿ ಅಲಂಕಾರದ ಜೊತೆ ಮೆರಗು ತರುವುದರ ಜೊತೆ ಚಂದ ಎನ್ನುವ ಪ್ರಶ್ನೆ ಬಂದಾಗ ಹೆಣ್ಣು ಚಿನ್ನವನ್ನೇ ಮೊದಲು ಆಯ್ಕೆ ಮಾಡಿಕೊಳ್ಳುತ್ತಾಳೆ. ಹಾಗಿದ್ದಾಗ ಕಡಿಮೆ ದರ ಚಿನ್ನಕ್ಕಿದ್ದಾಗ ಕೊಂಡು ಕೊಳ್ಳದೇ ಇರಲು ಸಾಧ್ಯವೆ? ನೀವು ಕೂಡಿಟ್ಟ ಹಣಕ್ಕೆ ಚಿನ್ನ ಖರೀದಿಸಬಹುದು ಎಂದು ಅನಿಸಿದರೆ, ಇಂದೇ ಖರೀದಿಸಿ ಬಿಡಿ.

ಚಿನ್ನ ಕೊಡಿಸಲು ಕಾಯುತ್ತಿದ್ದೀರಾ? ಗಂಡ ಹೆಂಡತಿಗೆ, ಪ್ರೇಮಿ ಪ್ರೇಯಸಿಗೆ ಹೀಗೆ ಅನೇಕರು ಚಿನ್ನವನ್ನು ಉಡುಗೊರೆ ನೀಡಲು ಯೋಚಿಸಿತ್ತಿರುತ್ತಾರೆ. ಹಾಗಿದ್ದಾಗ ಚಿನ್ನದ ದರ ಇಳಿಕೆಯತ್ತ ಮುಖ ಮಾಡಿದಾಗಲೇ ಚಿನ್ನ ಕೊಂಡುಕೊಳ್ಳುವುದರ ಕುರಿತು ಯೋಚಿಸಿ. ಚಿನ್ನ ಕೊಳ್ಳಲು ಇದು ಉತ್ತಮ ಸಮಯ.

ಚಿನ್ನದ ದರ ಒಂದು ದಿನ ಏರಿದ್ದರೆ ಅದರ ಮರುದಿನವೇ ಇಳಿಯ ಬಹುದು. ಹೀಗಾಗಿ ಬೆಲೆ ಏರಿದ್ದಾಗ ನಾಳೆ ಇಳಿಯಬಹುದು ಎಂಬ ಆಸೆಯ ಜೊತೆ ನಿರೀಕ್ಷೆ ಇರುವುದು ಸಹಜ. ಹಾಗಿದ್ದಾಗ ಇಂದು ಇಳಿಕೆಯತ್ತ ಮುಖ ಮಾಡಿದ ಚಿನ್ನ ನಾಳೆ ದರದಲ್ಲಿ ಏರಿಕೆಯತ್ತ ತಿರುಗಬಹುದು. ಹಾಗಾಗಿ ನೀವು ಕೂಡಿಟ್ಟ ಹಣದಲ್ಲಿ ಚಿನ್ನ ಖರೀದಿಸಬಹುದು ಎಂದಿದ್ದರೆ ಇಂದೇ ಚಿನ್ನ ಖರೀದಿಸಿ. ಚಿನ್ನ ದರ ನಿನ್ನೆಗಿಂತ ಇಂದು ಸ್ವಲ್ಪ ಏರಿಕೆ ಕಂಡಿದೆ.

ಗ್ರಾಂ              22 ಕ್ಯಾರೆಟ್ ಚಿನ್ನ (ಇಂದು)               22ಕ್ಯಾರೆಟ್ ಚಿನ್ನ (ನಿನ್ನೆ) 1ಗ್ರಾಂ                  ₹4,325                                              ₹4,300 8ಗ್ರಾಂ                  ₹34,600                                          ₹34,400 10ಗ್ರಾಂ                ₹43,250                                           ₹43,000 100 ಗ್ರಾಂ             ₹4,32,500                                        ₹4,30,00

ಗ್ರಾಂ              24 ಕ್ಯಾರೆಟ್ ಚಿನ್ನ (ಇಂದು)                    24ಕ್ಯಾರೆಟ್ ಚಿನ್ನ (ನಿನ್ನೆ) 1 ಗ್ರಾಂ                ₹4,718                                                        ₹4,690 8ಗ್ರಾಂ               ₹37,744                                                       ₹37,520 10 ಗ್ರಾಂ             ₹47,180                                                     ₹ 46,900 100 ಗ್ರಾಂ          ₹4,71,800                                                 ₹4,69,000

ಭಾರತದದಲ್ಲಿ ಇಂದಿನ ಬೆಳ್ಳಿ ದರ ಬೆಳ್ಳಿ ದರವನ್ನು ನಿನ್ನಗೆ ಹೋಲಿಸಿದರೆ ದೈನಂದಿನ ಬದಲಾವಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಶುಭ ಸಮಾರಂಭಗಳಿಗೆ, ವಿಶೇಷ ಪೂಜೆಗೆ, ಹರಕೆ, ಪೂಜೆ ಪುನಸ್ಕಾರಕ್ಕೆ ಬೆಳ್ಳಿ ಕೊಳ್ಳಬೇಕೆಂದು ಯೋಚಿಸಿದ್ದರೆ, ಬೆಳ್ಳಿ ಕೊಳ್ಳಲು ಉತ್ತಮ ಸಮಯವಿದು.

ಗ್ರಾಂ              ಇಂದಿನ ಬೆಳ್ಳಿ ದರ                      ನಿನ್ನೆ ಬೆಳ್ಳಿ ದರ 1 ಗ್ರಾಂ               ₹68.70                                       ₹68.70 8 ಗ್ರಾಂ               ₹549                                           ₹549 10 ಗ್ರಾಂ             ₹687                                            ₹687 100 ಗ್ರಾಂ           ₹6,870                                       ₹6.870 1ಕೆಜಿ                   ₹68,700                                     ₹68,700

ಇದನ್ನೂ ಓದಿ: Gold/Silver Prices: ಇಳಿಕೆಯತ್ತ ಚಿನ್ನದ ದರ; ಆಭರಣ ಕೊಳ್ಳಲು ಸುಸಂದರ್ಭ

ಇದನ್ನೂ ಓದಿ: Gold Price: ಗ್ರಾಹಕರಿಗೆ ಇಂದು ಖುಷಿ ಸುದ್ದಿ; ಚಿನ್ನದ ದರದಲ್ಲಿ ಇಳಿಕೆ

Published On - 10:14 am, Sun, 21 February 21