State Level Competition: ರಾಜ್ಯ ಮಟ್ಟಕ್ಕೆ ಧಾರವಾಡ ಜಿಲ್ಲೆಯ 56 ಸ್ಕೇಟರ್ಸ್ ಆಯ್ಕೆ

State Level Competition: ರಾಜ್ಯ ಮಟ್ಟಕ್ಕೆ ಧಾರವಾಡ ಜಿಲ್ಲೆಯ 56 ಸ್ಕೇಟರ್ಸ್ ಆಯ್ಕೆ
ಧಾರವಾಡದಿಂದ ಆಯ್ಕೆಯಾಗಿರುವ ಸ್ಕೇಟರ್ಸ್

Skaters: ಧಾರವಾಡದಿಂದ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ಮತ್ತು ರೋಲರ್ ಸ್ಕೇಟಿಂಗ್ ಅಕಾಡೆಮಿ ಆಶ್ರಯದಲ್ಲಿ ಆಯೋಜಿಸಿದ್ದ ರಸ್ತೆ ಮತ್ತು ರಿಂಕ್ ಸ್ಪರ್ಧೆಗಳ ವಿವಿಧ ವಿಭಾಗಗಳಲ್ಲಿ ಮಾರ್ಚ್ 4 ರಿಂದ ಮೈಸೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಕೇಟಿಂಗ್ ಸ್ಪರ್ಧೆಗೆ​ ಆಯ್ಕೆಯಾಗಿದ್ದಾರೆ.

sandhya thejappa

|

Feb 21, 2021 | 11:45 AM

ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ಇತ್ತೀಚಿನ ದಿನಗಳಲ್ಲಿ ಸ್ಕೇಟಿಂಗ್ ಕ್ರೇಜ್ ಹೆಚ್ಚಾಗುತ್ತಿದೆ. ಕ್ರಿಕೆಟ್, ವಾಲಿಬಾಲ್, ಬ್ಯಾಡ್ಮಿಂಟನ್ನಂಥ ಕ್ರೀಡೆಗಷ್ಟೇ ಗಮನ ನೀಡುತ್ತಿದ್ದ ಪಾಲಕರು ಇದೀಗ ಸ್ಕೇಟಿಂಗ್ ಆಟದತ್ತಲೂ ಗಮನ ಹರಿಸಿದ್ದಾರೆ. ಇದರಿಂದಾಗಿ ನಗರದ ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದ ಬಳಿಯ ಸ್ಕೇಟಿಂಗ್ ಮೈದಾನದಲ್ಲಿ ನಿತ್ಯವೂ ನೂರಾರು ಮಕ್ಕಳು ಸ್ಕೇಟಿಂಗ್ ಅಭ್ಯಾಸದಲ್ಲಿ ನಿರತರಾಗಿರುತ್ತಾರೆ. ಇಂಥ ಮಕ್ಕಳ ಪೈಕಿ ಇದೀಗ ರಾಜ್ಯಮಟ್ಟದ ಪಂದ್ಯಾವಳಿಗೆ ಜಿಲ್ಲೆಯಿಂದ 56 ಸ್ಕೇಟರ್ಸ್ ಆಯ್ಕೆಯಾಗಿದ್ದಾರೆ.

ಜಿಲ್ಲೆಯ ಆರ್.ಎನ್.ಶೆಟ್ಟಿ ಕ್ರೀಡಾಂಗಣದ ಬಳಿಯ ಸ್ಕೇಟಿಂಗ್ ಮೈದಾನದಲ್ಲಿ ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆ ಹಾಗೂ ರಾಜ್ಯ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಧಾರವಾಡದ 29 ಹಾಗೂ ಹುಬ್ಬಳ್ಳಿಯ 27 ಸೇರಿದಂತೆ ಒಟ್ಟು 56 ಸ್ಕೇಟರ್ಸ್​ಗಳು ರಾಜ್ಯಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ಮತ್ತು ರೋಲರ್ ಸ್ಕೇಟಿಂಗ್ ಅಕಾಡೆಮಿ ಆಶ್ರಯದಲ್ಲಿ ಆಯೋಜಿಸಿದ್ದ ರಸ್ತೆ ಮತ್ತು ರಿಂಕ್ ಸ್ಪರ್ಧೆಗಳ ವಿವಿಧ ವಿಭಾಗಗಳಲ್ಲಿ ಮಾರ್ಚ್ 4 ರಿಂದ ಮೈಸೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಕೇಟಿಂಗ್ ಸ್ಪರ್ಧೆಗೆ ಸ್ಕೇಟರ್ಸ್​ ಆಯ್ಕೆ ಮಾಡಲಾಯಿತು.

ಕ್ವಾಡ್ ವಿಭಾಗದಲ್ಲಿ ಆಯ್ಕೆ ಬಾಲಕರ 5-7 ವಯೋಮಿತಿಯಲ್ಲಿ ಅನುರಾಗ ಶಿಂಧೆ, ಗೌತಮ ಕಿರಣ, ಚಿರಾಗ ಅಂಗಡಿ ಮತ್ತು ಬಾಲಕಿಯರಲ್ಲಿ ಆಧ್ಯಾ ಕೌಲಗುಡ್ಡ, 7-9 ವಯೋಮಿತಿಯ ಬಾಲಕರಲ್ಲಿ ವೀರೇನ್ ಕರೋಲೆ, ನಿಶಾಂತ ಮರಡಿ, ತನ್ಮಯ ಕೆಂಬಾವಿ ಜೊತೆಗೆ ಬಾಲಕಿಯರಲ್ಲಿ ತಪಸ್ಯಾ ಕೆಂಬಾವಿ, ಆತಿಕಾ ನಧಾಫ, ಐಶ್ವರ್ಯ ಎ.ಎಂ. ಆಯ್ಕೆಯಾಗಿದ್ದಾರೆ. 9-11 ವಯೋಮಿತಿಯ ಬಾಲಕರಲ್ಲಿ ಹನುಮಂತ ಕದಂ, ಪ್ರಜ್ವಲ ಕೋಟಿಯಾಲ, ಅಕ್ಷಯ ಎಂ ಇನ್ನೂ ಬಾಲಕಿಯರಲ್ಲಿ ಪ್ರಕೃತಿ ಪಾಲ, ಸ್ಪಂದನ ಹಿರೇಮಠ, ಲಕ್ಷ್ಮಿ ಕೇಲೂರ ಆಯ್ಕೆಯಾದರೇ 11-14 ವಯೋಮಿತಿಯ ಬಾಲಕರಲ್ಲಿ ಸ್ವರೂಪ ದೊಡವಾಡ, ಪ್ರೀತಂ ಹಿರೇಮಠ, ಆರ್.ಎನ್. ಕುರಡಿಕೇರಿ ಹಾಗೂ ಬಾಲಕಿಯರಲ್ಲಿ ಓಚಲ್ ನಲವಾಡಿ, ಸುಜನ್ಯ ಶೇಷಗಿರಿ ಆಯ್ಕೆಯಾಗಿದ್ದಾರೆ.

14-17 ವಯೋಮಿತಿಯ ಬಾಲಕರಲ್ಲಿ ಮೌಶೀನ ರಾಜಾ ಹೆಬ್ಬಳ್ಳಿ, ಆದಿತ್ಯಾ ಅಮರಶೆಟ್ಟಿ, ಸತೀಶ ಶೇಷಗಿರಿ ಮತ್ತು ಬಾಲಕಿಯರ ವಿಭಾಗದಲ್ಲಿ ತ್ರಿಷಾ ಜಡಲಾ, ಸಾಕ್ಷಿ ಕಡ್ಡಿ ಆಯ್ಕೆಯಾದರೆ, 17 ವಯೋಮಿತಿಯ ಬಾಲಕರ ವಿಭಾಗದಲ್ಲಿ ಅಂಕುಶ ಎರೆಸೀಮಿ ಹಾಗೂ ಜನೀತ ಕಾಮತ, ಬಾಲಕಿಯರ ವಿಭಾಗದಲ್ಲಿ ನಯನಾವತಿ ನಾಶಿಪುಡಿ ಆಯ್ಕೆಯಾದರು.

ಸ್ಕೇಟರ್ಸ್​ನಲ್ಲಿ ಭಾಗಿಯಾಗಿರುವ ಮಕ್ಕಳು

ಇನ್ನೊಂದು ವಿಭಾಗದಲ್ಲಿ 5-7 ವಯೋಮಿತಿಯ ಬಾಲಕರಲ್ಲಿ ಶಮಂತಕ ಕೆ.ಜಿ, ಕುಶಾಲ ಹಿರೇಮಠ, ಶ್ರೀನೀತ ನಾಯ್ಡು ಮತ್ತು ಬಾಲಕಿಯರಲ್ಲಿ ಮಾಹಿ ಪಿಂಜಾರ, 7-9 ವಯೋಮಿತಿಯ ಬಾಲಕರಲ್ಲಿ ಪ್ರಾಜೀತ ಪಿಸೆ, ಮೊಹಮ್ಮದ್ ಇಸ್ಮಾಯಿಲ್, ಎರಿಕ್ ಬೇಸ್ಮೆ , ಬಾಲಕಿಯರಲ್ಲಿ ರಿತಕೃತಿ ಜಾಧವ, ಅನನ್ಯ ಕುರಿ, ದೃತಿ ಬಸಣ್ಣವರ ಆಯ್ಕೆಯಾಗಿದ್ದಾರೆ.

9-11 ಬಾಲಕರಲ್ಲಿ ನಿಖಿಲ ನಾಯ್ಕ, ಓಂ ಕಾರಡಗಿ, ಸೈಯದ ಮೈಸೂರು, ಬಾಲಕಿಯರಲ್ಲಿ ಬೃಂದಾ ಮೊರಲ್, ಇಷಾನಿ ಹುನಗುಂದ ಹಾಗೂ ಸ್ತುತಿ ಕುಲಕರ್ಣಿ ಆಯ್ಕೆಯಾದರು. 11-14 ಬಾಲಕರಲ್ಲಿ ಆದಿಸ್ಮರಣ ಬಸಣ್ಣವರ, ಇಬ್ರಾಹಿಮ್ ದಲಾಯತ್, ಸೋನು ಚೋಪ್ರಾ, ಬಾಲಕಿಯರಲ್ಲಿ ಸಾನ್ವಿ ಸಾಂಬ್ರಾನಿ, ನಂದಿನಿ ಗುಪ್ತಾ ಹಾಗೂ ದಿನಿ ಪಾಟೀಲ್ ಆಯ್ಕೆಯಾದರು. 14-17 ಬಾಲಕರ ವಿಭಾಗದಲ್ಲಿ ಪ್ರಫುಲ್ ಕಾಳೆಸಿಂಗೆ, ಅರಮಾನ ಮಲ್ಲಿಗೆ, ಸೃಜನ ಪಂಚನ್ನವರ ಬಾಲಕಿಯರಲ್ಲಿ ಭೂಮಿ ಪಾಟೀಲ್ ಆಯ್ಕೆಯಾದರು.

200 ಮೀಟರ್ ಮೈದಾನದ ಭರವಸೆ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಕೈಗಾರಿಕಾ ಪ್ರದೇಶದ ಐಐಟಿ ರಸ್ತೆಯಲ್ಲಿ ನಡೆದ ರೋಡ್ ಇವೆಂಟ್ಗೆ ಉದ್ಯಮಿ ರಾಜು ಪಾಟೀಲ ಚಾಲನೆ ನೀಡಿದರು. ಜೊತೆಗೆ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಉದ್ಯಾನವನಕ್ಕೆ ಮೀಸಲು ಜಾಗದಲ್ಲಿ 200 ಮೀಟರ್ ಸ್ಕೇಟಿಂಗ್ ಮೈದಾನ ಮಾಡಲು ತಮ್ಮ ಸಹಕಾರ ಇದ್ದು ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್​ರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ: Jaffer Controversy: ಉತ್ತರಾಖಂಡ ಕೋಚ್​ ಹುದ್ದೆಗೆ ಜಾಫರ್ ರಾಜೀನಾಮೆ ಸಲ್ಲಿಸಿದ ನಂತರ ಉಂಟಾಗಿರುವ ಸನ್ನಿವೇಶ ಸಭ್ಯರ ಕ್ರೀಡೆಗೆ ಹೊಸದು

ಇದನ್ನೂ ಓದಿ: 400 ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಒಂದೇ ಕಡೆ ಸಿಗುವ ಕರ್ನಾಟಕದ ಮೊದಲ ಥೀಮ್‌ ಪಾರ್ಕ್‌!

Follow us on

Related Stories

Most Read Stories

Click on your DTH Provider to Add TV9 Kannada